ಮಂಗಳೂರು, ಅ.20 : ಹೈದರಬಾದ್‌ನ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ನಿಗಮ ಮತ್ತು ಮೀನುಗಾರಿಕೆ ಇಲಾಖೆ ವತಿಯಿಂದ 92.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಜೆಪ್ಪು ಮಾರ್ಕೆಟ್ ಕಟ್ಟಡವನ್ನು ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಉದ್ಘಾಟಿಸಿದರು.
ಈ ಸಂದರ್ಭ ಮೇಯರ್ ಜೆಸಿಂತಾ ವಿಜಯ ಆಲ್ಫ್ರೆಡ್, ಶಾಸಕ ಜೆ.ಆರ್.ಲೋಬೊ, ಮುಡಾ ಅಧ್ಯಕ್ಷ ಕೋಡಿಜಾಲ್ ಇಬ್ರಾಹೀಂ, ಪಾಲಿಕೆ ಮುಖ್ಯ ಸಚೇತಕ ಎಂ.ಶಶಿಧರ ಹೆಗ್ಡೆ, ನಾನಾ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಹರಿನಾಥ್, ಕೇಶವ ಮರೋಳಿ, ದೀಪಕ್ ಪೂಜಾರಿ, ಪ್ರಕಾಶ್ ಬಿ.ಸಾಲಿಯಾನ್, ಮನಪಾ ಸದಸ್ಯರಾದ ರತಿಕಲಾ, ಕವಿತಾ ವಾಸು, ಅಪ್ಪಿ, ಮಹಾಬಲ ಮಾರ್ಲ, ಪ್ರೇಮಾನಂದ ಶೆಟ್ಟಿ, ಟಿ.ಕೆ.ಶೈಲಜಾ, ರಜನೀಶ್, ಮುಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.







