ಅಂತರಾಷ್ಟ್ರೀಯ

132 ಕೋಟಿ ರೂ. ಲಾಟರಿ ಹೊಡೆದು ರಾತ್ರೋ ರಾತ್ರಿ ಕುಬೇರನಾದ ಯೋಧ…!

Pinterest LinkedIn Tumblr

winner

ಲಂಡನ್, ಅ.11: ಕೇವಲ 25 ಪೈಸೆ ಲಾಟರಿ ಗೇಮ್ ಒಂದರಲ್ಲಿ ಆಟವಾಡಿ ದಿನ ಬೆಳಗಾಗುವು ದರೊಳಗೆ ಕೋಟ್ಯಾಧಿಪತಿಯಾದ ಬ್ರಿಟನ್‌ನ ಯೋಧನೊಬ್ಬ ಕಥೆಯಿದು. 26ರ ಹರೆಯದ ಜಾನ್ ಹೆವುಡ್ ಬ್ರಿಟನ್‌ನ ಕ್ರ್ಯೂ ಪ್ರಾಂತದವನು. ಈ ಯೋಧ ತನ್ನ ಕರ್ತವ್ಯದ ಮೇಲೆ ಅಫ್ಘಾನಿಸ್ತಾನ ಕೂಡ ಸುತ್ತಿದ್ದಾನೆ. ಒಂದು ದಿನ ಆನ್‌ಲೈನ್‌ನಲ್ಲಿ ಆಟವಾಡುತ್ತಿದ್ದಾಗ ಈ ಟಿಕೆಟ್ ಖರೀದಿಸಿದ್ದನು. ಈ ಟಿಕೆಟ್‌ಗೆ ಅದೃಷ್ಟವಶಾತ್ 13.2 ದಶಲಕ್ಷ ಪೌಂಡ್‌ಗಳ (132 ಕೋಟಿ 13 ಲಕ್ಷ 83 ಸಾವಿರದ 800 ರೂ.ಗಳಿಗೂ ಹೆಚ್ಚು ) ಭಾರೀ ಮೊತ್ತದ ಲಾಟರಿ ಎದ್ದಿತು. ಈ ಲಾಟರಿ ಹಣ ಕೈಗೆ ಬಂದೊಡನೆ ಈ ಯೋಧ ಮಾಡಿದ ಕೆಲಸ ಮಾತ್ರ ಮನಮಿಡಿಯುವಂತಹುದು. ತನ್ನ ಅಜ್ಜನ ಚಿಕಿತ್ಸೆಗೆ ಹಣವಿಲ್ಲದೆ ಅಸುನೀಗಿದ್ದನ್ನು ಕಂಡಿದ್ದ ಈ ಸೈನಿಕ ಕಾಯಿಲೆಯಿಂದ ನರಳುತ್ತಿದ್ದ ತನ್ನ ತಂದೆಯನ್ನು ಉಳಿಸಿಕೊಳ್ಳಲು ಭಾರೀ ಪ್ರಮಾಣದಲ್ಲಿ ಔಷಧಿ ಖರೀದಿಸಿದ್ದ. ಹೃದಯ ಮತ್ತು ಶ್ವಾಸಕೋಶ ಸೋಂಕಿನಿಂದ ತಂದೆ ಬಳಲುತ್ತಿದ್ದುದನ್ನು ಜಾನ್ ಹೆವುಡ್ ಕಂಡಿದ್ದ.

ಲಾಟರಿಯಲ್ಲಿ ತನಗೆ ಲಕ್ಷ್ಮಿ ಕಟಾಕ್ಷವಾದ ನಂತರ ಮಾತನಾಡಿದ ಹೆವುಡ್, ನಿಜಕ್ಕೂ ನಾನು ಇಂಥ ಒಂದು ಕ್ಷಣವನ್ನು ನಿರೀಕ್ಷಿಸಿರಲಿಲ್ಲ. ನನಗೆ ದೊರೆತಿರುವ 1,32,13,838.68 ಪೌಂಡ್ ಹಣದಲ್ಲಿ ಐಷಾರಾಮಿ ಕಾರೊಂದನ್ನು ಖರೀದಿಸುವೆ ಎಂದಿದ್ದಾನೆ.

