ಮುಂಬೈ

ಪತ್ನಿ ಇನ್ನೊಂದು ಮದುವೆಯಾಗಲು ಮುಂದಾದ ವಿಷಯ ಕೇಳಿ ಜೈಲಿನಿಂದ ಪರಾರಿಯಾದ ಕೈದಿ; ಮುಂದೆ ಆತ ಏನು ಮಾಡಿದ ….ಇಲ್ಲಿದೆ ಓದಿ..

Pinterest LinkedIn Tumblr

arthur road jail

ಮುಂಬೈ: ಹೆಂಡತಿ ಮತ್ತೊಂದು ಮದುವೆಯಾಗುತ್ತಿರುವುದನ್ನು ತಡೆಯಲು ಜೈಲಿನಿಂದ ಕೈದಿಯೊಬ್ಬ ಪರಾರಾಯಿಗಾರುವ ಘಟನೆ ಮುಂಬೈನಲ್ಲಿ ನಡೆದಿದೆ.

ಒಂದು ವರ್ಷದಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಜೈಧಿ ಎಂಬ ಕೈದಿಯ ಪತ್ನಿ ಮತ್ತೊಂದು ಮದುವೆಯಾಗಲು ಮುಂದಾಗಿದ್ದಳು. ಈ ವಿಷಯ ತಿಳಿಯುತ್ತಿದ್ದಂತೆ ಕೈದಿ ಆಕೆಯ ಮತ್ತೊಂದು ಮದುವೆಯನ್ನು ತಡೆಯಲು ಅರ್ಥರ್ ರೋಡ್ ಜೈಲಿನಿಂದ ಪರಾರಿಯಾಗಿದ್ದಾನೆ.

ಪತ್ನಿ ಬೇರೋಬ್ಬನ ಮದುವೆಯಾಗುತ್ತಿದ್ದಾಳೆ ಎಂಬ ವಿಷಯವನ್ನು ಕೈದಿಯನ್ನು ಭೇಟಿಯಾಗಲು ಜೈಲಿಗೆ ಬಂದ ವ್ಯಕ್ತಿಯೋರ್ವ ಮಾಹಿತಿ ನೀಡಿದ್ದನು. ಈ ಬಗ್ಗ ಆತ ಕೆಲವರಲ್ಲಿ ವಿಚಾರಿಸಿದ್ದಾನೆ. ಆಗ ಆತನ ಪತ್ನಿ ಅಕ್ಟೋಬರ್ 15ರಂದು ಬೇರೋಬ್ಬನ ಜೊತೆ ಮದುವೆಯಾಗುತ್ತಿರುವುದು ದೃಢಪಟ್ಟಿದೆ. ಇದನ್ನು ತಡೆಯಬೇಕು ಎಂದು ಕೈದಿ ಜೈಲಿನಿಂದ ಪರಾರಿಯಾಗಿದ್ದಾನೆ.

ಪರಾರಿಯಾದ ಕೈದಿ ಕೊಲೆ ಯತ್ನ ಸೇರಿದಂತೆ 11 ಪ್ರಕರಣಗಳ ಆರೋಪಿಯಾಗಿದ್ದನು. ಈತ ಸೆಪ್ಟೆಂಬರ್ 22ರಂದು ಪರಾರಿಯಾಗಿದ್ದನು. ಇಲ್ಲಿನ ಶಿವಾಜಿನಗರದ ಗೋವಂಡಿಯ ಮನೆಗೆ ತೆರಳಿ ಮರು ಮದುವೆಯಾಗುವುದು ಬೇಡ ಎಂದು ಪತ್ನಿಗೆ ಮನವೊಲಿಸಲು ಯತ್ನಿಸಿದ್ದಾನೆ. ಈತನನ್ನು ಮಂಗಳವಾರ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದು, ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ.

ಸೆ. 22ರಂದು ಪ್ರಕರಣವೊಂದರ ವಿಚಾರಣೆಗೆ ಸಂಬಂಧಿಸಿ ಜೈದಿಯನ್ನು ನ್ಯಾಯಾಲಯಕ್ಕೆ ಕೊಂಡೊ ತರಲಾಗಿತ್ತು. ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಅ.6ಕ್ಕೆ ಮುಂದೂಡಿದರು. ಈ ವೇಳೆ ಬೆಂಗಾವಲು ಪೊಲೀಸರು ಹೊರಗೆ ಕಾಯುತ್ತಿರುವಾಗ ತಪ್ಪಿಸಿಕೊಂಡಿದ್ದಾನೆ.

ಈ ಕೈದಿ ಒಂದೂವರೆ ವರ್ಷದ ಹಿಂದಷ್ಟೇ ಮದುವೆಯಾಗಿದ್ದ. ಮದುವೆಯಾದ ಕೆಲವೇ ತಿಂಗಳಲ್ಲಿ ಈತ ಅತ್ತೆಯ ಕೊಲೆ ಯತ್ನ ಪ್ರಕರಣದಲ್ಲಿ ಶಿವಾಜಿನಗರ ಪೊಲೀಸರಿಂದ ಬಂಧಿತನಾಗಿದ್ದ.

Write A Comment