ಮುಂಬೈ

ಕರ್ನಾಟಕ ರಾಜಕಾರಣಿಗಳನ್ನು ಕೊಲ್ಲಲು ಸಂಚು ರೂಪಿಸಿದ್ದ ಉಗ್ರ ಅರೆಸ್ಟ್

Pinterest LinkedIn Tumblr

terror-newf

ಮುಂಬೈ: ಕರ್ನಾಟಕದ ಪ್ರಮುಖ ರಾಜಕಾರಣಿಗಳು ಮತ್ತು ಪತ್ರಕರ್ತರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಲಷ್ಕರ್ ಉಗ್ರನನ್ನು ಎನ್ ಐಎ ಬಂಧಿಸಿದೆ.

ಮುಂಬೈ ವಿಮಾನ ನಿಲ್ದಾಣದಲ್ಲಿ ಲಷ್ಕರ್ ಉಗ್ರ ಅಸಾದುಲ್ಲಾ ಖಾನ್ ಎಂಬಾತನನ್ನು ಹೈದರಾಬಾದ್​ನ ರಾಷ್ಟ್ರೀಯ ತನಿಖಾ ದಳದ ಸಿಬ್ಬಂದಿ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಹೈದರಾಬಾದ್ ನಿಂದ ಸೌದಿ ಅರೇಬಿಯಾಗೆ ತೆರಳುತ್ತಿದ್ದ ವೇಳೆ ಎನ್ ಐ ಎ ತಂಡ ಉಗ್ರನನ್ನು ಬಂಧಿಸಿದೆ,

57 ವರ್ಷ ವಯಸ್ಸಿನ ಹೈದರಾಬಾದ್ ಮೂಲದ ಅಸಾದುಲ್ಲಾ ಖಾನ್​ನನ್ನು ಬೆಂಗಳೂರಿಗೆ ಕರೆತರಲಾಗುತ್ತಿದ್ದು, ಬೆಂಗಳೂರಿನಲ್ಲಿರುವ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದೆಂದು ಪೊಲೀಸ್ ಮೂಲಗಳು ತಿಳಿಸಿವೆ.

Write A Comment