
ಮುಂಬೈ,ಡಿ.25-ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಒಂದು ರಾಷ್ಟ್ರ ಕಾರ್ಯ ಎಂದು ಶಿವಸೇನೆ ಹೇಳಿದೆ. ಶ್ರೀ ರಾಮನ ಆಶೀರ್ವಾದದಿಂದ ಅಧಿಕಾರಕ್ಕೆ ಬಂದವರು ಕೂಡಲೇ ದೇಗುಲ ನಿರ್ಮಾಣದ ದಿನಾಂಕವನ್ನು ಘೋಶಿಸಬೇಕೆಂದು ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಕೇಂದ್ರದ ಬಿಜೆಪಿ ಸರ್ಕಾರವನ್ನು ಒತ್ತಾಯಿಸಿದೆ.
ಶ್ರೀರಾಮನ ಆದರ್ಶ, ನಂಬಿಕೆಯನ್ನು ಹೊಂದಿ ಅದನ್ನೆ ಬಳಸಿಕೊಂಡು ಜಯಗಳಿಸಿದ್ದಾರೆ. ಇಂದು ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿಯನ್ನು ಟೆಂಟ್ನಲ್ಲಿ ಇಟ್ಟಿರುವುದು ನೋಡಿ ಅವರಿಗೆ ನಾಚಿಕೆಯಾಗಬೇಕೆಂದು ಟೀಕಿಸಿದೆ.
ಶ್ರೀರಾಮನ ಆಶೀರ್ವಾದದಿಂದಲೆ ಇಂದು ಅಧಿಕಾರದ ಗದ್ದುಗೆಯಲ್ಲಿರುವ ಪ್ರಮುಖರು ತಾವು ಅಧಿಕಾರ ತ್ಯಜಿಸುವ ವೇಳೆಗೆ ಮಂದಿರ ನಿರ್ಮಾಣ ಪೂರ್ಣಗೊಳಿಸುವ ಇಚ್ಚಾಶಕ್ತಿ ಒಂದಲಿ. ಕೂಡಲೆ ದಿನಾಂಕ ಘೋಷಣೆ ಮಾಡಬೇಕೆಂದು ಶಿವಸೇನೆ ಒತ್ತಾಯಿಸಿದೆ.