
ಮಂಗಳೂರು: ಮಂಗಳೂರು ಹಾಗೂ ಜಿಲ್ಲೆಯ ವಿವಿಧ ಭಾಗಗಳ ಚಿತ್ರ ಮಂದಿರಗಳಲ್ಲಿ ಶಾರುಖಾನ್ ನಟನೆಯ ದಿಲ್ವಾಲೆ ಚಿತ್ರ ಪ್ರದರ್ಶನಕ್ಕೆ ತಡೆಯೊಡ್ಡಿದ ಬಜರಂಗದಳ ಸಂಘಟನೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಚಿತ್ರ ಪ್ರದರ್ಶನಕ್ಕೆ ಮುಕ್ತ ಅವಕಾಶ ನೀಡಬೇಕೆಂದು ಮಂಗಳೂರಿನಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ.
ಮಂಗಳೂರಿನ ಸಿಟಿಜನ್ ಫೋರಂನ ಸಂಯೋಜಕಿ ವಿದ್ಯಾ ದಿನಕರ್ ಅವರು ನಗರದ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ,
ಹಿಂದೂ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಹಾಕಲಾಗಿದ್ದ ದಿಲ್ವಾಲೆ ಚಿತ್ರದ ಫೋಸ್ಟರ್೬ಗಳನ್ನು ಹರಿದು ಹಾಕಿರುವುದು ಮಾತ್ರವಲ್ಲದೇ. ನಗರದ ಮಲ್ಟಿಫ್ಲೆಕ್ಸ್ಳಲ್ಲಿ ಚಿತ್ರ ಪ್ರದರ್ಶನವಾಗದಂತೆ ಅಲ್ಲಿನ ಸಿಬ್ಬಂಗೆ ಬೆದರಿಕೆಯೊಡ್ಡಿ ತಡೆಯೊಡ್ಡಿ, ಪ್ರದರ್ಶನವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ನಗರದಲ್ಲಿ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಭಜರಂಗದಳ ಮುಖಂಡ ಶರಣ್ ಪಂಪ್ವೆಲ್ ಸೇರಿದಂತೆ ಹಿಂದೂ ಸಂಘಟನೆಗಳ ನಾಯಕರ ಹಾಗೂ ಕಾರ್ಯಕರ್ತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಬೇಕು ಎಂದು ವಿದ್ಯಾ ದಿನಕರ್ ದೂರಿನಲ್ಲಿ ತಿಳಿಸಿದ್ದಾರೆ.
ಸಿನಿಮಾ ಮಾಲೀಕರಿಗೆ ರಕ್ಷಣೆ ಕೊಡಬೇಕಾದ ಪೊಲೀಸರು ಕೂಡ ಬಜರಂಗದಳದ ಕಾರ್ಯಕರ್ತರು ಥಿಯೇಟರ್ ಮುಂದೆ ಪ್ರತಿಭಟನೆ ನಡೆಸಿ, ಬೆದರಿಕೆಯೊಡ್ಡಿದ್ದಾಗ ಮೂಕ ಪ್ರೇಕ್ಷಕರಂತೆ ನಿಂತು ಪ್ರತಿಭಟನಕಾರರ ಬೆಂಬಲಕ್ಕೆ ನಿಂತಿದ್ದಾರೆ ಎಂದು ಆರೋಪಿಸಿರುವ ವಿದ್ಯಾ ದಿನಕರ್, ಸ್ಥಳದಲ್ಲಿದ್ದ ಪೊಲೀಸರು ಸಿನಿಮಾ ಪ್ರದರ್ಶನ ನಿಲ್ಲಿಸಿ, ಏನಾದರೂ ಅಹಿತಕರ ಘಟನೆ ನಡೆದರೆ ನಾವು ಜವಾಬ್ದಾರರಲ್ಲ’ ಎಂದು ಥಿಯೇಟರ್ ಮಾಲೀಕರಿಗೆ ಹೇಳುವ ಮೂಲಕ ತಮ್ಮ ಅಸಾಯಕತೆ ಪ್ರದರ್ಶಿಸಿಸಿದ್ದಾರೆ ಎಂದು ದೂರಿದ್ದಾರೆ. ತಕ್ಷಣ ದಿಲ್ವಾಲೆ ಚಿತ್ರ ಪ್ರದರ್ಶನಕ್ಕೆ ಮತ್ತೆ ಅನುಮತಿ ನೀಡಬೇಕು ಹಾಗೂ ಸಿನಿಮಾ ಮಾಲೀಕರು ಹಾಗೂ ಸಿಬ್ಬಂದಿಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.