ಮಂಗಳೂರು,ನ.17: ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕ್ರೀಡಾಕೂಟ 2015-16 ಇದರ ಕಚೇರಿಯ ಉದ್ಘಾಟನೆ ಬಂಟ್ಸ್ ಹಾಸ್ಟೆಲ್‌ನಲ್ಲಿರುವ ಬಂಟರ ಯಾನೆ ನಾಡವರ ಮಾತೃ ಸಂಘದ ಆವರಣದಲ್ಲಿ ನಡೆಯಿತು.
ಶ್ರೀರಾಮಕೃಷ್ಣ ಪದವಿಪೂರ್ವಕಾಲೇಜು, ಬಂಟರ ಯಾನೆ ನಾಡವರ ಮಾತೃ ಸಂಘ, ಪದವಿಪೂರ್ವ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಡಿಸೆಂಬರ್ 3 ರಿಂದ 6 ರವರೆಗೆ ಮಂಗಳ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ನಡೆಯಲಿದೆ.
ಕ್ರೀಡಾಕೂಟ ಕಚೇರಿಯ ಉದ್ಘಾಟನೆಯನ್ನು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ನೆರವೇರಿಸಿದರು. ಸಂಚಾಲಕರಾದ ಕೃಷ್ಣಪ್ರಸಾದ್ ರೈ, ಪ್ರಾಂಶುಪಾಲರಾದ ಡಾ.ಕಿಶೋರ್ ಕುಮಾರ್ ರೈ ಶೇಣಿ, ಹೇಮನಾಥ ಶೆಟ್ಟಿ, ಡಾ.ನವೀನ್ ಶೆಟ್ಟಿ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಆರ್.ತಿಮ್ಮಯ್ಯ, ಜಯರಾಮ ಸಾಂತ, ಕರುಣಾಕರ ಶೆಟ್ಟಿ, ಪ್ರೇಮನಾಥ ಶೆಟ್ಟಿ, ರಾಜ್‌ಕಿಶೋರ್ ಭಂಡಾರಿ, ವಿನೋದ್ ಶೆಟ್ಟಿ ಅಶ್ವತ್ಥಾಮ ಹೆಗ್ಡೆ, ನಾಗೇಶ್ ಆಳ್ವ ಉಪಸ್ಥಿತರಿದ್ದರು.
