ಕರ್ನಾಟಕ

ಬೆಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿನಲ್ಲಿ ಯುವತಿಯೊಬ್ಬಳ ಮೇಲೆ ಮತ್ತೊಂದು ರೇಪ್: ಇಬ್ಬರು ಆರೋಪಿಗಳ ಬಂಧನ

Pinterest LinkedIn Tumblr

rape-in-mini

ಬೆಂಗಳೂರು: ಚಲಿಸುತ್ತಿದ್ದ ಬಸ್ಸಿನಲ್ಲಿ ಚಾಲಕನೇ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ಬಳಿ ಚಲಿಸುತ್ತಿದ್ದ ಮಿನಿ ಬಸ್ ನಲ್ಲಿ 19 ವರ್ಷದ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಲಾಗಿದೆ.

ನರ್ಸಿಂಗ್ ಹೋಮ್ ನಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿ ಕೆಲಸಕ್ಕೆ ತೆರಳಲು ನಿನ್ನೆ ಬೆಳಿಗ್ಗೆ ಮಿನಿ ಬಸ್ ಹತ್ತಿದ್ದಳು. ಆದರೆ, ಬಸ್ ನಲ್ಲಿ ಚಾಲಕ ಮತ್ತು ಕ್ಲೀನರ್ ಬಿಟ್ಟರೇ ಯಾರು ಇರಲಿಲ್ಲ. ಈ ವೇಳೆ ಮಿನಿ ಬಸ್ ನ ಎಲ್ಲಾ ಕಿಟಿಕಿಯ ಗಾಜುಗಳನ್ನು ಮುಚ್ಚಿ, ಕ್ಲೀನರ್ ಗೆ ಬಸ್ ಚಲಾಯಿಸುವಂತೆ ಹೇಳಿದ ಚಾಲಕ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಾನೆ.

ತದ ನಂತರ ಯುವತಿಯನ್ನು ಲಕ್ಕೊಂಡನ ಕ್ರಾಸ್ ಬಳಿ ಇಳಿಸಿ, ಇಬ್ಬರು ಪರಾರಿಯಾಗಿದ್ದಾರೆ. ಅಲ್ಲಿಂದ ಯುವತಿ ಹೊಸಕೋಟೆ ಖಾಸಗಿ ಆಸ್ಪತ್ರೆಗೆ ತೆರಳಿ ವೈದ್ಯರ ಬಳಿ ಘಟನೆ ಬಗ್ಗೆ ವಿವರಿಸಿದ್ದಾಳೆ. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಸೂಲಿಬೆಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಸೂಲಿಬೆಲೆ ಪೊಲೀಸರು, ಐಪಿಸಿ ಸೆಕ್ಷನ್ 376ರ ಅಡಿ ಮೊಕದ್ದಮೆ ದಾಖಲು ಮಾಡಿದ್ದಾರೆ. ಅತ್ಯಾಚಾರವೆಸಗಿದ ಶಿವಮೊಗ್ಗ ಮೂಲದ ಮಿನಿ ಬಸ್ ಚಾಲಕ ರವಿ(26), ಚಿಂತಾಮಣಿ ಮೂಲದ ಕ್ಲೀನರ್ ಮಂಜುನಾಥ(23) ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಖಾಸಗಿ ಕಾರ್ಖಾನೆಯೊಂದಕ್ಕೆ ಸೇರಿದ ಈ ಮಿನಿ ಬಸ್ ನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಸಿಗ್ವಿಲ್ ಗಾರ್ಮೆಂಟ್ಸ್ ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ಮಿನಿ ಬಸ್ ಹೊಸಕೋಟೆ ಮೂಲದ ಕೃಷ್ಣ ಮೂರ್ತಿಗೆ ಸೇರಿದ ವಾಹನವಾಗಿದೆ. ಕಳೆದ ಒಂದು ವರ್ಷದಿಂದ ಮಿನಿ ಬಸ್ ಚಾಲಕನಾಗಿ ರವಿ ಕೆಲಸ ಮಾಡುತ್ತಿದ್ದ. 10 ದಿನಗಳ ಹಿಂದೆ ಮಂಜುನಾಥ್ ಕ್ಲೀನರ್ ಆಗಿ ಸೇರಿದ್ದ. ನಿನ್ನೆ ಘಟನೆ ನಂತರವೂ ಆರೋಪಿಗಳು ಯಥಾಸ್ಥಿತಿ ಕೆಲಸಕ್ಕೆ ತೆರಳಿದರು. ಯುವತಿ ನೀಡಿದ ಪೂರ್ಣ ಮಾಹಿತಿ ಮೇರೆಗೆ ಪೊಲೀಸರು ಆರೋಪಿಗಳು ಬಂಧಿಸಿದ್ದಾರೆ.

Write A Comment