ರಾಷ್ಟ್ರೀಯ

ಮೋದಿ ಪಾಕ್‌ ಭೇಟಿ: ‘ಮುತ್ಸದ್ದಿತನ’ದ ನಡೆ ಎಂದ ಸುಷ್ಮಾ

Pinterest LinkedIn Tumblr

sufffನವದೆಹಲಿ (ಪಿಟಿಐ): ಪಾಕಿಸ್ತಾನಕ್ಕೆ ದಿಢೀರ್ ಭೇಟಿ ನೀಡಲು ನಿರ್ಧರಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನು ‘ಮುತ್ಸದ್ದಿತನ’ದ ವರ್ತನೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಶ್ಲಾಘಿಸಿದ್ದಾರೆ.

ಅಲ್ಲದೇ, ನೆರೆಯ ರಾಷ್ಟ್ರಗಳೊಂದಿಗೆ ಹೀಗೆ ಆತ್ಮೀಯ ಸಂಬಂಧವನ್ನು ಇರಿಸಿಕೊಳ್ಳಬೇಕು ಎಂದೂ ಅಭಿಪ್ರಾಯ ಪಟ್ಟಿದ್ದಾರೆ.

‘ಪ್ರಧಾನಿಯದ್ದು ಮುತ್ಸದ್ದಿತನದ ನಡೆ. ನೆರೆಹೊರೆಯವರ ಜೊತೆಗಿನ ಸಂಬಂಧ ಹೀಗೇ ಇರಬೇಕು’ ಎಂದು ಸ್ವರಾಜ್ ಅವರು ಟ್ವೀಟ್ ಮಾಡಿದ್ದಾರೆ.

Write A Comment