ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಕಿಲ್ಲಿಂಗ್ ವಿರಪ್ಪನ್ ಸಿನಿಮಾ ಕನ್ನಡದಲ್ಲಿ ಹೊಸ ದಾಖಲೆ ಬರೆಯಲು ಹೊರಟಿದೆ. ನಿರ್ದೇಶಕ ರಾಮ್ಗೋಪಾಲ್ ವರ್ಮಾ ಸಾರಥ್ಯದ ಕಿಲ್ಲಿಂಗ್ ವಿರಪ್ಪನ್ ಶೂಟಿಂಗ್ ಪೂರ್ಣಗೊಂಡಿದ್ದು ಚಿತ್ರಮಂದಿರಕ್ಕೆ ಎಂಟ್ರಿ ಕೊಡಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಕನ್ನಡ, ತಮಿಳು ಮತ್ತು ತೆಲುಗಿನಲ್ಲಿ ನವೆಂಬರ್ 6ಕ್ಕೆ ಜಗತ್ತಿನಾದ್ಯಂತ 3 ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಮೂಲಕ ಹೊಸ ದಾಖಲೆ ಬರೆಯಲು ಹೊರಟಿದೆ ಕಿಲ್ಲಿಂಗ್ ವೀರಪ್ಪನ್ ಚಿತ್ರತಂಡ. ಇದುವರೆಗೆ ಕನ್ನಡ ಮೂಲದ ಚಿತ್ರ ಬಿಡುಗಡೆಯಾದ ದಿನವೇ 3 ಸಾವಿರ ಥಿಯೇಟರ್ಗಳಲ್ಲಿ ಪ್ರದರ್ಶನ ಕಂಡ ಉದಾಹರಣೆ ಇಲ್ಲ. ಹೀಗಾಗಿ 3 ಸಾವಿರ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾದರೆ ಕನ್ನಡದ ಮಟ್ಟಿದೆ ಇದು ಒಂದು ದಾಖಲೆಯಾಗಲಿದೆ.
ಕಿಲ್ಲಿಂಗ್ ವಿರಪ್ಪನ್ ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರುವ ಥಿಯೇಟರ್ಗಳಲ್ಲಿ ಮೂರು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಶಿವರಾಜ್ ಕುಮಾರ್ ಮುಖ್ಯಭೂಮಿಕೆಯ ಈ ಸಿನಿಮಾದಲ್ಲಿ ಸಂದೀಪ್ ಭಾರದ್ವಾಜ್, ಯಜ್ಞ ಶೆಟ್ಟಿ, ಸಂಚಾರಿ ವಿಜಯ್ ಮುಂತಾದವರು ನಟಿಸಿದ್ದಾರೆ.
