ಅಂತರಾಷ್ಟ್ರೀಯ

ಆಸ್ಟ್ರೇಲಿಯಾ ನೂತನ ಪ್ರಧಾನಿ ಮಾಲ್ಕಮ್ ಟರ್ನ್ಬುಲ್ ಗೆ ಪ್ರಧಾನಿ ಮೋದಿ ಅಭಿನಂದನೆ

Pinterest LinkedIn Tumblr

malcolm-turnbullನವದೆಹಲಿ: ಆಸ್ಟ್ರೇಲಿಯಾ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿರುವ ಮಾಲ್ಕಮ್ ಟರ್ನ್ಬುಲ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

ಟರ್ನ್ಬುಲ್ ಅವರೊದಿಗೆ ಮಾತನಾಡಿದೆ. ಪ್ರಧಾನಿಯಾಗಿ ಆಯ್ಕೆಗೊಂಡಿದ್ದಕ್ಕೆ ಅಭಿನಂದನೆ ಸಲ್ಲಿಸಿ ಶುಭಾಷಯ ಕೋರಿದೆ. ಅಲ್ಲದೇ ಜನ್ಮದಿನದ ಶುಭಾಷಯ ಕೋರಿದ ಅವರಿಗೆ ಧನ್ಯವಾದ ತಿಳಿಸಿದೆ ಎಂದು ಮೋದಿ ಹೇಳಿದ್ದಾರೆ. ಇದೇ ವೇಳೆ ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಟೋನಿ ಅಬೋಟ್ ಅವರೊಂದಿಗೂ ಮಾತನಾಡಿದ ಪ್ರಧಾನಿ ಮೋದಿ, ಭಾರತ- ಆಸ್ಟ್ರೇಲಿಯಾದ ದ್ವಿಪಕ್ಷೀಯ ಸಂಬಂಧವನ್ನು ಉತ್ತಮಗೊಳಿಸಲು ಶ್ರಮಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾದ ಆಡಳಿತ ಪಕ್ಷ ಲಿಬರಲ್ ಪಾರ್ಟಿಯ ನಾಯಕತ್ವ ಮತಪತ್ರದಲ್ಲಿ ಟೋನಿ ಅಬೋಟ್ ಸೋತಿರುವುದರಿಂದ ಮಾಜಿ ಸಚಿವ ಮಾಲ್ಕಮ್ ಟರ್ನ್ಬುಲ್ ಅವರು ಆಸ್ಟ್ರೇಲಿಯಾದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

Write A Comment