ಕನ್ನಡ ವಾರ್ತೆಗಳು

ಫೇಸ್‌ಬುಕ್ ನಮ್ಮಕುಂದಾಪುರ ಗ್ರೂಫಿನ ಸ್ನೇಹಸಮ್ಮಿಲನ- ನೂರಾರು ಸದಸ್ಯರ ಆಗಮನ

Pinterest LinkedIn Tumblr

Namma Kundapura_Fab Group_Sneha Sammilana (19)

ಕುಂದಾಪುರ: ಇತ್ತೀಚೆಗೆ ವಾಟ್ಸಾಪ್ ಹಾಗೂ ಫೇಸ್‌ಬುಕ್ ತುಂಬಾನೇ ಚಾಲ್ತಿಯಲ್ಲಿದೆ. ಜನರಂತೂ ಇವೆರಡೂ ಸೋಶಿಯಲ್ ಮೆಡಿಯಾಕ್ಕೆ ಮಾರುಹೋಗಿದ್ದಾರೆಂದ್ರೂ ಅಚ್ಚರಿಪಡ್ಭೇಕಿಲ್ಲ. ಆದ್ರೇ ಫೇಸ್‌ಬುಕ್‌ಲ್ಲಿ ಮಾತ್ರ ಕಮೆಂಟು ಚಾಟು ಮಾಡೋ ಮಂದಿ ಒಂದೆಡೆ ಸೇರಿದ್ರೇ ಹೇಗಿರುತ್ತೆ. ಪೇಶ್ ಬುಕ್ ನಮ್ಮಕುಂದಾಪುರ ಅನ್ನೋ ಗ್ರೂಫಿನ ಸದಸ್ಯರು ಶನಿವಾರ ಕುಂದಾಪುರದಲ್ಲಿ ಒಗ್ಗೂಡಿದ ಕ್ಷಣಗಳಿದು.

ಕುಂದಾಪುರದಿಂದ ದೂರ ಇರುವವರಲ್ಲಿ ಊರಭಿಮಾನ ಮೂಡಿಸುವಿಕೆ ಮತ್ತು ಕುಂದಾಪುರ ಭಾಷೆ ,ಕಲೆ ,ಸಂಸ್ಕೃತಿಯ ಬೆಳೆಸುವಿಕೆ ಮತ್ತು ಉಳಿಸುವಿಕೆಯ ಉದ್ದೇಶದಿಂದ ನಾಲ್ಕೈದು ವರ್ಷಗಳ ಹಿಂದೆ ಮೂಲತಃ ಕುಂದಾಪುರದವರೇ ಆದ ರಾಧಾಕೃಷ್ಣ ಶೆಟ್ಟಿ ಅವರು ‘ನಮ್ಮ ಕುಂದಾಪುರ’ ಎನ್ನುವ ಪೇಸ್ ಬುಕ್ ಗ್ರೂಫ್ ಮಾಡೀದ್ರು. ಅಂದಿನಿಂದ ಇಂದಿನವರೆಗೂ ನಿರಂತರ ಚಟುವಟಿಕೆಯಲ್ಲಿರೋ ಈ ಗ್ರೂಫಿನ ಸದಸ್ಯರ ಸಂಖ್ಯೆ ಬರೋಬ್ಬರಿ ಅರವತ್ತೈದು ಸಾವಿರಕ್ಕೂ ಅಧಿಕ.

