ಬಾಲಿವುಡ್’ನಲ್ಲಿ ಧೂಂ ಮಚಾಲೆ ಸೃಷ್ಟಿಸಿದ್ದ ಧೂಂ ಸೀರಿಸ್’ನ ನಾಲ್ಕನೇ ಭಾಗದಲ್ಲಿ ಬಾಹುಬಲಿ ಚಿತ್ರ ಖ್ಯಾತಿಯ ಪ್ರಭಾಸ್ ಕಾಣಿಸಿಕೊಳ್ಳಲಿದ್ದಾರೆಯೇ…?
ಹೌದೆನ್ನುತ್ತಿದೆ ಕೆಲ ಮೂಲಗಳು… ಬಾಲಿವುಡ್’ನ ಅತಿರಥ ಮಹಾರಥರನ್ನು ಹಿಂದಿಕ್ಕಿ ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್ ಧೂಂ-4 ಚಿತ್ರಕ್ಕೆ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಧೂಂ 4 ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಸಲ್ಮಾನ್ ಖಾನ್, ಶಾರೂಕ್ ಖಾನ್ ಹೆಸರು ಕೇಳಿ ಬಂದಿದ್ದರೂ ಈಗ ಆ ರೋಲ್ ರೆಬಲ್ ಸ್ಟಾರ್ ಪ್ರಭಾಸ್ ಪಾಲಗಲಿದೆ ಎಂಬ ಮಾತುಗಳು ಬಿಟೌನಿಂದ ಕೇಳಿ ಬಂದಿದೆ.
ಪ್ರಭಾಸ್’ರ ಬಾಹುಬಲಿ ಚಿತ್ರದಿಂದ ಇಂಪ್ರೆಸ್ ಆಗಿರುವ ನಿರ್ದೇಶಕ ವಿಜಯ್ ಕೃಷ್ಣ ಆಚಾರ್ಯ ಮತ್ತು ಖ್ಯಾತ ನಿರ್ಮಾಪಕ ಆದಿತ್ಯ ಛೋಪ್ರಾ ಧೂಂ-3 ಚಿತ್ರದ ಮುಂದುವರಿದ ಭಾಗಕ್ಕೆ ಟಾಲಿವುಡ್ ನಟ ಪ್ರಭಾಸ್’ರನ್ನು ಖಳ ನಾಯಕನಾಗಿಸಲು ಆಸಕ್ತಿ ಹೊಂದಿದ್ದಾರೆ ಎಂದು ವರದಿಯಾಗಿದೆ.
ಧೂಂ-4 ಚಿತ್ರದ ಮೂಲಕ ಬಾಲಿವುಡ್ ಬಾಂಡ್ ಹೃತಿಕ್ ರೋಶನ್’ರೊಂದಿಗೆ ರೆಬೆಲ್ ಸ್ಟಾರ್ ಪ್ರಭಾಸ್ ಬಾಲಿವುಡ್ ಎಂಟ್ರಿ ಕೊಡಲಿದ್ದಾರೆ ಎಂದು ಉನ್ನತ ಮೂಲಗಳು ಹೇಳಿಕೊಂಡಿದೆ.
ಅಮೀರ್ ಖಾನ್ ಅಭಿನಯದ ಧೂಂ-3 ಚಿತ್ರದಂತೆ ಧೂಂ-4 ಚಿತ್ರದಲ್ಲೂ ಇಬ್ಬರು ವಿಲನ್’ಗಳಿರಲಿದ್ದು ಆ ಪಾತ್ರಗಳನ್ನು ಹೃತಿಕ್ ಮತ್ತು ಪ್ರಭಾಸ್ ಮಾಡಲಿದ್ದಾರೆ ಎಂಬ ಸುದ್ದಿ ಕೂಡ ಕೇಳಿಬರುತ್ತಿದೆ.
ಸದ್ಯದ ಬೆಳವಣಿಗೆ ಗಮನಿಸಿದರೆ ಧೂಂ-4 ಚಿತ್ರದಲ್ಲಿ ಪ್ರಭಾಸ್ ಇರಲಿದ್ದು, ಶೀಘ್ರದಲ್ಲೇ ಖ್ಯಾತ ಬಾಲಿವುಡ್ ನಿರ್ಮಾಪಕ ಸಂಸ್ಥೆ ಯಶ್ ರಾಜ್ ಫಿಲಂಸ್ ಚಿತ್ರದ ತಾರಾಗಣವನ್ನು ಬಗ್ಗೆ ಅಧಿಕೃತವಾಗಿ ಘೋಷಿಸಲಿದೆ ಎಂದು ಹೇಳಲಾಗುತ್ತಿದೆ.
*ಕಪ್ಪು ಮೂಗುತ್ತಿ
-ಉದಯವಾಣಿ,