ಮಂಗಳೂರು,ಸೆ.28 : ನಗರದ ರಥ ಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಳದಲ್ಲಿ ರವಿವಾರ ಅನಂತ ಚಥುರ್ತಿ ವೃತ ಉತ್ಸವ ವಿಜೃಂಭಣೆ ಯಿಂದ ಜರಗಿತು .
ಪಂಚ ಪರ್ವಗಳಲ್ಲಿ ಅನಂತ ಚತುರ್ದಶಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ .ಭಾಧ್ರಪದ ಚತುರ್ದಶಿಯಂದು ನಡೆಯುವ ಈ ಪೂಜೆಯಲ್ಲಿ 14 ಸಂಖ್ಯೆಗೆ ವಿಶೇಷ ಮಹತ್ವವಿದೆ. 14 ನಮಸ್ಕಾರ, 14 ವಿಧದ ಅನಂತನ ಹೆಸರು, ಗ್ರಂಥಯಲ್ಲಿ 14 ದೇವರ ಆವಾಹನೆ, 14 ಬಗೆಯ ನೈವೇದ್ಯ. ಆದ್ದರಿಂದ ಈ ದಿನದಂದು ಪೂಜೆಗೊಂಡ 14 ಕಲಶಗಳನ್ನು ನೋಡಿದರೆ ನಮ್ಮಶುಭ ಇಷ್ಠಾರ್ಥವೆಲ್ಲ ನೆರವೇರುತ್ತದೆ ಎಂಬ ನಂಬಿಕೆ ಆಸ್ಥಿಕ ಬಾಂಧವರಲ್ಲಿದೆ.
ರೂಡಿಯಂತೆ ಆಯಾಯ ದೇವಸ್ಥಾನದಲ್ಲಿ ಕಲಶಗಳ ಆರಾಧನೆ ನಡೆಯುತ್ತದೆ. ಪ್ರತ್ಯಕ್ಷವಾಗಿ ಪೂಜೆ ನೋಡಲು ಅಸಾಧ್ಯವಾಗಿದ್ದವರಿಗೆ 4 ಕಲಶಗಳ ದರ್ಶನ ಮಾಡಿಲಾಯಿತು.
ಚಿತ್ರ : ಮಂಜು ನೀರೆಶ್ವಾಲ್ಲ್ಯ

