ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್
ಮುಂಬಯಿ : ದುಬಾಯಿಯಯ ಪದ್ಮನಾಭ ಕಟೀಲು ಅವರ ನೇತೃತ್ವದಲ್ಲಿ ಕಟೀಲು ಗೋಪಾಲಕೃಷ್ಣ ಆಸ್ರಣ್ಣರ ಅಭಿಮಾನಿ ಬಳಗ ಮುಂಬಯಿ ಹಾಗೂ ಯುಎಇ ಯ ವತಿಯಿಂದ ಅ. 2 ರಂದು ನಗರದ ಮಾಟುಂಗಾ ಪಶ್ಚಿಮದಲ್ಲಿನ ಡಾ|ಎಂ.ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಆಸ್ರಣ್ಣರ 14ನೆಯ ಸಂಸ್ಮರಣಾ ಕಾರ್ಯಕ್ರಮಕ್ಕೆ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣರ ದೀಪ ಬೆಳಗಿಸಿ ಚಾಲನೆಯಿತ್ತರು.
ಈ ಸಂದರ್ಭದಲ್ಲಿ ಯಕ್ಷಗಾನಕ್ಕೆ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸಿದ ಅರುವ ಕೊರಗಪ್ಪ ಶೆಟ್ಟಿ, ಬಲಿಪ ಪ್ರಸಾದ್, ದಿನೇಶ್ ಶೆಟ್ಟಿ, ಕವಳಕಟ್ಟೆ, ವಾದಿರಾಜ ಕಲ್ಲೂರಾಯ ಮತ್ತು ಶೇಖರ್ ಕುಂಬ್ರ ಇವರನ್ನು ಉಡುಪಿ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಗೌರವಿಸಿ ಪದ್ಮನಾಭ ಕಟೀಲು ಅವರ ವತಿಯಿಂದ ನೀಡಿದ ತಲಾ 5000 ರೂಪಾಯಿಯನ್ನು ಕಲಾವಿಧರಿಗೆ ನೀಡಿ ಹರಸಿದರು.
ಬಳಿಕ ಶ್ರೀಗಳು ಆಶೀರ್ವಚನವನ್ನು ನೀಡುತ್ತಾ ಆಸ್ರಣ್ಣರ ಸಂಸ್ಮ್ರಣೆ ಕಟೀಲಿನ ದೇವಿಯ ಸ್ಮರಣೆಯಂತೆ. ಯಕ್ಷಗಾನ ಪ್ರಿಯರಾಗಿದ್ದ ಆಸ್ರಣ್ಣರು ಯಕ್ಷಗಾನ ಮೇಳಕ್ಕೂ ಸಾಕಷ್ಠು ಪ್ರೋತ್ಸಾಹ ಕೊಟ್ಟವರು. ಒಂದೊಮ್ಮೆ ನೀರಿನ ಪ್ರವಾಹದಿಂದ ಕೊಚ್ಚಿಹೋಗುತ್ತಿದ್ದ ದೇವಸ್ಥಾನದ ಮೂರ್ತಿಯನ್ನು ಭಕ್ತಿಯಿಂದ ಸಂರಕ್ಶಿಸಿದ ಭಕ್ತರೆಲ್ಲರಿಗೂ ಗೋಪಾಲಕೃಷ್ಣ ಆಸ್ರಣ್ಣರು ದೇವ ಮಾನವರಾದರು. ಜಗತ್ತಿನಲ್ಲಿ ನಂಬಿಕೆಗಳು ಕವಿದು ಹೋಗುತ್ತಿದ್ದ ಸಂದರ್ಭದಲ್ಲಿ ಗೋಪಾಲಕೃಷ್ಣ ಆಸ್ರಣ್ಣರ ದೇವರ ಬಗೆಗಿನ ನಂಬಿಕೆಯ ಸ್ಮರಣೆಯನ್ನು ಮುಂಬಯಿ ನಗರದಲ್ಲಿ ಎಲ್ಲಾ ಕಟೀಲಿನ ಭಕ್ತರನ್ನು ಒಗ್ಗೂಡಿಸಿ ಪದ್ಮನಾಭ ಕಟೀಲು ಆಯೋಜಿಸಿದ ಈ ಸತ್ಕಾರ್ಯ ಅಭಿನಂದನಾರ್ಹ. ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಆಸ್ರಣ್ಣರ ಧರ್ಮದ ತಳಹದಿಯಲ್ಲಿ ಅವರ ಸುಪುತ್ರ ಲಕ್ಷ್ಮೀನಾರಾಯಣ ಆಸ್ರಣ್ಣರ ಆಧ್ಯಾತ್ಮಿಕ ಮತ್ತು ಸಮಾಜಿಕ ಸೇವೆಗಳು ಇನ್ನಷ್ಟು ಸಮೃದ್ಧಿಗೊಳ್ಳಲಿ ಎಂದರು.
