ಮುಂಬೈ

ಭಾರತದ ಅತಿದೊಡ್ಡ ಸಮರನೌಕೆ ಐಎನ್‌ಎಸ್ ಕೊಚ್ಚಿ ಲೋಕಾರ್ಪಣೆ

Pinterest LinkedIn Tumblr

Naukeಮುಂಬೈ/ಹೊಸದಿಲ್ಲಿ, ಸೆ.30: ಭಾರತದಲ್ಲಿ ಈವರೆಗೆ ನಿರ್ಮಿಸಲಾಗಿರುವ ಅತ್ಯಂತ ದೊಡ್ಡ ಯುದ್ದ ಹಡಗು ‘ಐಎನ್‌ಎಸ್ ಕೊಚ್ಚಿ’ಯನ್ನು ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಇಂದು ಮುಂಬೈಯ ನೌಕಾದಳದ ಹಡಗುಕಟ್ಟೆಯಲ್ಲಿ ಲೋಕಾರ್ಪಣೆ ಮಾಡಿದರು.
ಐಎನ್‌ಎಸ್ ಕೊಚ್ಚಿಯ ನಯಗಾರಿಕೆಯು ಯಾವುದೇ ವಿದೇಶಿ ಹಡಗಿನಂತೆ ಉತ್ತಮವಾಗಿದೆಯೆಂದು ಪಾರಿಕ್ಕರ್ ಹೇಳಿದರು.
‘‘ಜಹಿ ಶತ್ರೂನ್ ಮಹಾ ಬಾಹೋ’’ ಎಂದರೆ, ‘‘ಮಹಾವೀರನೇ, ಶತ್ರುಗಳನ್ನು ನಾಶಗೊಳಿಸು’’ ಎಂದರ್ಥ. ಇದು ಶಸ್ತ್ರಾಸ್ತ್ರ, ಸೆನ್ಸರ್‌ಗಳು ಹಾಗೂ ಅತ್ಯಾಧುನಿಕ ರಹಸ್ಯ ಅಂಶಗಳನ್ನೊಳಗೊಂಡ ನಿರ್ದೇಶಿತ ಕ್ಷಿಪಣಿ ನಾಶಕ ಐಎನ್‌ಎಸ್ ಕೊಚ್ಚಿಯ ಧ್ಯೇಯವಾಕ್ಯವಾಗಿದೆ.
ಐಎನ್‌ಎಸ್ ಕೊಚ್ಚಿ: ತಿಳಿದಿರಬೇಕಾದ 10 ಸಂಗತಿಗಳು
ಡಿಸ್ಟ್ರಾಯರ್‌ಗಳು ಸಮುದ್ರದ ಮಧ್ಯೆ ಕಚ್ಚಾ ಹೋರಾಟ ಸಾಮರ್ಥ್ಯವನ್ನು ತೋರಿಸುವುದರಲ್ಲಿ ವಿಮಾನ ವಾಹಕ ನೌಕೆಗಳ ನಂತರದ ಸ್ಥಾನದಲ್ಲಿವೆ. ಐಎನ್‌ಎಸ್ ಕೊಚ್ಚಿ ಮುಂಬೈಯ ಮಝಗಾಂವ್ ಡಾಕ್‌ನಲ್ಲಿ ನಿರ್ಮಾಣವಾಗುತ್ತಿರುವ ಮೂರು ಕೋಲ್ಕತಾ-ದರ್ಜೆಯ ಡಿಸ್ಟ್ರಾಯರ್‌ಗಳಲ್ಲಿ 2ನೆಯದು. ಹಾಗೂ ಭಾರತದ ಸಮರ ಪಡೆಯಲ್ಲಿರುವ 10ನೆ ಕ್ಷಿಪಣಿ ನಾಶಕವಾಗಿದೆ. 7,500 ಟನ್ ತೂಕದ ಈ ಹಡಗು ನಿರ್ಮಾಣದ ವೆಚ್ಚ ರೂ. 4 ಸಾವಿರ ಕೋಟಿಗೂ ಹೆಚ್ಚು. ಈ ದರ್ಜೆಯಲ್ಲಿ ಮೊದಲ ನೌಕೆ ಐಎನ್‌ಎಸ್ ಕೋಲ್ಕತಾ ಕಳೆದ ವರ್ಷ ಆಗಸ್ಟ್‌ನಲ್ಲಿ ಸೇನೆಗೆ ನಿಯೋಜನೆಗೊಂಡಿದೆ. ಮೂರನೆಯದಾದ ಐಎನ್‌ಎಸ್ ಚೆನ್ನೈ 2016ರ ಕೊನೆಗೆ ನೀರಿಗಿಳಿಯಲಿದೆ. ಎಂಡಿಎಲ್‌ನಲ್ಲಿ ಇನ್ನೂ ನಾಲ್ಕು ರಹಸ್ಯ ಕ್ಷಿಪಣಿ ನಾಶಕ ನೌಕೆಗಳ ನಿರ್ಮಾಣದ ರೂ. 