ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಇದೇ ಮೊದಲ ಮೊದಲ ರಿಗೆ ಅಮ್ಮಂದಿರುಗಳಿಗಾಗಿ “ಸೈ ಟು ಡ್ಯಾನ್ಸ್’ ರಿಯಾಲಿಟಿ ಶೋ ನಡೆಸಲಾಗುತ್ತಿದೆ.ಅಂಥದ್ದೊಂದು ಹೊಸ ರಿಯಾಲಿಟಿ ಶೋಗೆ ಕೈ ಹಾಕಿರೋದು ಸುವರ್ಣ ವಾಹಿನಿ. ಈ ರಿಯಾಲಿಟಿ ಶೋನಲ್ಲಿ ಹತ್ತು ಮಂದಿ ಅಮ್ಮಂದಿರು ಭಾಗವಹಿಸುತ್ತಿದ್ದಾರೆ. ಈ ಶೋನಲ್ಲಿ ಆಟ, ಮನರಂಜನೆಯ ಜತೆಯಲ್ಲಿ ಕುಟುಂಬಕ್ಕೆ ಸಂಬಂಧಿಸಿದ ಕೆಲ ಟಾಸ್ಕ್ಗಳೂ ಇರಲಿವೆ. ದೇಶ,ವಿದೇಶ ಸಂಸ್ಕೃತಿಯ ಜತೆಯಲ್ಲಿ ಸಂಸ್ಕಾರಕ್ಕೆ ಅನುಗುಣವಾಗಿ ನೃತ್ಯಗಳ ವಿಷಯಗಳು ಇಲ್ಲಿರಲಿವೆ.
ಈ ರಿಯಾಲಿಟಿ ಶೋನ ವಿಶೇಷವೆಂದರೆ, ಕನ್ನಡ ಚಿತ್ರರಂಗದ ನಟಿಯರಾದ ಶೃತಿ, ಶರ್ಮಿಳಾ ಮಾಂಡ್ರೆ ಮತ್ತು ಐಂದ್ರಿತಾ ರೇ ಅವರು ತೀರ್ಪುಗಾರರಾಗಿ ಹತ್ತು ಮಂದಿ ಅಮ್ಮಂದಿರನ್ನು ಆಯ್ಕೆ ಮಾಡಲಿದ್ದಾರೆ. ಇವರಷ್ಟೇ ಅಲ್ಲ, ನಟ ಜಗ್ಗೇಶ್ ಸಹ ತೀರ್ಪುಗಾರರಾಗಿ ಕೆಲಸ ಮಾಡಲಿದ್ದಾರೆ. ಐಂದ್ರೀತಾ ರೇ ಅವರು ಜಗ್ಗೇಶ್ ಜತೆ ಸಾಥ್ ಕೊಡಲಿದ್ದಾರೆ. ಐಂದ್ರಿತಾ ರೇ ಈ ಹಿಂದೆ ವಾಹಿನಿಯೊಂದರಲ್ಲಿ ಉದಯ ಸಿಂಗರ್ ಎಂಬ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿದ್ದರು. ಈಗ ಜಗ್ಗೇಶ್ ಅವರೊಂದಿಗೆ “ಸೈ ಟು ಡ್ಯಾನ್ಸ್’ ರಿಯಾಲಿಟಿ ಶೋನ ಜಡ್ಜ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರತಿ ವಾರವೂ ಒಂದು ಎಲಿಮಿನೇಶನ್ ಸುತ್ತು ಇದ್ದು, ಒಬ್ಬಬ್ಬರು ಶೋನಿಂದ ಹೊರಗುಳಿಯುತ್ತಾರೆ. ಇನ್ನು, ಈ ರಿಯಾಲಿಟಿ ಶೋಗೆ ನಿರಂಜನ್ ದೇಶಪಾಂಡೆ ನಿರೂಪಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಸೈ ಟು ಡ್ಯಾನ್ಸ್ ಮೂಲಕ ಸುವರ್ಣ ವಾಹಿನಿ ಅಪ್ಪಟ ಮನರಂಜನೆ ಕೊಡಲು ಪ್ರಯತ್ನಿಸುತ್ತಿದೆ.
ಅಂದಹಾಗೆ, ಈ ಶೋ ಅಕ್ಟೋಬರ್ 24 ರಿಂದ ಪ್ರತಿ ಶನಿವಾರ ಹಾಗು ಭಾನುವಾರ ರಾತ್ರಿ 8 ಕ್ಕೆ ಪ್ರಸಾರವಾಗಲಿದೆ.
-ಉದಯವಾಣಿ