ಮುಂಬೈ: ಸಲ್ಮಾನ್ ಖಾನ್ ಅಭಿನಯದ ಪ್ರೇಮ್ ರತನ್ ಧನ್ ಪಾಯೋ ಚಿತ್ರ ನವೆಂಬರ್ 15ಕ್ಕೆ ಬಿಡುಗಡೆಯಾಗಲಿದ್ದು, ಈಗಾಗಲೇ ಎಲ್ಲಾ ಕಡೆ ಭಾರಿ ಸದ್ದು ಮಾಡಿದೆ. ಅದರಲ್ಲೂ ಚಿತ್ರದ ಹಾಡುಗಳು ಎಲ್ಲರ ಹಾಟ್ ಫೇವರೇಟ್ ಆಗಿವೆ. ಇದೀಗ ಅದೇ ಹಾಡಿಗೆ ಭಜರಂಗಿ ಬಾಯಿಜಾನ್‍ನ ಮುನ್ನಿ ಸ್ಟೆಪ್ ಹಾಕಿದ್ದಾಳೆ.
ಭಜರಂಗಿ ಬಾಯಿಜಾನ್ ಮುನ್ನಿ ಅಲಿಯಾಸ್ ಹರ್ಷಾಲಿ ಮಲ್ಹೋತ್ರಾ ಯಾರಿಗೆ ಗೊತ್ತಿಲ್ಲಾ ಹೇಳಿ. ತನ್ನ ಮುಗ್ಧ ನಟನೆಯಿಂದಲೇ ಪ್ರೇಕ್ಷಕರ ಗಮನ ಸೆಳೆದಿದ್ದಳು ಈ ಪುಟ್ಟ ಪೋರಿ. ಸಲ್ಮಾನ್ ಖಾನ್ ಜೊತೆಗೆ ಗುರುತಿಸಿ ಕೊಂಡಿದ್ದ ಹರ್ಷಾಲಿ ಸಲ್ಲು ಅಭಿಮಾನಿಗಳ ಫೇವರೇಟ್ ಕೂಡ. ಸದ್ಯ ಹರ್ಷಾಲಿ ಈಗ ಪ್ರೇಮ್ ರತನ್ ಧನ್ ಪಾಯೋ ಹಾಡಿಗೆ ಸಖತ್ತಾಗಿ ಸ್ಟೆಪ್ ಹಾಕಿ ಮತ್ತೊಮ್ಮೆ ಸಲ್ಲು ಅಭಿಮಾನಿಗಳ ಗಮನ ಸೆಳೆದಿದ್ದಾಳೆ.
ಪ್ರೇಮ್ ರತನ್ ಧನ್ ಪಾಯೋ ಚಿತ್ರದ ಟೈಟಲ್ ಸಾಂಗ್ ಹೆಜ್ಜೆ ಹಾಕಿರುವ ಸೋನಂ ಕಪೂರ್ ರೀತಿಯಲ್ಲೇ ಹರ್ಷಾಲಿ ಡಾನ್ಸ್ ಮಾಡಿದ್ದಾಳೆ. ಇದೀಗ ಈಕೆಯ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಸಲ್ಮಾನ್ ಅಭಿನಯದ ಈ ಚಿತ್ರ ಭಜರಂಗಿ ಬಾಯಿಜಾನ್ ಚಿತ್ರದಷ್ಟೇ ಹಿಟ್ ಆಗಲಿದೆ ಎನ್ನುವುದು ಬಾಲಿವುಡ್ ಮಂದಿಯ ಮಾತಾಗಿದೆ.
