ಅಂತರಾಷ್ಟ್ರೀಯ

ಹೈಸ್ಕೂಲ್ ಮಕ್ಕಳ ಮೊಬೈಲ್‌ಗಳಲ್ಲಿ ನೂರಾರು ಬೆತ್ತಲೆ ಚಿತ್ರಗಳ ಹರಿದಾಟ

Pinterest LinkedIn Tumblr

hiಕ್ಯಾನನ್‌ನಗರ(ಕೊಲೊರಾಡೊ), ನ.7- ಇಲ್ಲಿನ ಪ್ರೌಢಶಾಲೆಯೊಂದರಲ್ಲಿ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮದೇ ಬೆತ್ತಲೆ ಭಾವಚಿತ್ರಗಳನ್ನು ಕ್ಲಿಕ್ಕಿಸಿಕೊಂಡು ಇತರರ ಮೊಬೈಲ್‌ಗಳಿಗೆ ಆ ಬೆತ್ತಲೆ ಚಿತ್ರಗಳನ್ನು ಹರಿಯಬಿಡುತ್ತಿದ್ದು, ಪೋಷಕರು ತಲೆ ಮೇಲೆ ಕೈ ಹೊತ್ತುಕೊಂಡು ಕುಳಿತುಕೊಳ್ಳುವಂತಾಗಿದೆ. ಶಾಲಾ ಆಡಳಿತ ಮಂಡಳಿ ಹಾಗೂ ಮಕ್ಕಳ ಪೋಷಕರು ಈಗ ಒಬ್ಬರ ಮೇಲೋಬ್ಬರು ಹರಿಹಾಯುತ್ತಿದ್ದು, ಈ ತುಂಟಾಟದ ಮೂಲ ಕಂಡು ಹಿಡಿಯಲು ತಿಣುಕಾಡುತ್ತಿದ್ದಾರೆ.

ಈ ಕೃತ್ಯದಲ್ಲಿ ನೂರಾರು ವಿದ್ಯಾರ್ಥಿಗಳು ತೊಡಗಿಕೊಂಡಿದ್ದು, ಮಕ್ಕಳು ಅವರದೇ ಬೆತ್ತಲೆ ಫೋಟೊಗಳನ್ನು ತೆಗೆದುಕೊಂಡು ತಮ್ಮ ಗೆಳೆಯರ ಮೊಬೈಲ್‌ಗಳಿಗೆ ರವಾನಿಸುತ್ತಿದ್ದಾರೆ. ಈ ಮಕ್ಕಳಲ್ಲಿ ಹೈಸ್ಕೂಲ್ ಮತ್ತು ಮಾಧ್ಯಮಿಕ ಶಾಲೆಗಳ ಮಕ್ಕಳೂ ಇದ್ದಾರೆ  ಎಂದು ಅಂದಾಜಿಸಲಾಗಿದೆ. ಕ್ಯಾನನ್ ಸಿಟಿ ಹೈಸ್ಕೂಲ್‌ನ ಈ ಸೆಕ್ಸ್‌ಟಿಂಗ್ ವರ್ತುಲದಲ್ಲಿ ಇಲ್ಲಿನ ಫುಟ್‌ಬಾಲ್ ಟೀಮ್ ವಿದ್ಯಾರ್ಥಿಗಳು ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ಗುಮಾನಿ ಸಿಕ್ಕಿದೆಯಾದರೂ, ಖಚಿತ ಸುಳಿವು ಲಭ್ಯವಾಗಿಲ್ಲ. ಪೋಷಕರು ತಮ್ಮ ಮಕ್ಕಳ ಈ ಆಟದಿಂದ ತಲೆ ಕೆಡಿಸಿಕೊಂಡಿದ್ದಾರೆ.

Write A Comment