ಮನೋರಂಜನೆ

ವೀಣಾಗೆ ಆರತಿಗೊಬ್ಬ ಮಗಳು!

Pinterest LinkedIn Tumblr

veena-fi2013ರಲ್ಲಿ ದುಬೈ ಮೂಲದ ಉದ್ಯಮಿ ಅಸದ್ ಬಷೀರ್ ಖಾನ್ ಅವರ ಕೈಹಿಡಿದಿದ್ದ ಪಾಕಿಸ್ತಾನದ ಗ್ಲಾಮರ್ ಬೆಡಗಿ ವೀಣಾ ಮಲಿಕ್, ಕಳೆದ ಬುಧವಾರ ಅಮೆರಿಕದ ವರ್ಜಿನಿಯಾದಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಆ ಮಗುವಿಗೆ ಅಮಲ್ ಅಂತ ಹೆಸರಿಡಲಾಗಿದೆ. ‘ಕಳೆದ ವರ್ಷ ಅಬ್​ರಾಮ್ ಹುಟ್ಟಿದ್ದ, ಈಗ ಅಮಲ್ ಬಂದಿದ್ದಾಳೆ. ಕೀರ್ತಿಗೊಬ್ಬ ಮಗ, ಆರತಿಗೊಬ್ಬ ಮಗಳು! ನಮ್ಮದಿನ್ನು ಸಂತೃಪ್ತ ಜಗತ್ತು’ ಎನ್ನುತ್ತ ಸಂತಸ ವ್ಯಕ್ತಪಡಿಸಿದ್ದಾರೆ 31ರ ಹರೆಯದ ವೀಣಾ. ‘ಸಿಲ್ಕ್ ಸಖತ್ ಮಗ’ ಚಿತ್ರಕ್ಕೆ ನಾಯಕಿಯಾಗುವ ಮೂಲಕ ವೀಣಾ ಕನ್ನಡಕ್ಕೂ ಕಾಲಿಟ್ಟಿದ್ದರು.

ವಿಶೇಷ ಗೊತ್ತಾ? ಕಳೆದ ವರ್ಷ ಸರಿಯಾಗಿ ಸೆ. 23ಕ್ಕೆ ಅಬ್​ರಾಮ್ೆ

ಜನ್ಮ ನೀಡಿದ್ದರು ವೀಣಾ, ಈ ವರ್ಷ ಅದೇ ದಿನಾಂಕದಂದು ಹೆಣ್ಣುಮಗುವಿನ ಜನ್ಮ ನೀಡಿದ್ದಾರೆ. ವ್ಯತ್ಯಾಸವಿಷ್ಟೇ, ಕಳೆದ ವರ್ಷ ಮಂಗಳವಾರವಾದರೆ, ಈ ವರ್ಷ ಬುಧವಾರ.

Write A Comment