Namma Kundapura_Fab Group_Sneha Sammilana (26) Namma Kundapura_Fab Group_Sneha Sammilana (27) Namma Kundapura_Fab Group_Sneha Sammilana (29) Namma Kundapura_Fab Group_Sneha Sammilana (28)

Namma Kundapura_Fab Group_Sneha Sammilana (1)

Namma Kundapura_Fab Group_Sneha Sammilana (21) Namma Kundapura_Fab Group_Sneha Sammilana (20) Namma Kundapura_Fab Group_Sneha Sammilana (18) Namma Kundapura_Fab Group_Sneha Sammilana (14) Namma Kundapura_Fab Group_Sneha Sammilana (10) Namma Kundapura_Fab Group_Sneha Sammilana (11) Namma Kundapura_Fab Group_Sneha Sammilana (16) Namma Kundapura_Fab Group_Sneha Sammilana (17) Namma Kundapura_Fab Group_Sneha Sammilana (12) Namma Kundapura_Fab Group_Sneha Sammilana (15) Namma Kundapura_Fab Group_Sneha Sammilana (13)  Namma Kundapura_Fab Group_Sneha Sammilana (30) Namma Kundapura_Fab Group_Sneha Sammilana (35) Namma Kundapura_Fab Group_Sneha Sammilana (36) Namma Kundapura_Fab Group_Sneha Sammilana (37) Namma Kundapura_Fab Group_Sneha Sammilana (34) Namma Kundapura_Fab Group_Sneha Sammilana (33) Namma Kundapura_Fab Group_Sneha Sammilana (31) Namma Kundapura_Fab Group_Sneha Sammilana (25) Namma Kundapura_Fab Group_Sneha Sammilana (24) Namma Kundapura_Fab Group_Sneha Sammilana (32) Namma Kundapura_Fab Group_Sneha Sammilana (2)

Namma Kundapura_Fab Group_Sneha Sammilana (4)

Namma Kundapura_Fab Group_Sneha Sammilana (7) Namma Kundapura_Fab Group_Sneha Sammilana (5) Namma Kundapura_Fab Group_Sneha Sammilana (8) Namma Kundapura_Fab Group_Sneha Sammilana (6)

Namma Kundapura_Fab Group_Sneha Sammilana (22)

Namma Kundapura_Fab Group_Sneha Sammilana (3) Namma Kundapura_Fab Group_Sneha Sammilana (9)

ಗ್ರೂಫಿನ ಸದಸ್ಯರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಹಾಗೂ ಪರಿಚಯಿಸಿ ಗ್ರೂಫನ್ನು ಇನ್ನಷ್ಟು ಸಕ್ರೀಯಗೊಳಿಸುವ ನಿಟ್ಟಿನಲ್ಲಿ ಸ್ನೇಹಸಮ್ಮಿಲನ ಎಂಬ ಕಾರ್ಯಕ್ರಮವನ್ನು ದೇಶ-ವಿದೇಶ ಸೇರಿದಂತೆ ಬೆಂಗಳೂರು ಹಾಗೂ ಹಲವು ನಗರಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಈವರೆಗೂ ೧೨ ಸ್ನೇಹಸಮ್ಮಿಲನ ಕಾರ್ಯಕ್ರಮ ವಿವಿದೆಡೇ ನಡೇದಿದ್ದು ಕುಂದಾಪುರದಲ್ಲಿ ಸತತ ಮೂರನೇ ಬಾರಿಗೆ ಈ ಕಾರ್ಯಕ್ರಮ ಶನಿವಾರ ಕೋಣಿಯ ಆಶಿರ್ವಾದ ಹಾಲ್ ನಲ್ಲಿ ಸಂಭ್ರಮದಿಂದ ನಡೆಯಿತು.
ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಗಡೆ, ಹಿರಿಯ ಕಾಂಗ್ರೆಸ್ ಮುಖಂಡ ಮಾಣಿಗೋಪಾಲ್, ಪ್ರಗತಿಪರ ಕ್ರಷಿಕ ಸೋಮಶೇಖರ್ ಹೆಗ್ಗಡೆ ಸೇರಿದಂತೆ ಹಲವರು ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದರು.

