ನವದೆಹಲಿ: ಡೀಸೆಲ್ ಮತ್ತು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ಪ್ರತೀ ಲೀಟರ್ ಪೆಟ್ರೋಲ್ ಗೆ ರು.1.60 ಮತ್ತು ಪ್ರತಿ ಲೀಟರ್ ಡೀಸಲ್ ಮೇಲೆ 40 ಪೈಸೆ ಅಬಕಾರಿ ಸುಂಕ ಹೆಚ್ಚಿಸಲಾಗಿದೆ.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾಲ್ಕು ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅಬಕಾರಿ ಸುಂಕವನ್ನು ಹೆಚ್ಚಳ ಮಾಡಿದೆ. ಒಂದು ವಾರದ ಒಳಗಡೆ ಭಾರತೀಯ ತೈಲ ಕಂಪೆನಿಗಳು ಪೆಟ್ರೋಲ್ ಡೀಸೆಲ್ ಬೆಲೆಯನ್ನು ಪರಿಷ್ಕರಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರು. 5.46 ನಿಂದ ರು.7.06 ಗೆ ಏರಿಕೆಯಾಗಿದ್ದರೆ, ಡೀಸೆಲ್ ಮೇಲಿನ ಅಬಕಾರಿ ಸುಂಕ ರು.4.26 ನಿಂದ. ರು.4.66 ಏರಿಕೆಯಾಗಿದೆ.
ಈ ಹಿಂದೆ ಕೇಂದ್ರ ಸರ್ಕಾರ ತೈಲ ಕಂಪೆನಿಗಳಿಂದ ಪ್ರತಿ ಲೀಟರ್ ಪೆಟ್ರೋಲ್ಗೆ ರು.17.46 ವಸೂಲಿ ಮಾಡುತ್ತಿದ್ದರೆ, ಈಗ ರು.19.06 ವಸೂಲಿ ಮಾಡಲಿದೆ. ಪ್ರಸ್ತುತ ಪ್ರತಿ ಲೀಟರ್ ಡೀಸೆಲ್ಗೆ ರು.10.26 ತೈಲ ಕಂಪೆನಿಗಳು ಕೇಂದ್ರ ಸರ್ಕಾರಕ್ಕೆ ನೀಡುತ್ತಿದ್ದರೆ, ಹೊಸ ಸುಂಕದ ಅನ್ವಯ ರು.10.66 ಪಾವತಿ ಮಾಡಬೇಕಿದೆ.
