ಕರ್ನಾಟಕ

ಜೀವರಕ್ಷಕ ಔಷಧಿಗಳ ಹೊಸ ಪಟ್ಟಿ ಬಿಡುಗಡೆ

Pinterest LinkedIn Tumblr

patiನವದೆಹಲಿ, ಡಿ.25-ಕ್ಷಯ, ರಕ್ತದೊತ್ತಡ ಸೇರಿದಂತೆ ಇತರೆ ರೋಗಗಳ ಔಷಧಿಗಳನ್ನು ರಾಷ್ಟ್ರೀಯ ಜೀವರಕ್ಷಕ ಔಷಧಿಗಳ ಪಟ್ಟಿಗೆ (ಎನ್‌ಎಲ್‌ಇಎಂ)ಸೇರಿಸಲಾಗಿದೆ.

ಈಗಾಗಲೇ  ಕ್ಯಾನ್ಸರ್, ಎಚ್‌ಐವಿ ಸೇರಿದಂತೆ ಹಲವು ಗಂಭೀರ ಕಾಯಿಲೆಗಳಿಗೆ ಔಷಧಿಗಳನ್ನು ಅಗ್ಗದ ಬೆಲೆಯಲ್ಲಿ ಜನಸಾಮಾನ್ಯರಿಗೆ ಸಿಗುವಂತಾಗಲು ಕೇಂದ್ರ ಸರ್ಕಾರ 1996ರಲ್ಲಿ ಕ್ರಮ ಕೈಗೊಂಡಿತ್ತು.

ಜನಸಾಮಾನ್ಯರ ಆರೋಗ್ಯ ಸುಧಾರಣೆಗೆ ಅವಶ್ಯಕವಾದ ಈ ಔಷಧಗಳನ್ನು ಕಡಿಮೆ ದರದಲ್ಲಿ ಎಲ್ಲೆಡೆ ಸಿಗುವಂತಾಗಬೇಕು. ಈ ಧ್ಯೇಯದೊಂದಿಗೆ ನಿನ್ನೆ ಆರೋಗ್ಯ ಇಲಾಖೆ ಮತ್ತಷ್ಟು ಔಷಧಗಳನ್ನು ಎನ್‌ಎಲ್‌ಇಎಂ ಪಟ್ಟಿಗೆ ಸೇರ್ಪಡೆ ಮಾಡಿದೆ.

Write A Comment