ಬಾಹುಬಲಿ ಸಿನಿಮಾದಲ್ಲಿ ರಮ್ಯಕೃಷ್ಣ ಮಾಡಿರುವ ಶಿವಗಾಮಿಯ ಪಾತ್ರ ಚಿತ್ರರಸಿಕರ ಹೃದಯ ಗೆದ್ದಿದೆ. ಪ್ರತಿಭಾವಂತ ನಟಿಯಾಗಿರುವ ರಮ್ಯಾಕೃಷ್ಣ ಪ್ರಶಂಸೆಯ ಸುರಿಮಳೆಯಲ್ಲಿ ನೆನೆಯುತ್ತಲೇ ಇದ್ದಾರೆ. ಅಷ್ಟರಲ್ಲಿ ಆಘಾತಕಾರಿ ಸುದ್ದಿಯೊಗಿಂದು ಕಿವಿಗೆ ಅಪ್ಪಳಿಸಿದೆ. ಸದ್ಯದಲ್ಲೇ ಅವರು ಚಿತ್ರವೊಂದರಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ಪಾತ್ರದಲ್ಲಿ ನಟಿಸುತ್ತಾರೆ ಅನ್ನುವುದೇ ಆ ಸುದ್ದಿ. ಕಲಾವಿದರು ವಿಧವಿಧವಾದ ಪಾತ್ರಗಳಲ್ಲಿ ಅಭಿನಯಿಸಬೇಕು.
ಇದನ್ನು ರಮ್ಯಾಕೃಷ್ಣ ಅವರೂ ಒಪ್ಪುತ್ತಾರೆ. ಹಾಗಾದರೆ ಆಘಾತವೇಕೆ? ವಿಷಯವೇನೆಂದರೆ ಜಯಲಲಿತಾ ಅವರ ಪಾತ್ರದಲ್ಲಿ ಅಭಿನಯಿಸುವ ವಿಷಯ ಸ್ವತಃ ರಮ್ಯಾಕೃಷ್ಣ ಅವರಿಗೇ ಗೊತ್ತಿಲ್ಲ ! ತನಗೇ ತಿಳಿಯದ ಸುದ್ದಿ ರಾಚಿದಾಗ ಆಘಾತವಾಗುವುದಿಲ್ಲವೆ? ಜಯಲಲಿತಾ ಅವರ ಪಾತ್ರವಿರುವ ಚಿತ್ರದಲ್ಲಾಗಲಿ ಅಥವಾ ಜಯಲಲಿತಾ ಅವರ ಜೀವನಚರಿತ್ರೆ ಬಿಂಬಿಸುವ ಚಿತ್ರದಲ್ಲಾಗಲಿ ನೀವು ಅಭಿನಯಿಸಿ ಎಂದು ಯಾರೂ ರಮ್ಯಾರನ್ನು ಸಂಪರ್ಕಿಸಿಲ್ಲ. ಒಂದು ವೇಳೆ ಆಫರ್ ಬಂದರೆ? ‘ಜಯಲಲಿತಾ ಗ್ರೇಟ್ ಲೇಡಿ.
ಒಳ್ಳೆಯ ಕಲಾವಿದೆ. ಉತ್ತಮವಾದ ಮುಖ್ಯಮಂತ್ರಿ, ಜನನಾಯಕಿ. ಅಂಥಹ ವ್ಯಕ್ತಿಯನ್ನು ಬೆಳ್ಳಿತೆರೆಯ ಮೇಲೆ ಬಿಂಬಿಸುವ ಅವಕಾಶ ಸಿಕ್ಕಿದರೆ ಅದು ನನಗೆ ಸಂದ ಗೌರವ’ ಅಂದರು ರಮ್ಯಾಕೃಷ್ಣ.