ಲಂಡನ್: ಜಗತ್ತಿನ 12 ಮೆಟ್ರೋಪಾಲಿಟನ್‍ಗಳ ಕುರಿತು ಸಾವಿಲ್ಸ್ ಎಂಬ ವಿಶ್ಲೇಷಣಾ ಸಂಸ್ಥೆ ಸಮೀಕ್ಷೆ ನಡೆಸಿದ್ದು ಈ ಪಟ್ಟಿಯಲ್ಲಿ ಮುಂಬೈ ಅಗ್ಗದ ನಗರವಾಗಿದೆ.
ಈ ಪಟ್ಟಿಯಲ್ಲಿ ಲಂಡನ್ ಮೊದಲ ಸ್ಥಾನದಲ್ಲಿದ್ದರೆ ಹಾಂಕಾಂಗ್ ಮತ್ತು ನ್ಯೂಯಾರ್ಕ್ ನಂತರದ ಸ್ಥಾನಗಳಲ್ಲಿವೆ. ಕಂಪನಿಯೊಂದು ಮುಂಬೈನಲ್ಲಿ ತನ್ನ ಉದ್ಯೋಗಿಯನ್ನು ನಿಯೋಜಿಸಲು ವಾರ್ಷಿಕ 29,088 ಡಾಲರ್ ವೆಚ್ಚವಾಗಲಿದೆ.
ಅದೇ ಲಂಡನ್‍ನಲ್ಲಿ ಈ ಮೊತ್ತ 1,18,425 ಡಾಲರ್‍ಗಳಾಗಿದೆ. 2008ರಲ್ಲಿನ ವೆಚ್ಚಕ್ಕೆ ಹೋಲಿಸಿದರೆ ಮುಂಬೈನಲ್ಲಿನ ವೆಚ್ಚ ಶೇ.2.4ರಷ್ಟು ಮಾತ್ರ ಏರಿಕೆ ಕಂಡಿದ್ದರೆ ಲಂಡನ್‍ನಲ್ಲಿ ಶೇ.20.7ರಷ್ಟು ಹೆಚ್ಚಿದೆ.