ಕರ್ನಾಟಕ

ಬಿಹಾರದಲ್ಲಿ ಬಿಜೆಪಿ ಗೆದ್ದರೆ ರಾಜ್ಯ ಬಿಜೆಪಿಗರಿಗೆ ನಡುಕ?

Pinterest LinkedIn Tumblr

BJP-logoಬೆಂಗಳೂರು: ಭಾನುವಾರ ಹೊರಬೀಳಲಿರುವ ದೂರದ ಬಿಹಾರ ವಿಧಾನಸಭಾ ಚುನಾವಣೆಯ ಫ‌ಲಿತಾಂಶ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೊಸಬರನ್ನು ಆಯ್ಕೆ ಮಾಡುವ
ಪ್ರಕ್ರಿಯೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ.

ಒಂದು ವೇಳೆ ಬಿಹಾರದಲ್ಲಿ ಬಿಜೆಪಿ ಮತ್ತು ಇತರ ಪಕ್ಷಗಳನ್ನು ಒಳಗೊಂಡ ಕೂಟ ಭರ್ಜರಿ ಗೆಲುವು ಸಾಧಿಸಿದಲ್ಲಿ ಪಕ್ಷದ ರಾಷ್ಟ್ರೀಯ ನಾಯಕರು ಇನ್ನುಳಿದ ರಾಜ್ಯಗಳಲ್ಲಿ
ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ನಿರ್ಧಾರಗಳಲ್ಲಿ ಕಠಿಣ ನಿಲುವು ತಳೆಯಲಿದ್ದಾರೆ. ಹೊಸ ಪ್ರಯೋಗಕ್ಕೆ ಮುಂದಾಗಲಿದ್ದಾರೆ. ಆ ಪ್ರಕಾರ, ರಾಜ್ಯದಲ್ಲೂ ಹೊಸ ಮುಖಕ್ಕೆ ಅವಕಾಶ ನೀಡುವ ಬಗ್ಗೆ ಗಂಭೀರ ಚಿಂತನೆ ನಡೆಸುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.

ಬಿಹಾರದಲ್ಲಿ ಗೆಲುವು ಲಭಿಸಿದಲ್ಲಿ ಅದು ಸ್ಥಳೀಯ ಘಟಕ ಎನ್ನುವುದಕ್ಕಿಂತ ಪ್ರಧಾನಿ ಮೋದಿ ಹಾಗೂ ಶಾ ಅವರ ನಾಯಕತ್ವಕ್ಕೆ ಸಿಕ್ಕ ಜಯ ಎಂದೇ ಪರಿಗಣಿಸಲಾಗುತ್ತದೆ. ಅದರಿಂದ ಪ್ರೇರೇಪಿತರಾಗಿ ಕರ್ನಾಟಕದಲ್ಲೂ ತಮ್ಮ ತಂತ್ರ ಬಳಸಿ ಹಿರಿಯ ನಾಯಕರನ್ನು ದೂರವಿರಿಸಿ ಎರಡನೇ ಸಾಲಿನ ಅಥವಾ ಹೊಸ ಮುಖಕ್ಕೆ ಮಣೆ ಹಾಕುವ ಬಗ್ಗೆ ಪಕ್ಷದ ಪಾಳೆಯದಲ್ಲಿ ಚರ್ಚೆ ನಡೆದಿದೆ.
-ಉದಯವಾಣಿ

Write A Comment