29,644 ಕೋಟಿಗಳ ಯೋಜನೆ ಪ್ರಗತಿಯಲ್ಲಿದೆ. ಅವುಗಳಲ್ಲಿ ಮೊದಲನೆಯದ ‘ಐಎನ್‌ಎಸ್ ವಿಶಾಖಪಟ್ಟಣಂ’ 2018-19ರಲ್ಲಿ ಹಸ್ತಾಂತರವಾಗುವ ನಿರೀಕ್ಷೆಯಿದೆ. ಐಎನ್‌ಎಸ್ ಕೊಚ್ಚಿಯ ಸೇರ್ಪಡೆಯಿಂದ ನೌಕಾಪಡೆಯು ರೋಮಾಂಚನಗೊಂಡರೆ ಅಚ್ಚರಿಯೇನಿಲ್ಲ. ಭಾರತೀಯ ಸಾಗರ ಪ್ರದೇಶದಲ್ಲಿ ಜಲಪ್ರದೇಶದ ಹಿತಾಸಕ್ತಿ ರಕ್ಷಣೆಯ ತಮ್ಮ ಕರ್ತವ್ಯವನ್ನು ನಿಭಾಯಿಸಲು ಭಾರತೀಯ ನೌಕಾದಳದ ಖಡ್ಗವನ್ನು ಐಎನ್‌ಎಸ್ ಕೊಚ್ಚಿ ಇನ್ನಷ್ಟು ಹರಿತಗೊಳಿಸಲಿದೆ. ಅದು, ಸ್ವದೇಶೀಯವಾಗಿ ಹಡಗು ನಿರ್ಮಾಣ ಹಾಗೂ ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮಗಳಲ್ಲಿ ತಮ್ಮ ದೃಢನಿರ್ಧಾರ ಹಾಗೂ ವಿಶ್ವಾಸವನ್ನು ಇನ್ನಷ್ಟು ಖಚಿತಪಡಿಸಿದೆಯೆಂದು ನೌಕಾದಳದ ದಂಡನಾಯಕ ರಾಬಿನ್ ಧವನ್ ಸೋಮವಾರ ಹೇಳಿದ್ದರು.
ಭಾರತೀಯ ಸಾಗರ ವಲಯವು (ಇಒಆರ್) ‘ವಿಶ್ವದ ಗುರುತ್ವ ಕೇಂದ್ರ’ವಾಗಿ ಮೂಡಿಬರುತ್ತಿರುವ ಹಿನ್ನೆಲೆಯಲ್ಲಿ, ದೇಶದ ವಿಸ್ತರಣೆಗೊಳ್ಳುತ್ತಿರುವ ಭೌಗೋಳಿಕ ವ್ಯೆಹದ ಹಿತಾಸಕ್ತಿಗಳನ್ನು ಪರಿಣಾಮಕಾರಿಯಾಗಿ ರಕ್ಷಿಸಬಲ್ಲೆನೆಂಬುದನ್ನು ಖಚಿತಪಡಿಸುವುದಕ್ಕಾಗಿ 2027ರೊಳಗೆ ಸುಮಾರು 600 ವಿಮಾನ ಹಾಗೂ ಹೆಲಿಕಾಪ್ಟರ್‌ಗಳೊಂದಿಗೆ 200 ಯುದ್ಧ ಹಡಗಿನ ಪಡೆಯೆನಿಸುವ ಯೋಜನೆಯನ್ನು ಜಲಸೇನೆ ಹಾಕಿಕೊಂಡಿದೆ. ಪ್ರದೇಶದಲ್ಲಿ ಚೀನಾವು ತ್ವರಿತವಾಗಿ ಗುರುತಿಸುವಂತಹ ಶಕ್ತಿಯಾಗುತ್ತಿದ್ದು, ಐಒಆರ್ ಯಾವುದೇ ಸಮಯದಲ್ಲೂ 120 ಯುದ್ಧ ಹಡಗುಗಳನ್ನು ಹೊಂದಿರುತ್ತದೆ. ಮುಖ್ಯವಾಗಿ ಐಒಆರ್ ಮೂಲಕ ಹಾದು ಹೋಗುವ ತನ್ನ ಇಂಧನ ಪೂರೈಕೆ ಮೂಲದ ರಕ್ಷಣೆಗಾಗಿ ಚೀನಾವು ತನ್ನ ಜಲಸೇನಾ ಹಜ್ಜೆಗುರುತನ್ನು ವಿಸ್ತರಿಸುತ್ತಿದೆ. ಆದರೆ ಭಾರತವು ಅದರ ವ್ಯೆಹಾತ್ಮಕ ನಡೆಯನ್ನು ನಿರ್ಲಕ್ಷಿಸುವಂತಿಲ್ಲ. ನಾವು ಕಟ್ಟೆಚ್ಚರದಿಂದರಬೇಕಾಗಿದೆ. ಭಾರತದ ಅಭಿವೃದ್ಧಿಯ ಗುರಿಯು ನಮ್ಮ ಸುತ್ತಲ ಸಾಗರಗಳನ್ನೇ ಬಲವಾಗಿ ಜೋಡಿಸಲ್ಪಟ್ಟಿದೆ. ಐಒಆರ್‌ನಲ್ಲಿ ಚೀನಾದೊಂದಿಗಿನ ಸ್ಪರ್ಧೆಯಲ್ಲಿ ಸಂಘರ್ಷದೆಡೆ ತಿರುಗುವುದನ್ನು ನಾವು ಬಯಸುವುದಿಲ್ಲವಾದರೂ, ತಾವು ಸಿದ್ಧರಾಗಿದ್ದು, ಶಸ್ತ್ರಾಸ್ತ್ರ ಸಜ್ಜಿತರಾಗಿರಬೇಕಾಗುತ್ತದೆಂದು ಇನ್ನೊಬ್ಬರು ಹಿರಿಯ ಅಧಿಕಾರಿ ಹೇಳಿದ್ದಾರೆ.
ಐಎನ್‌ಎಸ್ ಕೊಚ್ಚಿಯ ಮುಖ್ಯಾಂಶಗಳು

