ಮನೋರಂಜನೆ

ಸಂತೆಯಲ್ಲಿ ನಿಂತ ಕಬೀರ’ ಚಿತ್ರದಲ್ಲಿ ಅನಂತ್​ನಾಗ್!

Pinterest LinkedIn Tumblr

ananth-್ಇಒಂದಿಲ್ಲೊಂದು ಕಾರಣಕ್ಕೆ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸುತ್ತಲೇ ಇದೆ ‘ಸಂತೆಯಲ್ಲಿ ನಿಂತ ಕಬೀರ’ ಚಿತ್ರ. ಇಂದ್ರಬಾಬು ನಿರ್ದೇಶನದ ಈ ಮಹತ್ವಾಕಾಂಕ್ಷೆಯ ಚಿತ್ರಕ್ಕೀಗ ಹಿರಿಯ ನಟ ಅನಂತ್​ನಾಗ್ ಸೇರ್ಪಡೆಯಾಗಿದ್ದಾರೆ. ಕಬೀರನ ಗುರು ರಮಾನಂದರ ಪಾತ್ರಕ್ಕೆ ಅವರು ಬಣ್ಣಹಚ್ಚಿದ್ದಾರೆ. ಸದ್ಯ ಚಿತ್ರಕ್ಕೆ 5ನೇ ಹಂತದ ಶೂಟಿಂಗ್ ಜಾರಿಯಲ್ಲಿದೆ. ಇತ್ತೀಚೆಗೆ ಶ್ರೀರಂಗಪಟ್ಟಣದಲ್ಲಿ ಅನಂತ್ ಭಾಗದ ಕೆಲವು ದೃಶ್ಯಗಳನ್ನು ಸೆರೆಹಿಡಿಯಲಾಯಿತು. ಉಳಿದಂತೆ ಶಿವರಾಜ್​ಕುಮಾರ್ ಮತ್ತು ನಾಯಕಿ ಸನುಷಾ ಅಭಿನಯದ ಒಂದು ಗೀತೆಗೆ ಚಿಕ್ಕಮಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ.

ಇಸ್ಮಾಯಿಲ್ ದರ್ಬಾರ್ ಸಂಗೀತ ನೀಡಿದ್ದು, ಕಬೀರರ ದೋಹೆಗಳನ್ನು ಪ್ರಮುಖವಾಗಿ ಅಳವಡಿಸಲಾಗಿದೆ. ತಮಿಳು ನಟ ಶರತ್ ಕುಮಾರ್, ಎಚ್.ಜಿ. ದತ್ತಾತ್ರೇಯ, ಅವಿನಾಶ್, ಭಾಗೀರಥಿ ಬಾಯಿ ಕದಂ ಮತ್ತಿತರರು ಪೋಷಕ ಪಾತ್ರ ನಿಭಾಯಿಸಿದ್ದಾರೆ. ಗೋಪಾಲ ವಾಜಪೇಯಿ (ಚಿತ್ರಕಥೆ), ಪ್ರಭು ರಾಘವೇಂದ್ರ (ಕಲಾ ನಿರ್ದೇಶನ), ನವೀನ್ ಕುಮಾರ್ (ಛಾಯಾಗ್ರಹಣ) ಪ್ರಮುಖ ತಂತ್ರಜ್ಞರು.

Write A Comment