ಅಂತರಾಷ್ಟ್ರೀಯ

ಕುಖ್ಯಾತ ಭೂಗತ ದೊರೆ ಛೋಟಾ ರಾಜನ್‍ನ ಹಸ್ತಾಂತರ ಪ್ರಕ್ರಿಯೆ ಮುಂದೂಡಿಕೆ

Pinterest LinkedIn Tumblr

rajan112

ಬಾಲಿ: ಕುಖ್ಯಾತ ಭೂಗತ ದೊರೆ ಛೋಟಾ ರಾಜನ್‍ನ ಹಸ್ತಾಂತರ ಪ್ರಕ್ರಿಯೆಯು ಹವಾಮಾನ ವೈಪರೀತ್ಯದ ಕಾರಣದಿಂದ ಮುಂದಕ್ಕೆ ಹೋಗಿದೆ.

ಸನಿಹದಲ್ಲಿರುವ ಜ್ವಾಲಾಮುಖಿ ಪರ್ವತದಿಂದ ಎದ್ದ ಹೊಗೆಯಿಂದಾಗಿ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆವೃತವಾಗಿದ್ದು, ನಿಲ್ದಾಣದ ಕಾರ್ಯಾಚರಣೆಯನ್ನು ಬಹುತೇಕ ಒಂದು ದಿನ ಮಟ್ಟಿದೆ ಮುಚ್ಚಲಾಗಿದೆ.

ಗುರುವಾರ ಮುಂಜಾನೆವರೆಗೆ ಯಾವುದೇ ವಿಮಾನ ಹಾರಾಟ ನಡೆಯುವುದಿಲ್ಲವಾದ್ದರಿಂದ ಹಸ್ತಾಂತರ ಒಂದು ದಿನ ಮುಂದಕ್ಕೆ ಹಾಕಲಾಗಿದೆ.

ಹಸ್ತಾಂತರದ ಬಳಿಕ ರಾಜನ್‍ನನ್ನು ಮುಂಬೈಯ ಕೇಂದ್ರ ಕಾರಾಗೃಹದಲ್ಲಿಡುವಂತೆ ಮಹಾರಾಷ್ಟ್ರ ಸರ್ಕಾರ ಆದೇಶ ನೀಡಿದೆ. ಜತೆಗೆ ಜೈಲಿನ ಸುತ್ತ ಅರೆಭದ್ರತಾ ಪಡೆಗಳನ್ನು ನಿಯೋಜಿಸಲು ಕೋರಿದೆ.

Write A Comment