Messages

ಥೈರಾಯ್ಡ್..! ಶೇಕಡಾ 75ರಷ್ಟು ಜನರನ್ನು ಕಾಡುವ ರೋಗ

Pinterest LinkedIn Tumblr

thyrod_prblm_pic

ಥೈರಾಯ್ಡ್ ಈ ಹೆಸರು ಕೇಳಿದರೆ ಸಾಕು ಇತ್ತೀಚೆಗೆ ಜನ ಬೆಚ್ಚಿಬೀಳುತ್ತಿದ್ದಾರೆ. ಶೀತ-ನೆಗಡಿಯಂತೆ ಸಾಮಾನ್ಯವಾಗಿ ಕಾಡುವ ಕಾಯಿಲೆಗಳಲ್ಲಿ ಇದೀಗ ಥೈರಾಯ್ಡ್ ಕೂಡ ಒಂದು. ಶೇಕಡಾ 75ರಷ್ಟು ಜನರನ್ನು ಕಾಡುವ ಈ ಸಮಸ್ಯೆಗೆ ಪ್ರಮುಖ ಕಾರಣ, ಆಹಾರ, ಹಾಗೂ ಜೀವನ ಶೈಲಿ. ಒತ್ತಡ, ಆತಂಕ,ಚಿಂತೆ ಥೈರಾಯ್ಡೆ ಸಮಸ್ಯೆಗೆ ಮೂಲಕ. ಹಾಗಾಂತ ಇದು ಭಯಾನಕ ಕಾಯಿಲೆಯೇನು ಅಲ್ಲ. ನಮ್ಮ ದೇಹದಲ್ಲಿನ ಪ್ರಮುಖ ಅಂಗಗಳಲ್ಲಿ ಒಂದಾದ ಥೈರಾಯ್ಡ್ ಶ್ರವಿಸುವ ಹಾರ್ಮೋನುಗಳು ಸರಿಯಾಗಿದ್ದರೆ ದೇಹದ ಎಲ್ಲಾ ಚಟುವಟಿಕೆಗಳು ನಾರ್ಮಲ್ ಆಗಿ ಇರುತ್ತದೆ. ಆದರೆ ಇದರ ಶ್ರವಿಸುವಿಕೆ ಹೆಚ್ಚಾದರೆ, ಹೈಪರ್ ಥೈರಾಯ್ಡ್, ಹಾಗೂ ಕಡಿಮೆಯಾದರೆ ಹೈಪೋ ಥೈರಾಯ್ಡ್ ಸಮಸ್ಯೆ ಉಂಟಾಗುತ್ತದೆ. ದೇಹದಲ್ಲಿ ಕ್ಯಾಲ್ಸಿಯಂ, ಐಯೋಡಿನ್ ಕೊರತೆಯಿಂದ ಈ ಸಮಸ್ಯೆ ಉಂಟಾಗುತ್ತದೆ.

ಇದಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದುಕೊಂಡರೆ, ಯಾವುದೇ ಅಪಾಯವಿಲ್ಲ. ಆದರೆ ಪ್ರೀಕಾಷನ್ ಇಸ್ ಬೆಟರ್ ದೆನ್ ಕ್ಯೂರ್ ಅನ್ನುವ ಹಾಗೆ ರೋಗ ಬರುವ ಮೊದಲೆ ಮುಂಜಾಗೃತೆ ವಹಿಸುವುದು ಸೂಕ್ತ. ತಿನ್ನುವ ಆಹಾರದಲ್ಲೇ ಈ ಸಮಸ್ಯೆನ್ನು ನಿಯಂತ್ರಿಸಬಹುದು. ಇದಕ್ಕಿದೆ ಕೆಲವೊಂದು ಆರೋಗ್ಯ ಸೂತ್ರಗಳು.. ಬೆಳ್ಳುಳ್ಳಿ ಸೇವನೆಯಿಂದ ಥೈರಾಯ್ಡ್ ಸಮಸ್ಯೆಯನ್ನು ತಡೆಗಟ್ಟಬಹುದು. ಇದರಲ್ಲಿ ಸೆಲಿನಿಯೋಮ್ ಎಂಬ ಅಂಶ ಅಧಿಕವಿದ್ದು, ಇದು ಥೈರಾಯ್ಡೆ ಗ್ರಂಥಿಗಳನ್ನು ನಿಯಂತ್ರಿಸುತ್ತದೆ. ಮೀನಿನಲ್ಲಿ ಐಯೋಡಿನ್ ಅಂಶ ಹೆಚ್ಚಾಗಿದ್ದು, ಇದರ ಸೇವನೆ ಉತ್ತಮ. ಪ್ರತಿದಿನ ಮೀನು ತಿನ್ನುವುದರಿಂದ ಥೈರಾಯ್ಡೆ ಹಾರ್ಮಾನುಗಳನ್ನು ನಿಯಂತ್ರಣದಲ್ಲಿಡಬಹುದು. ಉಡುಗೆ ಎಣ್ಣೆಗೆಯಾಗಿ ತೆಂಗಿನಎಣ್ಣೆ ಬಳಸುವುದುದು ಉತ್ತಮ. ಇದು ಥೈರಾಯ್ಡೆ ನಿಯಂತ್ರಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಸೋಪ್ಪು ತರಾಕಾರಿಗಳನ್ನು ಸೇವಿಸುವುದು ಉತ್ತಮ. ಇವುಗಳಲ್ಲಿ ವಿಟಮಿನ್ , ಪ್ರೋಟೀನ್, ಖನಿಜಾಂಶ ಹಾಗೂ ಒಮೆಗಾ 3 ಕೊಬ್ಬಿನಾಂಶವಿರುತ್ತದೆ. ಇದು ಮಲಬದ್ದತೆಯಿಂದ ದೂರ ಮಾಡುತ್ತದೆ. ಮೊಟ್ಟೆ ಸೇವನೆ ಕೂಡ ಥೈರಾಯ್ಡ್ ಸಮಸ್ಯೆಯಿಂದ ಬಳಲುವವರಿಗೆ ಉತ್ತಮ. ಇದರಲ್ಲಿ ಕ್ಯಾಲ್ಸಿಯಂ ಹಾಗೂ ಐಯೋಡಿನ್ ಇರುತ್ತದೆ. ಇನ್ನೂ ಎಲ್ಲರ ನೆಚ್ಚಿನ ಪ್ರೂಟ್ ಗಳಲ್ಲಿ ಒಂದಾದ ಸ್ಟ್ರಾಬೇರಿಯಲ್ಲಿ ಐಯೋಡಿನ್ ಅಂಶ ಹೆಚ್ಚಾಗಿದ್ದು, ಇದರ ಸೇವನೆ ಥೈರಾಯ್ಡ್ ನಿಯಂತ್ರಣದಲ್ಲಿ ಮುಖ್ಯ ಕಾರ್ಯ ನಿರ್ವಹಿಸುತ್ತದೆ.

Write A Comment