ಕನ್ನಡ ವಾರ್ತೆಗಳು

ಅವೈಜ್ಞಾನಿಕ ಟೋಲ್‌ಗೇಟ್ ಆರೋಪ – ಸುಪ್ರೀಂ ಕೋರ್ಟ್‌ ಗಮನಕ್ಕೆ :ಶಾಸಕ ಬಾವ

Pinterest LinkedIn Tumblr

tol;gate_moyidin_bava

ಮಂಗಳೂರು, ಡಿ.24: ಸುರತ್ಕಲ್‌ನ ಅವೈಜ್ಞಾನಿಕ ಟೋಲ್‌ಗೇಟ್ ನಿರ್ಮಾಣಕ್ಕೆ ಸಂಬಂಧಿಸಿ ಕಾನೂನು ಹೋರಾಟವನ್ನು ಮತ್ತಷ್ಟು ಮುಂದುವರಿಸಲು ನಿರ್ಧರಿಸಲಾಗಿದ್ದು, ಸುಪ್ರಿಂಕೋರ್ಟ್‌ನಲ್ಲಿ ಈ ಬಗ್ಗೆ ಪ್ರಶ್ನಿಸಲಾಗುವುದು ಎಂದು ಶಾಸಕ ಬಿ.ಎ. ಮೊಯ್ದಿನ್ ಬಾವ ತಿಳಿಸಿದ್ದಾರೆ.

ಬುಧವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆ ಕಾಮಗಾರಿ ಪೂರ್ಣಗೊಳಿಸದೆ, ಟೋಲ್ ಸಂಗ್ರಹ ಮಾಡುವುದು ನ್ಯಾಯಯುತವಲ್ಲ ಎಂಬ ಅಂಶವನ್ನು ಮುಖ್ಯವಾಗಿರಿಸಿ ಕಾನೂನು ಹೋರಾಟ ನಡೆಸಲಾಗುವುದು. ಕಾಮಗಾರಿ ಪೂರ್ಣ ಮಾಡದೆ, ಟೋಲ್ ಸಂಗ್ರಹಕ್ಕೆ ಮುಂದಾಗಿದ್ದ ಬಿಲಾಸ್‌ಪುರದಲ್ಲಿನ ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿರುವುದನ್ನು ಮುಂದಿನ ವಿಚಾರಣೆ ವೇಳೆ ಸುಪ್ರೀಂಕೋರ್ಟ್‌ನ ಗಮನಕ್ಕೆ ತರಲಾಗುವುದು ಎಂದರು.

ಟೋಲ್‌ನ ಮುಂಭಾಗದ ಮುಕ್ಕ ಪ್ರದೇಶವು ಕೇವಲ 1 ಕಿ.ಮೀ. ದೂರದಲ್ಲಿದೆ. ಹಾಗೂ ಇಲ್ಲಿ ಟೋಲ್ ನಿರ್ಮಾಣಕ್ಕೆ ಪೂರ್ಣ ವ್ಯವಸ್ಥೆಗಳಿವೆ. ಈ ಹಿನ್ನೆಲೆಯಲ್ಲಿ ಟೋಲ್ ಅಲ್ಲಿಗೆ ವರ್ಗಾಯಿಸ ಬಹುದು. ಈಗಿರುವ ಸ್ಥಳದಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ ಎಂದವರು ಆರೋಪಿಸಿದರು.

Write A Comment