ಕರ್ನಾಟಕ

ಬೈನಾಬೀಚ್‌ನ ಸಂತ್ರಸ್ತ ಕನ್ನಡಿಗರಿಗೆ ಮನೆ ಕಟ್ಟಿಕೊಡಲು ಸಿಎಂ ಒಪ್ಪಿಗೆ

Pinterest LinkedIn Tumblr

sidduಬೆಂಗಳೂರು,ಅ.1-ಗೋವಾದ ಬೈನಾ ಬೀಚ್‌ನಲ್ಲಿ ಸಂತ್ರಸ್ತರಾಗಿರುವ ಕನ್ನಡಿಗರಿಗೆ ಮನೆ ಕಟ್ಟಿಕೊಡಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಸಾತ್ವಿಕ ಒಪ್ಪಿಗೆ ನೀಡಿದ್ದಾರೆಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಲ್.ಹನುಮಂತಯ್ಯ ಇಂದಿಲ್ಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋವಾ ಸರ್ಕಾರ ಮನೆ ಕಟ್ಟಿಕೊಡಲು ಜಮೀನು ನೀಡುವಲ್ಲಿ ಮೀನಾಮೇಷ ಎಣಿಸುತ್ತಿದೆ. ಅಲ್ಲಿನ ನಿರಾಶ್ರಿತ ಕನ್ನಡಿಗರಿಗೆ ಮನೆ ನಿರ್ಮಿಸಿಕೊಡಲು ಜಮೀನು ಖರೀದಿಗೆ 15 ಕೋಟಿ ಬೇಕಾಗಿದೆ. ಇದಕ್ಕಾಗಿ ವಿವಿಧ ಸಂಘಸಂಸ್ಥೆಗಳು ಹಾಗೂ ಕಂಪನಿಗಳಿಂದ ದೇಣಿಗೆಯನ್ನು ಪ್ರಾಧಿಕಾರ ನಿರೀಕ್ಷಿಸುತ್ತದೆ ಎಂದರು.

ಅ.4ರಂದು ಗೋವಾದ ನಿರಾಶ್ರಿತರ ಶಿಬಿರಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಕಳಸಾ ಬಂಡೂರಿ ಯೋಜನೆ ಕುರಿತು ಮುಖ್ಯಮಂತ್ರಿ  ಸಿದ್ಧರಾಮಯ್ಯ ಕೇಂದ್ರ ಸರ್ಕಾರದ ಬಳಿಗೆ ಮತ್ತೊಮ್ಮೆ ಸರ್ವ ಪಕ್ಷ ನಿಯೋಗ ಕೊಂಡೊಯ್ಯುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗುವುದು ಎಂದರು.

ಕನ್ನಡ ಸಂಸ್ಕೃತಿ ಯುವಜನೋತ್ಸವ ಎಂಬ ಹೊಸ  ಕಾರ್ಯಕ್ರಮವನ್ನು ಪ್ರಾಧಿಕಾರ ಹಮ್ಮಿಕೊಳ್ಳಲಿದೆ. ತಮಿಳು ಶಾಸ್ತ್ರೀಯ ಭಾಷೆಗೆ ಚಮ್ಮೊಳ ಎಂದು ಹೆಸರಿಟ್ಟಿದ್ದು, ಕನ್ನಡ ಶಾಸ್ತ್ರೀಯ ಭಾಷೆಗೂ ಅಂತಹ ಹೆಸರಿಡಲು ಪ್ರಯತ್ನ ಮಾಡಲಾಗುವುದು ಎಂದು ಹನುಮಂತಯ್ಯ ತಿಳಿಸಿದರು.

Write A Comment