ಆದರೆ ನನ್ನ ಮೊದಲ ಆದ್ಯತೆ ಹೃದಯ ಮತ್ತು ಶ್ವಾಸಕೋಶದ ಕಾಯಿಲೆಯಿಂದ ನರಳುತ್ತಿರುವ ನನ್ನ ತಂದೆಗೆ ಚಿಕಿತ್ಸೆ ಮತ್ತು ಔಷಧ ಕೊಡಿಸುವುದು ಎನ್ನುತ್ತಾನೆ ಹೆವುಡ್. ನಿಜಕ್ಕೂ ಹೆವುಡ್‌ನ ಈ ಮಾನವೀಯ ಪ್ರೀತಿ ಮೆಚ್ಚತಕ್ಕದ್ದೇ. ಏಕೆಂದರೆ, ನನ್ನ ತಂದೆ ಅಥವಾ ಕುಟುಂಬದವರ ಆರೋಗ್ಯ ರಕ್ಷಣೆ ನನ್ನ ಆದ್ಯ ಕರ್ತವ್ಯ. ಅದಾದ ಬಳಿಕ ಉಳಿದೆಲ್ಲ ವಿಷಯಗಳು. ನನ್ನ ತಂದೆ ಮಾಮೂಲಿನಂತೆ ಆರೋಗ್ಯವಂತನಾಗಬೇಕು. ಅದಕ್ಕೆ ಎಷ್ಟೇ ಹಣ ಖರ್ಚಾದರೂ ಚಿಕಿತ್ಸೆ ಕೊಡಿಸಬೇಕು ಎನ್ನುತ್ತಾನೆ ಈ ಸೈನಿಕ. ಒಂದು ಐಷಾರಾಮಿ ಕಾರು ಹೊರತಾಗಿ ಇನ್ನೂ ಏನನ್ನು ಕೊಳ್ಳಬೇಕು ಎಂಬುದು ನನಗೆ ತೋಚುತ್ತಿಲ್ಲ. ಹಾಗಾಗಿ ಯೋಚಿಸುತ್ತಿದ್ದೇನೆ. ಐಷಾರಾಮಿ ಕಾರೊಂದರ ಮಾಲೀಕನಾಗುತ್ತೇನೆ ಎಂಬುದೂ ಕೂಡ ನನ್ನ ಕನಸ್ಸಿನಲ್ಲಿಯೂ ಇರಲಿಲ್ಲ.

ವಿಶೇಷವೆಂದರೆ ಹೆವುಡ್ ನಿಜಕ್ಕೂ ಅಪರೂಪದ ಮನುಷ್ಯ. ಅವನಿಗೆ ಲಾಟರಿ ಬಂದದ್ದು, ಅ.6ರಂದು. ಹಣ ಕೈಗೆ ಬಂದದ್ದು 3 ದಿನಗಳ ಹಿಂದಷ್ಟೇ. ಅಂದೂ ಕೂಡ ಹೆವುಡ್ ತನ್ನ ಕರ್ತವ್ಯಕ್ಕೆ ಹಾಜರಾಗಿದ್ದ ! ಹೆವುಡ್ ಈ ಲಾಟರಿ ಗೆದ್ದಿರುವುದು ಮೆಗಾ ಮೂಲಹ್ ಎಂಬ ಆನ್‌ಲೈನ್ ಬೆಟ್ವೇ ಗೇಮ್ ಮೂಲಕ. ಅವನು ಈ ಗೇಮ್ ಆಡಿದ್ದು ಕೂಡ ತನ್ನ ಟ್ಯಾಬ್‌ನಲ್ಲಿ. ನಮಗೆ ಹೆವುಡ್ ಲಾಟರಿ ಗೆದ್ದುದಕ್ಕಿಂತಲೂ ಇವನು ಪಡೆದ ಆ ಹಣದಿಂದ ಅವನ ಕುಟುಂಬದವರು ಸುಖ, ಸಂತೋಷದಿಂದ ಇರುತ್ತಾರೆ ಎಂಬುದು ನಮಗೆ ಹೆಚ್ಚಿನ ಸಂತಸ ತಂದಿದೆ ಎನ್ನುತ್ತಾರೆ ಬೆಟ್ವೇ ಗೇಮ್ ವಕ್ತಾರ ಅಲನ್ ಅಲ್ಗರ್.

Write A Comment