ವರದಿ / ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು : ಯೋಗಗುರು ಬಾಬಾ ರಾಮ್ದೇವ್ ಜೀ ಹಾಗೂ ಶೃದ್ಧೇಯ ಬಾಲಕೃಷ್ಣ ಆಚಾರ್ಯಜೀ ಇವರ ನಿರ್ದೇಶನದಲ್ಲಿ ಸ್ವಚ್ಛ ಭಾರತ್ – ಸಮೃದ್ಧ ಭಾರತ್ ಕಲ್ಪನೆಯೊಂದಿಗೆ (ಬಾಪೂಜಿಯವ ಜನ್ಮ ದಿನವಾದ ಇಂದು) ಅಕ್ಟೋಬರ್ 2,2015ನೇ ಶುಕ್ರವಾರದಂದು ಬೆಳಿಗ್ಗೆ 7ಗಂಟೆಯಿಂದ 9 ಗಂಟೆಯವರೆಗೆ ರಾಷ್ಟ್ರವ್ಯಾಪಿ 600ಕ್ಕೂ ಅಧಿಕ ಜಿಲ್ಲೆಗಳಲ್ಲಿ ಒಂದೇ ಬಾರಿಗೆ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಹಮಿಕ್ಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಭಾರತ್ ಸ್ವಾಭಿಮಾನ್, ಪತಂಜಲಿ ಯೋಗ ಸಮಿತಿ, ಮಹಿಳಾ ಪತಂಜಲಿ ಯೋಗ ಸಮಿತಿ, ಯುವ ಭಾರತ್ ಹಾಗೂ ಕಿಸಾನ್ ಪಂಚಾಯತ್ ಇವರ ವತಿಯಿಂದ, ಬಿಜೈ ಶ್ರೀ ಜಗದೀಶ್ ಶೆಟ್ಟಿಯವರ ನೇತ್ರತ್ವದಲ್ಲಿ ಮಂಗಳೂರಿನ ಬಿಜೈ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿಯಿಂದ ಬಿಜೈ ಕಾಪಿಕಾಡ್ ವರೆಗಿನ ಮುಖ್ಯ ರಸ್ತೆಯ ಇಕ್ಕೆಲಗಳನ್ನು ಸ್ಚಚ್ಛಗೊಳಿಸುವ ಮೂಲಕ ಸ್ವಚ್ಛತಾ ಅಭಿಯಾನ ನಡೆಯಿತು.

























