ಮನೋರಂಜನೆ

ಸಹ ಆಟಗಾರರ ತಾರತಮ್ಯ ನೀತಿ ಬಹಿರಂಗಪಡಿಸುವೆ: ಸೈಯದ್ ಕಿರ್ಮಾನಿ

Pinterest LinkedIn Tumblr

SYED_KIRMANI

ಬೆಂಗಳೂರು: ‘‘ಅತೀ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ತನ್ನ ಆತ್ಮಚರಿತ್ರೆಯಲ್ಲಿ ತಾನು ಕ್ರಿಕೆಟ್ ಆಡುತ್ತಿದ್ದ ದಿನಗಳಲ್ಲಿ ಸಹ ಆಟಗಾರರಿಂದ ಎದುರಿಸಿರುವ ತಾರತಮ್ಯ ನೀತಿಯನ್ನು ಬಹಿರಂಗಪಡಿಸುವೆನು’’ಎಂದು ಭಾರತದ ಮಾಜಿ ವಿಕೆಟ್‌ಕೀಪರ್ ಸೈಯದ್ ಕಿರ್ಮಾನಿ ಹೇಳಿದ್ದಾರೆ.

‘‘ನಾನು ಅಹಂಗೆ ಬಲಿಪಶುವಾಗಿದ್ದೇನೆ. ನನ್ನೊಂದಿಗೆ ಆಡಿರುವ ಆಟಗಾರರೆಲ್ಲರೂ ಆಯ್ಕೆಗಾರರಾಗಿದ್ದಾರೆ. ತಾನು 1986 ರಿಂದ 1993ರ ತನಕ ದೇಶಿಯ ಟೂರ್ನಿಗಳಲ್ಲಿ ಆಡಿ ಉತ್ತಮ ಪ್ರದರ್ಶನ ನೀಡಿದ್ದೆ. ತನಗೆ ಫಿಟ್‌ನೆಸ್ ಸಾಬೀತುಪಡಿಸುವ ಪ್ರಮೇಯ ಬಂದಿರಲಿಲ್ಲ. ತಾನು ಯಾವುದೇ ವಿವಾದದಲ್ಲೂ ಸಿಲುಕಿರಲಿಲ್ಲ. ಆದಾಗ್ಯೂ ತನ್ನನ್ನು ಯಾವ ಹುದ್ದೆಗೂ ಆಯ್ಕೆ ಮಾಡಿಲ್ಲ. ಈ ಎಲ್ಲ ವಿಷಯವೂ ತನ್ನ ಆತ್ಮಚರಿತ್ರೆ ಪುಸ್ತಕದಲ್ಲಿದೆ’’ ಎಂದು ಕಿರ್ಮಾನಿ ಹೇಳಿದರು.

‘‘2011ರ ವಿಶ್ವಕಪ್‌ನ ವೇಳೆ ಪುಸ್ತಕ ಬಿಡುಗಡೆ ಮಾಡಲು ಬಯಸಿದ್ದೆ. ಆದರೆ, ಅದು ಸಾಧ್ಯವಾಗಿರಲಿಲ್ಲ. ಇದೀಗ ಎಲ್ಲದ್ದಕ್ಕೂ ಸಮಯ ಕೂಡಿ ಬಂದಿದೆ. ಇತ್ತೀಚೆಗಷ್ಟೇ ಕರ್ನಲ್ ಸಿಕೆ ನಾಯ್ದು ಜೀವಮಾನ ಸಾಧನಾ ಪ್ರಶಸ್ತಿಗೂ ತನ್ನ ಹೆಸರು ನಾಮನಿರ್ದೇಶನವಾಗಿದೆ. ತನ್ನ ಆತ್ಮ ಚರಿತ್ರೆಯ ಪುಸ್ತಕದ ಹೆಸರು ಬಹಿರಂಗಪಡಿಸಲಾರೆ. ಪುಸ್ತಕದ ಹೆಸರು ಆಕರ್ಷಕವಾಗಿದೆ. ಹೆಸರು ವಿವಾದಾತ್ಮಕವಾಗಿಲ್ಲ’’ಎಂದು ಕಿರ್ಮಾನಿ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ನಿರ್ದೇಶಕನಾಗಿ ಮುಂದುವರಿಯಲು ಸೂಚನೆ ನೀಡದೇ ಇರುವುದಕ್ಕೆ ಕಿರ್ಮಾನಿ ಬೇಸರ ವ್ಯಕ್ತಪಡಿಸಿದರು.

‘‘ತಾನು ಆರು ವರ್ಷಗಳ ಕಾಲ ಕೆಎಸ್‌ಸಿಎ ನಿರ್ದೇಶಕನಾಗಿದ್ದೆ. ಸಂಸ್ಥೆ ತನಗೆ ಧನ್ಯವಾದ ಹೇಳಿದೆ. ಇದರರ್ಥ ಏನು, ತಾನು ಏನು ಕೆಡುಕು ಮಾಡಿದ್ದೇನೆ. ಕುರ್ಚಿ ಬಲ ಹಾಗೂ ಧನ ಬಲ ವ್ಯಕ್ತಿ ಬಾಯಿಂದ ಹೀಗೆಲ್ಲಾ ಮಾತನಾಡಿಸುತ್ತದೆ’’ ಎಂದು ಕಿರ್ಮಾನಿ ತಿಳಿಸಿದ್ದಾರೆ.

‘‘ಗರ್ವ ಎಂಬ ಪದ ಜಾಗತಿಕವಾಗಿ ಒಂದು ಸಮಸ್ಯೆಯಾಗಿದೆ. ಎಲ್ಲ ಸಮಸ್ಯೆಗೆ ಇದುವೇ ಕಾರಣ. ನಮ್ಮ ಜನರಿಗೆ ನಾವು ಏಕೆ ಗೌರವ ನೀಡುತ್ತಿಲ್ಲ. ಆತ ತನಗಿಂತ ಹೆಚ್ಚು ಸಂಪಾದನೆ ಮಾಡುತ್ತಾನೆ ಎಂಬ ಮತ್ಸರವೇ? ವ್ಯಕ್ತಿಯ ಪ್ರತಿಭೆಯನ್ನು ಶ್ಲಾಘಿಸುವ ಬದಲಿಗೆ ಆತನನ್ನು ತುಳಿಯಲಾಗುತ್ತದೆ. ಇದು ನೋಡಲು ಚೆನ್ನಾಗಿರುವುದಿಲ್ಲ. ತಾನು ಕೋಚ್ ಸ್ಥಾನಕ್ಕಾಗಿ ಹಸಿದಿಲ್ಲ. ತನಗೆ ಕ್ರಿಕೆಟ್‌ನಲ್ಲಿ ಸೇವೆ ಸಲ್ಲಿಸಲು ಸರಿಯಾದ ಅವಕಾಶ ನೀಡಲಿಲ್ಲ ಎಂಬ ಬೇಸರವಿದೆ’’ಎಂದು ಕಿರ್ಮಾನಿ ಹೇಳಿದ್ದಾರೆ.

Write A Comment