ಕನ್ನಡ ವಾರ್ತೆಗಳು

ಮೆಡಿಕಲ್ ಬಂದ್: ಉಡುಪಿ ಜಿಲ್ಲೆಯಲ್ಲಿ ಎಲ್ಲೆಲ್ಲಿ ಔಷಧಿ ಸಿಗುತ್ತೆ ನೋಡಿ

Pinterest LinkedIn Tumblr

Medical Shop_4C--621x414

ಉಡುಪಿ: ರಾಷ್ಟ್ರವ್ಯಾಪಿ ಮೆಡಿಕಲ್ ಶಾಪ್ ಬಂದ್‍ಗೆ ಅಕ್ಟೋಬರ್ 14 ರಂದು ಕರೆ ನೀಡಿರುವ ಹಿನ್ನಲೆಯಲ್ಲಿ ಸಾರ್ವಜನಿಕರು ಆತಂಕ ಪಡದೆ ತಮಗೆ ಬೇಕಾದ ತುರ್ತು ಔಷಧಿಗಳನ್ನು ಉಡುಪಿಯ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಮಿತ್ರ ಆಸ್ಪತ್ರೆ ಓಲ್ಡ್ ಪೋಸ್ಟ್ ಆಫೀಸ್ ಹತ್ತಿರ ಉಡುಪಿ, ಲ್ಯಾಂಬರ್ಡ್ ಮೆಮೋರಿಯಲ್ ಹಾಸ್ಪಿಟಲ್ ಡ್ರಗ್ಸ್ ಸ್ಟೋರ್ಸ್ ಉಡುಪಿ, ಹೈಟೆಕ್ ಮೆಡಿಕೇರ್ ಮೆಡಿಕಲ್ಸ್ ಅಂಬಲಪಾಡಿ ಉಡುಪಿ, ಸಿಟಿ ಹಾಸ್ಪಿಟಲ್ ಆ್ಯಂಡ್ ಡಯಗ್ನೋಸ್ಟಿಕ್ ಸೆಂಟರ್ ಪ್ರೈ.ಲಿಮಿಟೆಡ್ ಉಡುಪಿ, ಟಿ.ಎಂ.ಎ ಪೈ ಹಾಸ್ಪಿಟಲ್ ಉಡುಪಿ, ಕಮಲ.ಎ.ಬಾಳಿಗ ಮೆಡಿಕಲ್ ಸೆಂಟರ್ ಹಾರಾಡಿ, ಡಾ.ಎ.ವಿ ಬಾಳಿಗ ಮೆಮೊರಿಯಲ್ ಮೆಡಿಕಲ್ ಸ್ಟೋರ್ಸ್ ದೊಡ್ಡನಗುಡ್ಡೆ ಉಡುಪಿ, ಕಸ್ತೂರ್ಬಾ ಹಾಸ್ಪಿಟಲ್ ಮೆಡಿಕಲ್ ಸ್ಟೋರ್ಸ್ ನಂ.3 ಮಣಿಪಾಲ ಉಡುಪಿ, ಕಸ್ತೂರ್ಬಾ ಹಾಸ್ಪಿಟಲ್ ಮೆಡಿಕಲ್ ಸ್ಟೋರ್ಸ್ ನಂ.2 ಮಣಿಪಾಲ ಉಡುಪಿ, ಕಸ್ತೂರ್ಬಾ ಹಾಸ್ಪಿಟಲ್ ಮೆಡಿಕಲ್ ಸ್ಟೋರ್ಸ್ ನಂ.4 ಮಣಿಪಾಲ ಉಡುಪಿ, ನ್ಯೂ ಸಿಟಿ ಹಾಸ್ಪಿಟಲ್ ಫಾರ್ಮಸಿ ಉಡುಪಿ, ಗೊರಟ್ಟಿ ಹಾಸ್ಪಿಟಲ್ ಮೆಡಿಕಲ್ ಸ್ಟೋರ್ಸ್ ಸಂತೆಕಟ್ಟೆ ಉಡುಪಿ, ಪ್ರಣವ್ ಮೆಡಿಕಲ್ಸ್ ಬ್ರಹ್ಮಾವರ ಉಡುಪಿ, ಫಾರ್ಮಾ ಪ್ರಸಾದ್ ನೇತ್ರಾಲಯ ಉಡುಪಿ, ಕಸ್ತೂರ್ಬಾ ಹಾಸ್ಪಿಟಲ್ ಮೆಡಿಕಲ್ ಬಲ್ಕ್ ಸ್ಟೋರ್ ಮಣಿಪಾಲ ಉಡುಪಿ ಇಲ್ಲಿಂದ ಪಡೆಯಬಹುದು.

ಕುಂದಾಪುರದ ಎನ್. ಆರ್. ಆಚಾರ್ಯ ಮೆಮೊರಿಯಲ್ ಹಾಸ್ಪಿಟಲ್ ಫಾರ್ಮಸಿ, ಕೋಟೇಶ್ವರ, ಚಿನ್ಮಯಿ ಹಾಸ್ಪಿಟಲ್ ಮೆಡಿಕಲ್ ಸ್ಟೋರ್ ಕುಂದಾಪುರ, ಸರ್ಜಿಯನ್ಸ್ ಹಾಸ್ಪಿಟಲ್ ಮೆಡಿಕಲ್ ಸ್ಟೋರ್ ಕೋಟೇಶ್ವರ, ಆದರ್ಶ್ ಮೆಡಿಕಲ್ಸ್ ಕುಂದಾಪುರ, ಶ್ರೀಮಾತಾ ಹಾಸ್ಪಿಟಲ್ ಮೆಡಿಕಲ್ ಸ್ಟೋರ್ಸ್ ಕುಂದಾಪುರ, ವಿನಯ ಹಾಸ್ಪಿಟಲ್ ಫಾರ್ಮಾ ಕುಂದಾಪುರ, ಮಂಜುನಾಥ ಮೆಡಿಕಲ್ಸ್ ಕುಂದಾಪುರ ಇಲ್ಲಿಂದ ಪಡೆಯಬಹುದಾಗಿದೆ.

ಕಾರ್ಕಳದ ಟಿ.ಎಂ.ಎ ಪೈ ರೋಟರಿ ಹಾಸ್ಪಿಟಲ್ ಮೆಡಿಕಲ್ ಸ್ಟೋರ್ಸ್ ಕಾರ್ಕಳ, ನಿಟ್ಟೆ ಗಾಜ್ರಿಯ ಸ್ಪೆಷಾಲಿಟಿ ಮೆಡಿಕಲ್ ಸ್ಟೋರ್ಸ್ ಇಲ್ಲಿಂದ ಪಡೆಬಹುದಾಗಿದೆ ಎಂದು ಸಹಾಯಕ ಔಷಧ ನಿಯಂತ್ರಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

(ಸಾಂದರ್ಭಿಕ ಚಿತ್ರ)

Write A Comment