ಆಶೀರ್ವಚನ ನೀಡಿದ ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಗೋಪಾಲಕೃಷ್ಣ ಆಸ್ರಣ್ಣರ ಸುಪುತ್ರ ಲಕ್ಷ್ಮೀನಾರಾಯಣ ಆಸ್ರಣ್ಣರು ನಮ್ಮ ತೀರ್ಥರೂಪರಿಗೆ ಕಟೀಲು ದುರ್ಗೆಯ ಮೇಲಿಟ್ಟಿರುವ ಭಕ್ತಿಯ ನಂಬಿಕೆ ಇಂದು ಅವರನ್ನು ಸಾಮೂಹಿಕವಾಗಿ ಸಂಸ್ಮ್ರಣೆ ಮಾಡುವ ಈ ಯೋಗ ಭಾಗ್ಯ ಮುಂಬಯಿಯಲ್ಲಿ ನಮಗೆಲ್ಲರಿಗೆ ಲಭಿಸಿದೆ. ಅವರ ಮೇಲೆ ಮುಂಬಯಿಯ ಭಕ್ತರ ಅಪಾರ ನಂಬಿಕೆಯಿಂದಲೇ ಇಷ್ಟೊಂದು ಜನಸಾಗರ ಸೇರುವಂತಾಗಿದೆ. ಶಕ್ತಿಗಿಂತ ಭಕ್ತಿಯೇ ಮೇಲು, ಈ ರೀತಿ ಇನ್ನು ಮುಂದೆಯೂ ನಿಮ್ಮೆಲ್ಲರ ವಿಶೇಷ ಭಕ್ತಿಯು ಕಟೀಲಿನ ಮೇಲೆ ಇರಲಿ ಎನ್ನುತ್ತಾ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಪದ್ಮನಾಭ ಕಟೀಲು ದಂಪತಿಗೆ ದೇವಿಯು ಅನುಗ್ರಹಿಸಲಿ ಎನ್ನುತ್ತಾ ಆಶೀರ್ವಾದದೊಂದಿಗೆ ಅಭಿನಂದನೆಯನ್ನು ಸಲ್ಲಿಸಿದರು. ಕಳೆದ ಹದಿನಾಲ್ಕು ವರ್ಷಗಳಿಂದ ಈ ನಗರದಲ್ಲಿ ಪದ್ಮನಾಭ ಕಟೀಲು ಕ್ಷೇತ್ರದ ಮೇಲೆ ಮತ್ತು ನಮ್ಮ ತೀರ್ಥರೂಪರ ಮೇಲೆ ಭಕ್ತಿಯನ್ನಿರಿಸಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸುತ್ತಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿಯವರು ವಹಿಸಿದ್ದು, ಪದ್ಮನಾಭ ಕಟೀಲು ಅವರ ಯಕ್ಷಗಾನದ ಸೇವೆ ಪ್ರಶಂಸನೀಯ. ಆಶಕ್ತ ಕಲಾವಿದರೆಗೆ ಸಹಾಯ ಮಾಡುದರೊಂದಿಗೆ ನಶಿಸಿ ಹೋಗುತ್ತಿರುವ ಯಕ್ಷಗಾನ ಕಲೆಯನ್ನು ಉಳಿಸುವ ಕೆಲಸ ಹಾಗೂ ದೇವರ ಸೇವೆಯು ಈ ರೀತಿ ಅವರಿಂದ ಮುಂದುವರಿಯುತ್ತಿರಲಿ. ಪದ್ಮನಾಭ ಕಟೀಲು ಸಾಮಾನ್ಯ ಹೋಟೇಲು ಕಾರ್ಮಿಕನಾಗಿದ್ದು ಮುಂದಿನ ದಿನಗಳಲ್ಲಿ ಹೋಟೇಲು ಉದ್ಯಮಿಯಾಗಿ ಬೆಳೆಯಲಿಎಂದರು.
ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದ ಜಾಗತಿಕ ಬಂಟರ ಸಂಘದ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ ಯವರು ತನ್ನ ಅಭಿಪ್ರಾಯವನ್ನು ತಿಳಿಸುತ್ತಾ ಕಟೀಲು ಕ್ಷೇತ್ರದ ಮೇಲಿನ ಭಕ್ತಿ ಗೋಪಾಲಕೃಷ್ಣ ಆಸ್ರಣ್ಣರ ಮೇಲಿನ ನಂಬಿಕೆ ನನ್ನನ್ನು ಪ್ರತೀ ವರ್ಷ ಆಸ್ರಣ್ಣರ ಸಂಸ್ಮರಣೆಯಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತಿದೆ. ಅರ್ಥ ಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿದ ಪದ್ಮನಾಭ ಕಟೀಲ್ ಅವರಿಗೆ ಅಬಿನಂದನೆ ಸಲ್ಲಿಸಿದರು.
