ರಾಷ್ಟ್ರೀಯ

ಭಾರತದ ರಫ್ತು ಸತತ 12 ನೇ ತಿಂಗಳಲ್ಲೂ ಇಳಿಮುಖ

Pinterest LinkedIn Tumblr

exportನವದೆಹಲಿ: ಸತತ 12 ನೇ ತಿಂಗಳಲ್ಲೂ ಭಾರತದ ವಾಣಿಜ್ಯ ರಫ್ತು ಕುಸಿತ ದಾಖಲಿಸಿದ್ದು, ಶೇ.24 .43 ರಷ್ಟು( 20 .01 ಬಿಲಿಯನ್ ಡಾಲರ್ ಗೆ) ಕುಸಿದಿದೆ ಎಂದು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶ ಹೇಳಿದೆ.

ನವೆಂಬರ್ ತಿಂಗಳಲ್ಲಿ ರಫ್ತು ಪ್ರಮಾಣ ಮಾತ್ರ ಕುಸಿಯದೇ ಆಮದು ಪ್ರಮಾಣದಲ್ಲೂ ಕುಸಿತ ಉಂಟಾಗಿದ್ದು, ಶೇ.30 .26 ರಷ್ಟು (29 .79 ಬಿಲಿಯನ್ ಡಾಲರ್ ಗೆ) ಕುಸಿದಿದ್ದು, ಪ್ರಸಕ್ತ ಸನ್ನಿವೇಶದಲ್ಲಿ ತೈಲೋತ್ಪನ್ನಗಳ ಆಮದು ಶೇ.44 .99 ರಷ್ಟು ಕಡಿಮೆಯಾಗಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.

ಇವೆಲ್ಲದರ ಪರಿಣಾಮ ವ್ಯಾಪಾರ ಕೊರತೆ 16 .236 ಬಿಲಿಯನ್ ಡಾಲರ್ ನಿಂದ 9.78 ಬಿಲಿಯನ್ ಡಾಲರ್ ಗೆ ಕುಸಿದಿದೆ. ನವೆಂಬರ್ ನಲ್ಲಿ ತೈಲೋತ್ಪನ್ನಗಳನ್ನು ಹೊರತುಪಡಿಸಿದ ಸರಕುಗಳ ಆಮದು ಪ್ರಮಾಣ ಶೇ.24 .7 ರಷ್ಟು( 31 .02 ಬಿಲಿಯನ್ ಡಾಲರ್ ನಿಂದ 23 .36 ಬಿಲಿಯನ್ ಡಾಲರ್) ಗೆ ಇಳಿಕೆಯಾಗಿದೆ.

ಪ್ರಸಕ್ತ ಆರ್ಥಿಕ ವರ್ಷದ ಮೊದಲ 8 ತಿಂಗಳಲ್ಲಿ ರಫ್ತು ದರ ಶೇ.18 .46 ರಷ್ಟು ಇಳಿಕೆಯಾಗಿದ್ದರೆ, ಆಮದು ಪ್ರಮಾಣ ಶೇ.17.೨೧ ರಷ್ಟು ಇಳಿಕೆಯಾಗಿತ್ತು. “ಜಾಗತಿಕ ಕುಸಿತದ ಪರಿಣಾಮ ಭಾರತದ ರಫ್ತು ಪ್ರಮಾಣ ಕುಸಿದಿದ್ದು ಶೀಘ್ರವೇ ಪರಿಸ್ಥಿತಿ ಉತ್ತಮಗೊಳ್ಳಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Write A Comment