ಸ್ನೇಹಸಮ್ಮಿಲನ ಕಾರ್ಯಕ್ರಮದಲ್ಲಿ ಒಂದಷ್ಟು ಹರಟೆ, ಒಂದಷ್ಟೂ ಚರ್ಚೆಗಳು, ಅಭಿಪ್ರಾಯ ವಿನಿಮಯ ಕಾರ್ಯಕ್ರಮ ನಡೇಯಿತು. ಕುಂದಾಪುರ ಅಭಿವೃದ್ಧಿಯತ್ತ ಹಾಗೂ ಕುಂದಾಪುರ ತಾಲೂಕಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಗ್ರೂಫಿನ ಸದಸ್ಯರು ಸಕ್ರೀಯರಾಗುವ ಕುರಿತು ಈ ಕಾರ್ಯಕ್ರಮದಲ್ಲಿ ಎಲ್ಲರೂ ಒಮ್ಮತದ ನಿರ್ಧಾರ ಕೈಗೊಂಡರು. ಕುಂದಾಪುರದ ಚಿನ್ಮಯಿ ಆಸ್ಪತ್ರೆ ವ್ಯವಸ್ಥಾಪಕರು ಕಾರ್ಯಕ್ರಮದ ಸಂಯೋಜನೆಯಲ್ಲಿ ಸಹಕರಿಸಿದ್ದರು.

ಒಂದೇ ಊರಿನವರು ಅಲ್ಲದೇ ಆಸುಪಾಸಿನವರೇ ಆದ ಚಿನ್ಮಯಿ ಆಸ್ಪತ್ರೆ ಮಾಲಿಕ ಕಟ್ಟೆ ಗೋಪಾಲಕೃಷ್ಣ ಹಾಗೂ ನಮ್ಮ ಕುಂದಾಪ್ರ ಗ್ರೂಫ್ ಅಡ್ಮಿನ್ ರಾಧಾಕೃಷ್ಣ ಶೆಟ್ಟಿ ಅವರು ಸತತ ೫೦ ವರ್ಷಗಳ ಬಳಿಕ ಈ ವೇದಿಕೆಯಲ್ಲಿ ಒಂದಾಗಿದ್ದು ಅದ್ಭುತ ಕ್ಷಣಗಳಿಗೆ ಸಾಕ್ಷಿಯಾಗಿತ್ತು. ಪೇಸ್‌ಬುಕ್ ಮೂಲಕ ಹಳೆಯ ಗೆಳೆಯರು ಒಗ್ಗೂಡಿದ್ದು ಸಂತಸ ಮೂಡಿಸಿತ್ತು.

ಇಷ್ಟೇ ಅಲ್ಲ. ಮಧ್ಯಾಹ್ನ ಕುಂದಾಪುರ ಶೈಲಿಯ ಊಟವು ಆಗಮಿಸಿದವರನ್ನು ತೃಪ್ತಿಪಡಿಸಿತ್ತು. ವೆಜ್ ಹಾಗೂ ನಾನ್‌ವೆಜ್ ಊಟ ಪಕ್ಕ ಕುಂದಾಪುರ ಟೇಸ್ಟಿನಲ್ಲಿತ್ತು. ಊಟದ ಬಳಿಕ ಸ್ಪರ್ಧೆಗಳು ನಡೆದಿದ್ದು ವಿಜೇತರಿಗೆ ಬಹುಮಾನವನ್ನು ನೀಡಲಾಯಿತು.

ಒಟ್ಟಿನಲ್ಲಿ ಊರಿನ ಅಭಿಮಾನದಿಂದ ನಿಸ್ವಾರ್ಥವಾಗಿ ಇಂತಹ ಕಾರ್ಯಕ್ರಮಗಳನು ರೂಪಿಸಿ ಪೇಸ್‌ಬುಕ್ ಗೆಳೆಯರನ್ನು ಒಗ್ಗೂಡಿಸಿದ ನಮ್ಮ ಕುಂದಾಪುರ ಗ್ರೂಫ್ ಕಾರ್ಯ ನಿಜಕ್ಕೂ ಗ್ರೇಟ್.

ವರದಿ ಮತ್ತು ಚಿತ್ರ- ಯೋಗೀಶ್ ಕುಂಭಾಸಿ

Write A Comment