ಬೆಂಗಳೂರು: ಇಬ್ಬರು ರೇಪ್ ಮಾಡಿದರೆ ಅದು ಗ್ಯಾಂಗ್ ರೇಪ್ ಹೇಗಾಗುತ್ತೆ? ಗ್ಯಾಂಗ್ ರೇಪ್ ಅಂದ್ರೆ ಮೂರು, ನಾಲ್ಕು ಜನ ಸೇರಿ ಕೃತ್ಯ ಎಸಗಿದರೆ ಗ್ಯಾಂಗ್ ರೇಪ್ ಅಂತ ಹೇಳಬಹುದು!…ಇದು ಗೃಹ ಸಚಿವ ಕೆಜೆ ಜಾರ್ಜ್ ಅವರ ಹೊಸ ವ್ಯಾಖ್ಯಾನ!
ಇತ್ತೀಚೆಗೆ ಮಡಿವಾಳದಲ್ಲಿ ನಡೆದ ಗ್ಯಾಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರು ಜಾರ್ಜ್ ಅವರ ಬಳಿ ಪ್ರತಿಕ್ರಿಯೆ ಕೇಳಿದಾಗ ಕೊಟ್ಟ ಉತ್ತರ ಇದು…ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ತಮ್ಮ ಹೇಳಿಕೆಗೆ ಜಾರ್ಜ್ ಕ್ಷಮೆಯಾಚಿಸಿದ್ದಾರೆ.
ಇಬ್ಬರು ರೇಪ್ ಮಾಡಿದರೆ ಗ್ಯಾಂಗ್ ರೇಪ್ ಹೇಗಾಗುತ್ತೆ? ಅಂತ ಪ್ರಶ್ನಿಸಿ ಜಾರ್ಜ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಮಾಧ್ಯಮಗಳಲ್ಲಿ ಕೆಟ್ಟ ಸುದ್ದಿಯ ವೈಭವೀಕರಣ ಆಗುತ್ತಿದೆ ಎಂದು ಅಸಮಾಧಾನವ್ಯಕ್ತಪಡಿಸಿದ್ದರು. ಅತ್ಯಾಚಾರ ಪ್ರಕರಣದ ಕುರಿತಂತೆ ಅಸಂಬದ್ಧ ಹೇಳಿಕೆ ನೀಡಿದ್ದ ಸಚಿವ ಜಾರ್ಜ್ ವಿರುದ್ಧ ಮಹಿಳಾ ಆಯೋಗ ಕಿಡಿಕಾರಿದ್ದು, ನೋಟಿಸ್ ಜಾರಿ ಮಾಡುವುದಾಗಿ ತಿಳಿಸಿದೆ.
ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಕೂಡಾ ಅತ್ಯಾಚಾರ ಪ್ರಕರಣದ ಕುರಿತಂತೆ ಹಲವು ಬೇಜವಾಬ್ದಾರಿ ಹೇಳಿಕೆ ನೀಡಿದ್ದರು. ಅತ್ಯಾಚಾರ ಎಸಗಿದ ಯುವಕರಿಗೆ ಗಲ್ಲುಶಿಕ್ಷೆ ಕೊಡಬಾರದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಬಳಿಕ ನಾಲ್ವರು ವ್ಯಕ್ತಿಗಳು ರೇಪ್ ಮಾಡಲು ಸಾಧ್ಯವಿಲ್ಲ. ಪ್ರಾಕ್ಟಿಕಲ್ ಆಗಿ ಇದು ಸಾಧ್ಯವಿಲ್ಲ ಎಂದು ಹೇಳಿದ್ದರು. ಇದೀಗ ಜಾರ್ಜ್ ಕೂಡಾ ಮುಲಾಯಂ ಸಾಲಿಗೆ ಸೇರ್ಪಡೆಯಾದಂತಾಗಿದೆ.
-ಉದಯವಾಣಿ