ವಾಷಿಂಗ್ಟನ್, ನ.7- ಭಯೋತ್ಪಾದಕ ಕೃತ್ಯಗಳನ್ನು ನಡೆಸುವುದಕ್ಕಾಗಿ ಅಲ್-ಖೈದಾ ನಾಯಕ (ಹತ್ಯೆಗೀಡಾಗಿದ್ದಾನೆ) ಅನ್ವರ್-ಅಲ್-ಅವ್‌ಲಾಕಿಗೆ ಹಣ ನೀಡುತ್ತಿದ್ದ ಆರೋಪ ಎದುರಿಸುತ್ತಿದ್ದ ಭಾರತದ ಇಬ್ಬರು ವ್ಯಕ್ತಿಗಳ ಸಹಿತ ನಾಲ್ವರನ್ನು ಅಮೆರಿಕ ಪೊಲೀಸರು ಬಂಧಿಸಿದ್ದು , ಇನ್ನಿಬ್ಬರು ಉಗ್ರರು, ಅರಬ್ ರಾಷ್ಟ್ರ (ಯುಎಇ)ಗಳಲ್ಲಿದ್ದಾರೆ ಎಂದು ಹೇಳಲಾಗಿದೆ. ನಾಲ್ವರು ಅಲ್‌ಖೈದಾ ಪೋಷಕರಲ್ಲಿ ಬಂಧಿತರಾಗಿರುವ ಇಬ್ಬರು ಭಾರತೀಯರನ್ನು 37 ವರ್ಷದ ಯಾಹ್ಯಾ ಫಾರೂಕ್ ಮೊಹ್ಮದ್ ಹಾಗೂ ಅವನ ಸಹೋದರ 36 ವರ್ಷದ ಇಬ್ರಾಹಿಂ ಜುಬೇರ್ ಮೊಹ್ಮದ್ ಎಂದು ಗುರುತಿಸಲಾಗಿದೆ.
ಅರಬ್ ರಾಷ್ಟ್ರದಲ್ಲಿರುವ ಇನ್ನಿಬ್ಬರು 35 ವರ್ಷದ ಅಸೀಫ್ ಅಹ್ಮದ್ ಸಲೀಮ್ ಹಾಗೂ ಅವನ ಹಿರಿಯ ಸಹೋದರ 40 ವರ್ಷದ ಸುಲ್ತಾನ್ ರೂಮ್ ಸಲೀಂ ಎಂದು ಪೊಲೀಸರು ತಿಳಿಸಿದ್ದಾರೆ.
ಸುಲ್ತಾನ್ ಹಾಗೂ ಇಬ್ರಾಹಿಂ ಸಹೋದರರನ್ನು ಫೆಡರಲ್ ಇನ್ವೆಸ್ಟಿಗೇಷನ್ ಬ್ಯೂರೋ ಅಧಿಕಾರಿಗಳು ಕ್ರಮವಾಗಿ ಟೆಕ್ಸಾಸ್ ಮತ್ತು ಓಹಿಯೋದಲ್ಲಿ ಗುರುವಾರ ಬಂಧಿಸಿದ್ದರು. ಸುಲ್ತಾನ್ ಟೆಕ್ಸಾಸ್‌ನಲ್ಲೇ ವಾಸ್ತವ್ಯವಿದ್ದ. ಅಲ್‌ಖೈದಾ ಸಂಘಟನೆ ಉಗ್ರರಿಗೆ ಹಣ ಪೂರೈಸುತ್ತಿರುವ ಆರೋಪದಲ್ಲಿ ಈ ಈ ನಾಲ್ವರ ವಿರುದ್ಧ ನ್ಯಾಯಾಲಯ ಭಯೋತ್ಪಾದಕ ಕೃತ್ಯಗಳ ಸಂಚಿನ ಆರೋಪದಲ್ಲಿ ಆರೋಪಿಗಳು ಎಂದು ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು.