ಮನೋರಂಜನೆ

ಬಿಗ್‌ ಬಾಸ್‌ಗೆ ಶ್ರುತಿ ಭಾವನ ಪೂಜಾ

Pinterest LinkedIn Tumblr

1280x720-QTsಬಿಗ್‌ ಬಾಸ್‌ನಲ್ಲಿ ಯಾರೆಲ್ಲಾ ಭಾಗವಹಿಸುತ್ತಿದ್ದಾರೆ? ಇಂಥದ್ದೊಂದು ಪ್ರಶ್ನೆಯನ್ನು ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ನಿರೂಪಕ ಸುದೀಪ್‌ ಮತು ಕಲರ್ಸ್‌ ಕನ್ನಡದ ಪರಮೇಶ್ವರ್‌ ಗುಂಡ್ಕಲ್‌ ಇಬ್ಬರ ಎದುರು ಇಟ್ಟಾಗ, ಇಬ್ಬರೂ ಆ ಪ್ರಶ್ನೆಗೆ ಉತ್ತರಿಸಲಿಲ್ಲ. ಸುದೀಪ್‌ ಅವರಂತೂ ತಮಗೆ ಯಾರ್ಯಾರು ಭಾಗವಹಿಸುತ್ತಿದ್ದಾರೆ ಎಂದೇ ಗೊತ್ತಿಲ್ಲ ಮತ್ತು ತಿಳಿದುಕೊಳ್ಳುವ ಆಸಕ್ತಿಯೂ ಇಲ್ಲ ಎಂದರು. ಸಸ್ಪೆನ್ಸ್‌ ಇದ್ದರೆ ಚೆನ್ನಾಗಿರುತ್ತದೆ ಮತ್ತು ಕಾರ್ಯಕ್ರಮಕ್ಕೆ ಇನ್ನಷ್ಟು ಮೈಲೇಜ್‌ ಸಿಗುತ್ತದೆ ಎಂಬುದು ಅವರ ತಾತ್ಪರ್ಯ.

ಒಂದು ಕಡೆ ಚಾನಲ್‌ನವರು “ಬಿಗ್‌ ಬಾಸ್‌’ ಕಾರ್ಯಕ್ರಮದಲ್ಲಿ ಯಾರ್ಯಾರು ಭಾಗವಹಿಸುತ್ತಾರೆ ಎಂಬ ವಿಷಯವನ್ನು ಗೌಪ್ಯವಾಗಿಟ್ಟರೆ, ಇನ್ನೊಂದು ಕಡೆ ಯಾರು ಭಾಗವಹಿಸಬಹುದು ಎಂಬ ಇನ್ನಷ್ಟು ಹೆಸರುಗಳು ಕೇಳಿ ಬರುತ್ತಿವೆ. ಈ ಬಾರಿಯ ಪಟ್ಟಿಯಲ್ಲಿರುವ ಹೆಸರುಗಳೆಂದರೆ ಶ್ರುತಿ, ಪೂಜಾ ಗಾಂಧಿ ಮತ್ತು ಭಾವನಾ ಬೆಳಗೆರೆಯವರದ್ದು. ಈ ಪೈಕಿ ಶ್ರುತಿ ಮತ್ತು ಪೂಜಾ ಗಾಂಧಿ ಅಭಿನಯ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದರೆ, ನಟ ಶ್ರೀನಗರ ಕಿಟ್ಟಿ ಅವರ ಪತ್ನಿ ಭಾವನಾ ಬೆಳಗೆರೆ ಪತ್ರಿಕೋದ್ಯಮದಲ್ಲಿ ಹೆಸರು ಮಾಡಿದವರು.

ಈ ಮೂವರು ಸಹ ಈ ಬಾರಿಯ “ಬಿಗ್‌ ಬಾಸ್‌’ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಇದೆ. ಅಲ್ಲದೆ ಮಾಸ್ಟರ್‌ ಆನಂದ್‌ ಸಹ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ.

ಇದಕ್ಕೂ ಮುನ್ನ ಮಾಧುರಿ, ಕೃತಿಕಾ, ಚಂದನ್‌, ರೆಹಮಾನ್‌, ಹುಚ್ಚ ವೆಂಕಟ್‌, “ನಾಗಮಂಡಲ’ದ ವಿಜಯಲಕ್ಷ್ಮೀ, ಮೈತ್ರೀಯಾ ಗೌಡ ಮುಂತಾದವರು ಭಾಗವಹಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಈಗ ಆ ಹೆಸರುಗಳ ಜೊತೆಗೆ ಇನ್ನಷ್ಟು ಹೆಸರುಗಳು ಸೇರಿಕೊಂಡಿದೆ. ಅಂತಿಮವಾಗಿ ಯಾರ್ಯಾರು ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಾಗಿ ಭಾಗವಹಿಸುತ್ತಾರೆ ಎಂಬುದು ಭಾನುವಾರ (ಅಕ್ಟೋಬರ್‌ 25) ಗೊತ್ತಾಗಲಿದೆ.
-ಉದಯವಾಣಿ

Write A Comment