ವೇದಿಕೆಯಲ್ಲಿ ಪೋವಾಯಿ ರುಂಡಮಾಲಿಸಿ ಕ್ಷೇತ್ರದ ಶ್ರೀ ಸುವರ್ಣ ಬಾಬಾ, ಜರಿಮರಿ ಉಮಾಮಹೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಎಸ್. ಎನ್. ಉಡುಪ, ಮೀರಾರೋಡ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸಾಂತಿಂಜ ಜನಾರ್ಧನ ಭಟ್ , ಪುರೋಹಿತರಾದ ಎಂ. ಜೆ. ಪ್ರವೀಣ್ ಭಟ್ ಸಯಾನ್, ಉದ್ಯಮಿ ಬೊಳ್ನಾಡಗುತ್ತು ಚಂದ್ರಹಾಸ ರೈ, ಬಾಬು ಎನ್. ಶೆಟ್ಟಿ, ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಅಧ್ಯಕ್ಷ ಸುರೇಂದ್ರ ಕುಮಾರ್ ಹೆಗ್ಡೆ,ಮತೃಭೂಮಿ ಕೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಮೂಡು ಶೆಡ್ಡೆ ವಿಶ್ವನಾಥ ಶೆಟ್ಟಿ ಕಲ್ಯಾಣ್, ಸಂತೋಷ ಕ್ಯಾಟರರ್ಸ್ ನ ರಾಘು ಪಿ ಶೆಟ್ಟಿ, ಬಂಟರ ಸಂಘ ದೊಂಬಿವಲಿ ಪ್ರಾದೀಶಿಕ ಸಮಿತಿಯ ಸಂಚಾಲಕ ಐಕಳ ಗಣೇಶ್ ಶೆಟ್ಟಿ, ಆನಂದ ಡಿ ಶೆಟ್ಟಿ ಎಕ್ಕಾರು, ಮಲಾಡ್ ಪ್ರಸಾದ್ ಹೋಟೇಲಿನ ಮಾಲಕ ಬಾಬು ಎಸ್. ಶೆಟ್ಟಿ, ಶ್ರೀ ರಜಕ ಮೀರಾ ವಿರಾರ್ ಸಮಿತಿಯ ಕಾರ್ಯಾಧ್ಯಕ್ಷ ದೇವೇಂದ್ರ ಬುನ್ನನ್ (ಕುಟ್ಯಣ್ಣ), ಸಂಜೀವಿನಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಸುರೇಶ್ ರಾವ್, ಬಿಲ್ಲವರ ಅಶೋಸಿಯೇಷ ಥಾನೆ ಸ್ಥಳೀಯ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಅಶೋಕ್ ಡಿ. ಸಾಲ್ಯಾನ್., ತೀಯಾ ಸಮಾಜದ ಅಧ್ಯಕ್ಷ ಚಂದ್ರಶೇಖರ ಬಿ., ಪದ್ಮರಾಜ್ ಎಕ್ಕಾರು ದುಬೈ, ನಿತೀಶ್ ಶೆಟ್ಟಿ, ಬಿ. ಕೆ. ಪದ್ಮರಾಜ್ ಎಕ್ಕಾರು, ಗಿರಿಧರ್ ಸಿ ನಾಯಕ್ ದುಬೈ, ಹೋಟೇಲು ಶುಭೀಕ್ಷಂ, ಗಣೇಶ್ ಶೆಟ್ಟಿ ಕುತ್ಯಾರ್ ಕೇಂಜ ನಡಿಗುತ್ತು, ಸುರೇಶ್ ನೂಜಾಜೆ, ಹರೀಶ್ ಕಾಮತ್ ದುಬೈ, ಸುಧಾಕರ ಪೂಜಾರಿ, ನಿಲೇಶ್ ಶೆಟ್ಟಿಗಾರ್, ರಘುನಾಥ ಶೆಟ್ಟಿ ಬೆಳುವಾಯಿ, ಪಿ ಗಿರಿಧರ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಕರ್ನೂರು ಮೋಹನ್ ರೈ ಯವರು ಕಾರ್ಯಕ್ರಮವನ್ನು ನಿರ್ವಹಿಸಿ ವಂದನಾರ್ಪಣೆಗೈದರು. ಪೆರ್ಡುರು ಮೇಳ ಮತ್ತು ಕಟೀಲಿನ ಆರು ಮೇಳಗಳ ಆಯ್ದ ಕಲಾವಿದರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನವನ್ನು ಪ್ರದರ್ಶಿಸಲಾಯಿತು.
ಈ ಸಂಧರ್ಭದಲ್ಲಿ ಸಹಕಾರ ನೀಡಿದ ಮಹನೀಯರುಗಳನ್ನು ಗೌರವಿಸಿದರೆ ದುಬಾಯಿಯಿಂದ ಆಗಮಿಸಿದ ಉದ್ಯಮಿಗಳನ್ನು ಪುತ್ತಿಗೆ ಶ್ರೀಗಳು ಸಾಲು, ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು.











