ಬೆಂಗಳೂರು : ಭದ್ರತಾ ದೃಷ್ಟಿಯಿಂದ ಶಾಪಿಂಗ್ ಮಾಡಲು ಐಶಾರಾಮಿ ಮಾಲ್’ಗಳೇ ಅತ್ಯುತ್ತಮ ಎನ್ನುವ ಬೆಂಗಳೂರಿಗರನ್ನು ಬೆಚ್ಚಿ ಬೀಳಿಸುವ ಆಘಾತಕಾರಿ ಸುದ್ದಿಯೊಂದನ್ನ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಭಾನುವಾರ ಬೆಂಗಳೂರಿನ ಐಶಾರಾಮಿ ಮಾಲ್’ನಲ್ಲಿ ಕನ್ನಡದ ಖ್ಯಾತ ನಟರೊಬ್ಬರ 6 ವರ್ಷದ ಮಗನನ್ನು ಅಪಹರಿಸುವ ಯತ್ನ ನಡೆದಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ಸಿಲಿಕಾನ್ ಸಿಟಿಯ ರಾಜಾಜಿನಗರದಲ್ಲಿರುವ ಮಾಲ್’ವೊಂದರಲ್ಲಿ ಶಾಪಿಂಗ್’ಗೆ ತೆರಳಿದ್ದ ಕನ್ನಡದ ನಟರೊಬ್ಬರ ಮಗುವನ್ನು ಮೂವರು ಮಹಿಳೆಯರು ಸೇರಿ ಕಿಡ್ನಾಪ್ ಮಾಡಲು ಪ್ರಯತ್ನಿಸಿದ್ದರು ಎಂದು ವರದಿಯಾಗಿದೆ.
ಮಗನೊಂದಿಗೆ ಶಾಪಿಂಗ್’ಗೆ ತೆರಳಿದ್ದ ಜನಪ್ರಿಯ ನಟನ ಪತ್ನಿಯೊಂದಿಗೆ ಮೂವರು ಮಹಿಳೆಯರು ಮಾತಿಗಿಳಿದಿದ್ದಾರೆ. ಒಬ್ಬಾಕೆ ನಟನ ಪತ್ನಿಯೊಂದಿಗೆ ಮಾತನಾಡ್ತಿದ್ದ ಸಂದರ್ಭದಲ್ಲಿ ಉಳಿದಿಬ್ಬರು ಮಗುವಿನ ಬಾಯಿಮುಚ್ಚಿ ಅಪಹರಣಕ್ಕೆ ಯತ್ನಿಸಿದ್ದಾರೆ.
ಕೂಡಲೇ ಎಚ್ಚೆತ್ತುಕೊಂಡ ಮಗುವಿನ ತಾಯಿ ಜೋರಾಗಿ ಕೂಗಾಡಿಕೊಂಡಿದ್ದಾರೆ. ಇದರಿಂದಾಗಿ ಕಿಡ್ನಾಪರ್ಸ್ ಮಗುವನ್ನು ಬಿಟ್ಟು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಈ ಅಪಹರಣಕಾರರನ್ನು ಹಿಡಿಯಲು ಮಾಲ್’ನ ಸಿಬ್ಬಂದಿ ಅಥವಾ ಭದ್ರತಾ ಸಿಬ್ಬಂದಿಗಳು ನಟನ ಪತ್ನಿಯ ಸಹಾಯ ಮುಂದಾಗಿಲ್ಲ ಎಂದು ಈ ಜನಪ್ರಿಯ ದಂಪತಿ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಆಘಾತಕಾರಿ ಘಟನೆಯ ನಂತರ ಸಿಸಿ ಟಿವಿ ಫುಟೇಜ್ ಪರಿಶೀಲಿಸಿದಾಗ ಈ ಮಹಿಳೆಯರು ದೀರ್ಘಕಾಲದಿಂದ ಮಾಲ್’ನಲ್ಲಿ ಓಡಾಡುತ್ತಿದ್ದರು ಅಲ್ಲದೆ ಇವರು ಮಕ್ಕಳ ಮೇಲೆ ಕಣ್ಣಿಟ್ಟಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.
ಕನ್ನಡ ಗೊತ್ತಿಲ್ಲ !
ಮಾಲ್’ನಲ್ಲಿ ಸೆಕ್ಯುರಿಟಿಗಳಾಗಿ ಕಾರ್ಯ ನಿರ್ವಹಿಸುವ ಬಹುಮಂದಿಗೆ ಕನ್ನಡ ಬರಲ್ಲ ಇದರಿಂದಾಗಿ ಸಹಾಯಕ್ಕೆ ಕೂಗಿಕೊಂಡರೂ ಅಪಹರಣಕಾರರನ್ನು ಹಿಡಿಯುವಲ್ಲಿ ಭದ್ರತಾ ಸಿಬ್ಬಂದಿ ವಿಫಲವಾಗಿರುವ ವಿಷಯ ಬೆಳಕಿಗೆ ಬಂದಿದೆ.
ಇಂತಹ ಘಟನೆ ಯಾರಿಗೆ ಬೇಕಾದರೂ ನಡೆಯಬಹುದು ಮತ್ತು ಭದ್ರತಾ ಸಿಬ್ಬಂದಿಗಳಿಗೆ ಸ್ಥಳೀಯ ಭಾಷೆಯ ಜ್ಞಾನವಿಲ್ಲದಿರುವ ಬಗ್ಗೆ ಬುಧವಾರ ಚಿತ್ರೀಕರಣದಿಂದ ಹಿಂತಿರುಗಿದ ಹೆಸರು ಹೇಳಲು ಇಚ್ಛಿಸದ ಈ ಜನಪ್ರಿಯ ನಟ ಆಕ್ರೋಶ ವ್ಯಕ್ತಪಡಿಸಿದ್ದಾರೆ.
-ಕಪ್ಪು ಮೂಗುತ್ತಿ
-ಉದಯವಾಣಿ