ಕುಂದಾಪುರ: ವಿವಾಹಿತ ಮಹಿಳೆಯೋರ್ವರ ಮನೆಗೆ ನುಗ್ಗಿದ ವ್ಯಕ್ತಿಯೋರ್ವ ಮಹಿಳೆಯ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯ ಆರ್ಡಿ ಎಂಬಲ್ಲಿ ನಡೆದಿದೆ.
ಮಹಿಳೆ ಮನೆಗೆ ಏಕಾಏಕಿಯಾಗಿ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯನ್ನು ಕೃಷ್ಣ ಅಲಿಯಾಸ್ ಹಂದಿ ಕೃಷ್ಣ (46) ಎನ್ನಲಾಗಿದೆ.
ರಾತ್ರಿ ವೇಳೆ ಆಕೆ ಮನೆಗೆ ನುಗ್ಗಿದ ಈತ ಮಾನಭಂಗಕ್ಕೆ ಯತ್ನಿಸಿದ್ದಾನೆ. ಇದೇ ವೇಳೆ ಮಹಿಳೆ ಕೂಗಿಕೊಂಡಿದ್ದು ಅಕ್ಕಪಕ್ಕದವರು ಬರುವ ಭಯದಲ್ಲಿ ಈತ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಆರೋಪಿಯೂ ವಿವಾಹಿತನಾಗಿದ್ದಾನೆ ಎನ್ನಲಾಗಿದೆ.
ಘಟನೆ ಬಳಿಕ ತಲೆಮೆರೆಸಿಕೊಂಡಿದ್ದ ಆರೋಪಿಯನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.