ಅಂತರಾಷ್ಟ್ರೀಯ

ಅನಿಲ ಲಾರಿ ಸ್ಪೋಟ, 100 ಕ್ಕೂ ಹೆಚ್ಚು ಮಂದಿ ಸಜೀವ ದಹನ

Pinterest LinkedIn Tumblr

nigeria_web_blastಅಬುಜಾ(ನೈಜಿರಿಯಾ): ಅನಿಲ ತುಂಬಿದ ಟ್ಯಾಂಕರ್ ಲಾರಿಯೊಂದು ಕೈಗಾರಿಕ ಪ್ರದೇಶದಲ್ಲಿ ಸ್ಪೋಟಿಸಿದ ಪರಿಣಾಮ ಖರೀದಿಗಾಗಿ ಕ್ಯೂನಲ್ಲಿ ನಿಂತಿದ್ದ 100 ಕ್ಕೂ ಹೆಚ್ಚು ಜನ ಸಾವನ್ನಪ್ಪಿರುವ ಘಟನೆ 11 ಗಂಟೆ ಸುಮಾರಿಗೆ ನೈಜೀರಿಯಾದ ನೆವಿ ಎನ್ನುವಲ್ಲಿ ನಡೆದಿದೆ.

ಕ್ರಿಸ್​ವುಸ್ ಆಚರಣೆ ತಯಾರಿಗೆ ಜನ ಸಾಮಾನ್ಯರು ಸರತಿ ಸಾಲಿನಲ್ಲಿ ನಿಂತು ಅನಿಲ ತುಂಬಿಸಿಕೊಳ್ಳುವಾಗ ಅನಿಲ ಸೋರಿಕೆಯಿಂದ ಘಟನೆ ಸಂಭವಿಸಿದೆ ಎಂದು ಪ್ರಾಥಮಿಕ ವರದಿಯಲ್ಲಿ ಗೊತ್ತಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

Write A Comment