ಕನ್ನಡ ವಾರ್ತೆಗಳು

ಕುಂದಾಪುರ: ಎಂಡೋಸಲ್ಫಾನ್ ಪೀಡಿತೆ ಯುವತಿ ಮನನೊಂದು ಆತ್ಮಹತ್ಯೆ

Pinterest LinkedIn Tumblr

suicide

ಕುಂದಾಪುರ: ಕಳೆದ ಹದಿನೈದು ವರ್ಷಗಳಿಂದಲೂ ಎಂಡೋಸಲ್ಫಾನ್ ಪೀಡಿತೆಯಾಗಿದ್ದ ಯುವತಿಯೋರ್ವಳು ತನ್ನ ನಿತ್ಯಕರ್ಮ ಮಾಡುವುದಕ್ಕೂ ಮನೆಯವರನ್ನೇ ಅವಲಂಭಿಸಬೇಕೆಂಬ ಕಾರಣಕ್ಕಾಗಿ ಮನನೊಂದು ಆತ್ಮಹತ್ಯೆಗೆ ಶರಣಾದ ಹ್ರದಯವಿದ್ರಾವಕ ಘಟನೆ ಕುಂದಾಪುರ ತಾಲೂಕಿನ ಬೆಳ್ವೆ ಸಮೀಪದ ಆರ್ಡಿ ಎಂಬಲ್ಲಿ ನಡೆದಿದೆ.

ಆರ್ಡಿ ನಿವಾಸಿ ರೀತಾ ಶೆಟ್ಟಿ (21) ಮನೆ ಸಮೀಪದ ಆವರಣವಿಲ್ಲದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಯುವತಿ.

ಘಟನೆ ವಿವರ: ಆರ್ಡಿಯ ಸುರೇಂದ್ರ ಶೆಟ್ಟಿ ಅವರ ಎರಡು ಪುತ್ರಿಯರಲ್ಲಿ ರೀತಾ ಒಬ್ಬಳಾಗಿದ್ದು ಈಕೆ ಎಂಡೋಸಲ್ಪಾನ್ ಪೀಡಿತೆಯಾಗಿ ಕೈ-ಕಾಲು ಹಾಗೂಕುತ್ತಿಗೆಯ ಸ್ವಾಧೀನ ಕಳೆದುಕೊಂಡಿದ್ದಳು. ಮನೆಯವರು ಹೇಳುವ ಪ್ರಕಾರ ಆಕೆಗೆ ಹುಟ್ಟಿನಿಂದಲೇ ಈ ಸಮಸ್ಯೆ ಇಲ್ಲವೆನ್ನಲಾಗಿದೆ. ಹೀಗೆಯೇ ಎಂಡೋಸಲ್ಫಾನ್ ಸಮಸ್ಯೆಯಿದ್ದರೂ ತಂದೆಯ ನೆರವಿನಿಂದ ಎಸ್.ಎಸ್.ಎಲ್.ಸಿ. ವಿಧ್ಯಾಭ್ಯಾಸವನ್ನು ರೀತಾ ಪಡೆದಿದ್ದಳು. ಸರಕಾರದಿಂದ ಮೂರು ಸಾವಿರ ಮಾಸಿಕ ಪಿಂಚಣಿ ಸೌಲಭ್ಯವನ್ನು ಬಿಟ್ಟರೇ ಬೇರ್‍ಯಾವ ಸೌಕರ್ಯವೂ ಸಿಕ್ಕಿರಲಿಲ್ಲ. ಹಿಗೆಯೇ ತನ್ನ ಸಮಸ್ಯೆಗೆ ಮನನೊಂದ ಈಕೆ ಶುಕ್ರವಾರ ಮನನೊಂದು ಈ ಆತ್ಮಹತ್ಯೆ ನಿರ್ಧಾರ ಕೈಗೊಂಡಿದ್ದಾಳೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

( ಸಾಂದರ್ಭಿಕ ಚಿತ್ರ)

Write A Comment