1. ಐಎನ್‌ಎಸ್ ಕೊಚ್ಚಿ ಭಾರತ ನಿರ್ಮಿತ ಅತ್ಯಂತ ದೊಡ್ಡ ಯುದ್ಧ ಹಡಗು. 2. ಜಲಸೇನೆಯ ಸ್ಥಾನಿಕ ಸಂಘಟನೆ ನೌಕಾ ವಿನ್ಯಾಸ ನಿರ್ದೇಶನಾಲಯದಿಂದ ವಿನ್ಯಾಸಿಸಲ್ಪಟ್ಟು, ಮುಂಬೈಯ ಮಝಗಾಂವ್ ಡಾಕ್ ಶಿಪ್ ಬಿಲ್ಡರ್ಸ್ ಲಿ.ಯಿಂದ ನಿರ್ಮಿಸಲ್ಪಟ್ಟಿದೆ. 3.ಇದು 7,500 ಟನ್ ಭಾರ, 164 ಮೀ. ಉದ್ದ ಹಾಗೂ 17 ಕಿ.ಮೀ. ಅಗಲವಿದೆ.
4.ಹಡಗು 4 ಗ್ಯಾಸ್ ಟರ್ಬೈನ್‌ಗಳಿಂದ ಚಲನೆಗೊಳ್ಳಲಿದ್ದು, 30 ನಾಟ್‌ಗಿಂತಲೂ ಹೆಚ್ಚು ಗರಿಷ್ಠ ವೇಗವನ್ನು ಪಡೆಯುವಂತೆ ವಿನ್ಯಾಸಿಸಲಾಗಿದೆ.

5. ಹಡಗು ಸುಮಾರು 40 ಅಧಿಕಾರಿಗಳು ಹಾಗೂ 350 ನಾವಿಕರನ್ನು ಹೊಂದಿರುತ್ತದೆ. 6. ಜಹಿ ಶತ್ರೂನ್ ಮಹಾ ಬಾಹೂ ಎಂಬುದು ಹಡಗಿನ ಧ್ಯೇಯ ವಾಕ್ಯವಾಗಿದೆ.
7. ಐಎನ್‌ಎಸ್ ಕೊಚ್ಚಿ ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರ, ಸೆನ್ಸರ್ ಹಾಗೂ ಮಹತ್ವದ ಭಾರತೀಯ ಉಪಕರಣವನ್ನು ಹೊಂದಿದೆ.
8. ಐಎನ್‌ಎಸ್ ಕೊಚ್ಚಿ ಮುಂಬೈಯ ಮಝಗಾಂವ್ ಹಡುಗುಗಟ್ಟೆಯಲ್ಲಿ ನಿರ್ಮಿಸಲಾಗುತ್ತಿರುವ 3 ಕೋಲ್ಕತಾ ದರ್ಜೆಯ ಕ್ಷಿಪಣಿ ನಾಶಕಗಳಲ್ಲಿ 2ನೆಯದಾಗಿದ್ದು, ಭಾರತೀಯ ಸಮರ ಪಡೆಯ ಕ್ಷಿಪಣಿ ನಾಶಕಗಳಲ್ಲಿ 10ನೆಯದು. 9. ಈ ದರ್ಜೆಯ ಪ್ರಥಮ ಹಡಗು ಐಎನ್‌ಎಸ್ ಕೋಲ್ಕತಾ ಕಳೆದ ವರ್ಷ ಆಗಸ್ಟ್‌ನಲ್ಲಿ ನಿಯೋಜನೆಗೊಂಡಿತ್ತು. 10. ಮೂರನೆ ಸಮರ ನೌಕೆ ಐಎನ್‌ಎಸ್ ಚೆನ್ನೈ 2016ರ ಅಂತ್ಯಕ್ಕೆ ಸೇರ್ಪಡೆಗೊಳ್ಳಬಹುದು.

Write A Comment