ವರದಿ : ಈಶ್ವರ ಎಂ. ಐಲ್/ ಚಿತ್ರ,: ದಿನೇಶ್ ಕುಲಾಲ್
ಮುಂಬಯಿ : ಮಹಾನಗರದ ಸಂಘಟಕ, ಸಮಾಜ ಸೇವಕ ಕರ್ನಾಟಕ ವಿಶ್ವಕರ್ಮ ಅಸೋಶಿಯೇಶನ್, ಗೋರೆಗಾಂವ್ ಕರ್ನಾಟಕ ಸಂಘದ ಮಾಜಿ ಅದ್ಯಕ್ಷ, ಜೋಗೇಶ್ವರಿ ಜಗದಂಬಾ ಕ್ಷೇತ್ರದ ಆಡಳಿತ ಮೊಕ್ತೇಸರ ಜಿ. ಟಿ. ಆಚಾರ್ಯರ 60ನೇ ಜನ್ಮದಿನದ ಆಚರಣೆಯ ನಿಮಿತ್ತ ಅಭಿಮಾನಿ ಬಳಗದವರಿಂದ ಅ. 11 ರಂದು ಮಾಟುಂಗಾ ವಿಶ್ವೇಶ್ವರಯ ಸಭಾಗೃಹದಲ್ಲಿ ತುಂಬಿದ ಅಭಿಮಾನಿಗಳು ಜಿ. ಟಿ. ಆಚಾರ್ಯ ದಂಪತಿಯನ್ನು ಸನ್ಮಾನಿಸಿ ಅಭಿನಂದಿಸಿದರು.
ದಿನ ಪೂರ್ತಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆದ ಈ ಸಮಾರಂಭವನ್ನು ವೀರಕೇಸರಿ ಕಲಾವೃಂದದ ಅಧ್ಯಕ್ಷ ಪಯ್ಯಾರು ರಮೇಶ ಶೆಟ್ಟಿಯವರು ಉದ್ಘಾಟಿಸಿದರು.
ಅಭಿನಂದನಾ ಸಮಿತಿಯ ಅಧ್ಯಕ್ಷ ಉದ್ಯಮಿ ಕಡಂದಲೆ ಸುರೇಶ್ ಭಂಡಾರಿ ಎಲ್ಲಾ ಸಂಘಟನೆಗಳೊಂದಿಗೆ, ಜಾತಿ ಭಾಂಧವರೊಂದಿಗೆ ಸಮಾನವಾಗಿ ಬೆರೆಯುತ್ತಾ ಬಂದಿರುವ ಜಿ.ಟಿ. ಆಚಾರ್ಯರು ಅಭಿನಂದನಾರ್ಹರು ಎಂದರು.ಜಿ. ಟಿ. ಆಚಾರ್ಯರ ಅಭಿನಂದನಾ ಗೃಂಥ ’ಶ್ನೇಹ ಸಂಪದ’ ಜಯಕೃಷ್ನ ಪರಿಸರ ಪ್ರೇಮಿಯ ಸಂಸ್ಥಾಪಕ ಜಯ ಕೃಷ್ಣ ಶೆಟ್ಟಿಯವರು ಬಿಡುಗಡೆ ಗೊಳಿಸಿ ಮಾತನಾಡುತ್ತಾ ನೇರ ನುಡಿಯ ಜಿ.ಟಿ. ಯವರಿಗೆ ಈ ಗ್ರಂಥದ ಹೆಸರು ಅನ್ವಹಿಸುತ್ತದೆ ಎನ್ನುತ್ತಾ ಜಿ. ಟಿ. ಆಚಾರ್ಯ ದಂಪತಿಯನ್ನು ಅಭಿನಂದಿಸಿದರು.
ವಿಶ್ವಕರ್ಮ ಅಸೋಶಿಯೇಶನ್ ನ ಅಧ್ಯಕ್ಷ ನಿಟ್ಟೆ ದಾಮೋದರ ಆಚಾರ್ಯ, ಹೋಟೇಲು ಉದ್ಯಮಿ ಜಯರಾಂ ಶೆಟ್ಟಿ, ಜಯಕೃಷ್ನ ಪರಿಸರ ಪ್ರೇಮಿಯ ನೂತನ ಅಧ್ಯಕ್ಷ ಧರ್ಮಪಾಲ ದೇವಾಡಿಗ, ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ, ಶ್ರೀಧರ್ ವಿ. ಆಚಾರ್ಯ ಮೊದಲಾದವರು ಮಾತನಾಡಿ ಜಿ. ಟಿ. ಯವರ ಸಮಾಜ ಸೇವೆಯನ್ನು ಪ್ರಶಂಸಿಸಿದರು.
ಅಭಿನಂದನೆಗೆ ಉತ್ತರಿಸಿದ ಜಿ. ಟಿ. ಆಚಾರ್ಯರು ನಾವೂ ಇನ್ನೊಬ್ಬರಿಗೆ ಮಾಡುವ ಉತ್ತಮ ಯಾ ಕೆಟ್ಟ ಕೆಲಸವು ನಮಗೆ ಮಾಡಿದಂತೆ. ಯುವಕರು ಸಂಘ ಸಂಸ್ಥೆಗಳಿಂದ ದೂರ ಸರಿಯಬಾರದು ಎನ್ನುತ್ತಾ ಎಲ್ಲರಿಗೂ ಕೃತಜ್ನತೆಯನ್ನು ಸಲ್ಲಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಸಾಲ್ಯಾನ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಟಿ. ಜಿ. ಆಚಾರ್ಯ ನಿರ್ವಹಿಸಿದ್ದು ಗಣೇಶ್ ಆಚಾರ್ಯ ವಂದನಾರ್ಪಣೆ ಮಾಡಿದರು.
ವೇದಿಕೆಯಲ್ಲಿ ಜೋಗೇಶ್ವರಿ ಜಗದಂಬಾ ಕ್ಷೇತ್ರದ ವಿಶ್ವಸ್ಥ ಬಾಬು ಪೂಜಾರಿ, ಕೋಶಾಧಿಕಾರಿ ಎಸ್. ಕೆ. ಸುಂದರ್ ಉಪಸ್ಥಿತರಿದ್ದರು. ಅಭಿನಂದನಾ ಸಮಾರಂಭದಲ್ಲಿ ಜಿ.ಟಿ. ಯವರ ಪತ್ನಿ ಉಷಾ, ಪುತ್ರಿ ಸ್ವೇತಾ, ಅಳಿಯ ಪ್ರದೀಪ್ ಹಾಗೂ ಮೊಮ್ಮಗ ಮಿತಾಂಶ್ ಉಪಸ್ಥಿತರಿದ್ದರು. ವಿವಿಧ ಸಂಘಟನೆಗಳ ಪ್ರಮುಖರು ಆಗಮಿಸಿ ಜಿ. ಟಿ. ಆಚಾರ್ಯರನ್ನು ಅಭಿನಂದಿಸಿದರು.






