ಅಂತರಾಷ್ಟ್ರೀಯ

ರೋಸ್‍ಗೋಲ್ಡ್ ಐಪೋನ್ 6ಎಸ್ ಗಾಗಿ ಮುಗಿಬಿದ್ದ ಗ್ರಾಹಕರು

Pinterest LinkedIn Tumblr

iphone6-colorನ್ಯೂಯಾರ್ಕ್: ಆ್ಯಪಲ್ ಕಂಪನಿ ತನ್ನ ಹೊಸ ಐಪೋನ್ 6ಎಸ್ ಮತ್ತು 6ಎಸ್ ಪ್ಲಸ್‍ನ್ನು ಶುಕ್ರವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಐಪೋನ್ ಅತ್ಯಾಧುನಿಕ ತಂತ್ರಜ್ಞಾನ ಮತ್ತು  ಸೌಲಭ್ಯಗಳನ್ನು ಹೊಂದಿದ್ದು ಹೊಸ ಬಣ್ಣ `ರೋಸ್‍ಗೋಲ್ಡ್’ನೊಂದಿಗೆ ಹೊರಬಂದಿದೆ.

ಇದೇ ಮೊದಲ ಬಾರಿಗೆ ಪಿಂಕ್ ಬಣ್ಣದಲ್ಲಿ ಬಿಡುಗಡೆ ಮಾಡಲಾಗಿದೆ. ಹೊಸ ಐಪೋನ್ ನೋಡಲು, ಖರೀದಿಸಲು ವಿಶ್ವಾದ್ಯಂತ ಆ್ಯಪಲ್ ಮಳಿಗೆಗಳ ಮುಂದೆ ಆಸಕ್ತರು ಜಮಾಯಿಸಿದ್ದರು. ಈ  ಪೋನ್‍ಗೆ ಸುಧಾರಿತ ಕ್ಯಾಮೆರಾ ಅಳವಡಿಸಲಾಗಿದ್ದು 3ಡಿ ಟಚ್‍ಸ್ಕ್ರೀನ್ ಹೊಂದಿದೆ. ಬಳಕೆದಾರರು ಈ ಟಚ್‍ಸ್ಕ್ರೀನ್‍ನ್ನು ಒತ್ತುವ ಪ್ರಮಾಣಕ್ಕೆ ಅನುಗುಣವಾಗಿ ವಿವಿಧ ಫೀಚರ್ಸ್ ಕಾಣಲಿದೆ. 6ಎಸ್  ಮತ್ತು 6ಎಸ್ ಪ್ಲಸ್ ದರ ಕ್ರಮವಾಗಿ 199 ಮತ್ತು 299 ಡಾಲರ್‍ಗಳಾಗಿವೆ. ಈ ವೀಕೆಂಡ್‍ನಲ್ಲಿ ಮಾತ್ರವೇ 1.3 ಕೋಟಿ ಮೊಬೈಲ್‍ಗಳು ಮಾರಾಟವಾಗಲಿದೆ ಎಂಬ ಅಂದಾಜನ್ನು ಕಂಪನಿ  ಹೊಂದಿದೆ.

ಸ್ಯಾಮ್ ಸಂಗ್ ಅಗ್ರಸ್ಥಾನ: ಟೆಕ್ ರಾಡಾರ್  ಪ್ರಕಾರ ಆ್ಯಪಲ್ ನ 6ಎಸ್ ಮತ್ತು 6 ಎಸ್ ಪ್ಲಸ್ ಸ್ಯಾಮ್ ಸಂಗ್ ನ ಗೆಲಾಕ್ಸಿ ಎಸ್ 6 ಅನ್ನು ಹಿಂದಿಕ್ಕಲು ಸಾಧ್ಯವಾಗಿಲ್ಲ. ಟೆಕ್ ರಾಡಾರ್ ಪ್ರಕಾರ ಗೆಲಾಕ್ಸಿ ಎಸ್6ಎಡ್ಜ್ ಮೊದಲೆರಡು ಸ್ಥಾನಗಳಲ್ಲಿದೆ. ಐಪೋನ್ 6ಎಸ್ ಮೂರು ಮತ್ತು ಎಲ್‍ಜಿ ಜಿ4 ನಾಲ್ಕನೆ ಸ್ಥಾನದಲ್ಲಿದೆ.ಐ ಫೋನ್ 6ಎಸ್ ಪ್ಲಸ್(5), ಗೆಲಾಕ್ಸಿ ಎಸ್6ಎಡ್ಜ್ ಪ್ಲಸ್ (6), ಸೋನಿ  ಎಕ್ಸ್‍ಪೀರಿಯಾಜಡ್ 3ಪ್ಲಸ್(7), ಎಚ್‍ಟಿಸಿ ಒನ್ ಎಂ9(8), ಒನ್‍ಪ್ಲಸ್2(9) ಮತ್ತು ನೆಕ್ಸಸ್6(10)ನೇ ಸ್ಥಾನದಲ್ಲಿವೆ.

Write A Comment