ಕನ್ನಡ ವಾರ್ತೆಗಳು

‘ಗೋ ಮಾಂಸ ತಿನ್ನುವೆ’ ಹೇಳಿಕೆ; ಸಿ.ಎಂ. ಜನರ ಕ್ಷಮೆಯಾಚಿಸಲಿ: ಶೋಭಾ ಕರಂದ್ಲಾಜೆ

Pinterest LinkedIn Tumblr

ಉಡುಪಿ: ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಗೋಮಾಂಸ ತಿನ್ನುತ್ತೇನೆ ಎನ್ನುವ ಹೇಳಿಕೆ ರಾಜ್ಯದ ಜನತೆಗೆ ಮತ್ತು ರೈತರಿಗೆ ಬಹಳ ನೋವುಂಟು ಮಾಡಿದ್ದಾರೆ. ಆದುದರಿಂದ ಮಾನ್ಯ ಮುಖ್ಯ ಮಂತ್ರಿಗಳು ತಕ್ಷಣ ರಾಜೀನಾಮೆ ನೀಡಬೇಕು ಇಲ್ಲವೆ ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಬೇಕು. ಕೇವಲ ಮತಕ್ಕಾಗಿ ರಾಜಕಾರಣ ಮಾಡಿದರೆ ಮುಂದಿನ ಚುನಾವಣೆಯಲ್ಲಿ ರಾಜ್ಯದ ಬಹುಸಂಖ್ಯಾತರು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಗುಡುಗಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

Shobha Karandlaje_Pressmeet_Udp (1) Shobha Karandlaje_Pressmeet_Udp (2)

ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯದ ಮಾನ್ಯ ಮುಖ್ಯ ಮಂತ್ರಿಗಳು ಸೋತಿದ್ದು ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದ ಅರಾಜಕತೆ ತಾಂಡವವಾಡುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆಯವರು ಹೇಳಿದರು. ಮುಖ್ಯ ಮಂತ್ರಿಯವರ ನಡವಳಿಕೆ ಸಂವಿಧಾನಕ್ಕೆ ವಿರುದ್ಧವಾಗಿದ್ದು ಮತಕ್ಕಾಗಿ ತಮ್ಮ ರಾಜಕೀಯ ಮಾಡುತ್ತಿದ್ದಾರೆ. ರಾಜ್ಯದ ಉನ್ನತ ಸ್ಥಾನದಲ್ಲಿರುವ ಮಾನ್ಯ ಮುಖ್ಯಮಂತ್ರಿಯವರು ಕೇವಲ ಮತಕ್ಕಾಗಿ ಏಕಪಕ್ಷೀಯವಾಗಿ ವರ್ತಿಸುವುದು ಸಮಂಜಸವಲ್ಲ ಎಂದು ಇದೇ ಸಂದರ್ಭ ಕಿಡಿಕಾರಿದರು.

ಬಿಜೆಪಿ ಸರಕಾರದ ಅವಧಿಯಲ್ಲಿ ಇಂತ ಯಾವುದೇ ಕೋಮು ಗಲಭೆಗೆ ಅವಕಾಶ ನೀಡಿಲ್ಲ. ಅಂತಹ ಘಟನೆ ನಡೆದಲ್ಲಿ ಕಠಿನ ಕ್ರಮ ಕೈಗೊಂಡಿದ್ದೇವೆ. ಆದರೆ ಕಾಂಗ್ರೆಸ್ ಆಡಳಿತಕ್ಕೆ ಬಂದ ತಕ್ಷಣ ಕೆ.ಎಫ್.ಡಿ ಅಡಿಯಲ್ಲಿ ಬಂಧಿತರಾದವರನ್ನು ಬಿಡಿಸಲಾಯಿತು. ಇದರಿಂದಾಗಿ ಕೋಮು ಗಲಭೆ ರಾಜ್ಯದಲ್ಲಿ ಅತಿರೇಕಕ್ಕೆ ಏರಿದೆ ಎಂದು ಆಕ್ರೋಷ ವ್ಯಕ್ತಪಡಿಸಿದರು. ಸರಕಾರ ಪಿ.ಎಫ್.ಐ. ಹಾಗೂ ಕೆ.ಎಫ್.ಡಿ ಸಂಘಟನೆಯನ್ನು ನಿಷೇಧಿಸಬೇಕೆಂದು ಅವರು ಈ ಸಂದರ್ಭ ಆಗ್ರಹಿಸಿದರು.

ಅಭಯ ಚಂದ್ರ ಜೈನ್ ಅವರು ನೀಡಿದ ಹೇಳಿಕೆಯನ್ನು ಹಿಂತೆಗೆದುಕೊಳ್ಳಬೇಕು. ಪ್ರಶಾಂತ್ ಪೂಜಾರಿಯ ಮೇಲೆ ಯಾವುದೇ ಗೂಂಡಾಗಿರಿ ಕೇಸು ದಾಖಲಾಗಿಲ್ಲ. ತಕ್ಷಣದಲ್ಲಿ ಪ್ರಶಾಂತ್ ಪೂಜಾರಿ ಮನೆಯವರನ್ನು ಮತ್ತು ಜನರಲ್ಲಿ ಕ್ಷಮಾಪಣೆ ಕೇಳಿಕೊಳ್ಳಬೇಕು ಎಂದು ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರು ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಮಾಜಿ ಅಧ್ಯಕ್ಷರು ವಿಜಯ ಕುಮಾರ್ ಹೆಗ್ಡೆ, ಜಿಲ್ಲಾ ಪ್ರಧಾನ ಅಧ್ಯಕ್ಷರು ಪ್ರವೀಣ್ ಶೆಟ್ಟಿ, ಉಪಾಧ್ಯಕ್ಷರು ಗೀತಾಂಜಲಿ ಸುವರ್ಣ ಮತ್ತು ಸಂಧ್ಯಾ ರಮೇಶ್ ಉಪಸ್ಥಿತರಿದ್ದರು.

Write A Comment