ಮುಂಬೈ: ಭೂಗತ ಪಾತಕಿ ಛೋಟಾ ರಾಜನ್‍ನ ಪ್ರಸ್ತುತ ಆಸ್ತಿಯ ವಿವರವನ್ನು ಕಲೆ ಹಾಕಿರುವ ಮುಂಬಯಿ ಪೋಲೀಸರು ಆತನ ಆಸ್ತಿ ಸುಮಾರು ನಾಲ್ಕರಿಂದ ಐದು ಸಾವಿರ ಕೋಟಿ ರೂ.ಗಳಿರಬಹುದು ಎಂದು ಅಂದಾಜಿಸಿದ್ದಾರೆ.
ರಾಜನ್ ಒಟ್ಟು ಆಸ್ತಿಯಲ್ಲಿ ಶೇ.50 ರಷ್ಟು ಮುಂಬೈಯಲ್ಲಿದ್ದರೆ, ಚೀನಾ ಮತ್ತು ಜಕಾರ್ತಾದಲ್ಲಿ ಎರಡು ಹೋಟೆಲ್‍ಗಳನ್ನು, ಸಿಂಗಾಪುರ್ ಮತ್ತು ಥೈಲೆಂಡಿನಲ್ಲಿ ಆಭರಣ ಮಳಿಗೆಗಳನ್ನು ಹೊಂದಿದ್ದಾನೆ ಎಂದು ಮುಂಬಯಿಯ ಹಿರಿಯ ಪೋಲೀಸ್ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
90 ರ ದಶಕದಿಂದ ಇಲ್ಲಿಯವರೆಗೆ ಛೊಟಾ ರಾಜನ್‍ನ ಮೇಲೆ 75 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ ದಾವೂದ್ ಗ್ಯಾಂಗ್‍ನ 25 ಸದಸ್ಯರ ಕೊಲೆ ಆರೋಪ ರಾಜನ್‍ನ ಮೇಲಿದೆ.
ದಕ್ಷಿಣ ಆಫ್ರಿಕಾದ ಜಿಂಬಾಬ್ವೆಯಲ್ಲಿ ವಜ್ರವ್ಯಾಪಾರದಲ್ಲಿ ತೊಡಗಿಸಿಕಂಡಿದ್ದ ಛೋಟಾ ರಾಜನ್ ಅಲ್ಲಿಯೇ ನೆಲೆಯೂರಲು ಯತ್ನಿಸಿದ್ದ. ಮೂತ್ರಪಿಂಡ ತೊಂದರೆಯಿಂದ ಜಿಂಬಾಬ್ವೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜನ್, ದಾವೂದ್ ತನ್ನ ಮೇಲೆ ದಾಳಿ ನಡೆಸಬಹುದು ಎಂದು ಹೆದರಿ ಅಲ್ಲಿನ ಅಧಿಕಾರಿಗಳೊಂದಿಗೆ ಝಡ್‍ಪ್ಲಸ್ ರಕ್ಷಣೆ ಬಯಸಿ ಮನವಿ ಮಾಡಿದ್ದ. ಆದರೆ ಭಾರತಕ್ಕೆ ಹಲವಾರು ಕೊಲೆ ಪ್ರಕರಣಗಳಲ್ಲಿ ಬೇಕಾಗಿದ್ದ ರಾಜನ್‍ಗೆ ಜಿಂಬಾಬ್ವೆ ಆಶ್ರಯ ನೀಡಲು ನಿರಾಕರಿಸಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.
