ರಾಷ್ಟ್ರೀಯ

ಕಾಶ್ಮೀರಿ ಯುವಕರಿಗೆ ಯುಪಿಎ ಪ್ರಾರಂಭಿಸಿದ್ದ ಉದ್ಯೋಗ ಯೋಜನೆ ಮುಂದುವರೆಸಲು ಕಾಂಗ್ರೆಸ್ ಒತ್ತಾಯ

Pinterest LinkedIn Tumblr

Ghulam-Nabi-Azadಶ್ರೀನಗರ: ಯುಪಿಎ ಸರ್ಕಾರ ಕಾಶ್ಮೀರಿ ಯುವಕರಿಗಾಗಿ ಜಮ್ಮು-ಕಾಶ್ಮೀರದಲ್ಲಿ ಪ್ರಾರಂಭಿಸಿದ್ದ ಉದ್ಯೋಗ ಯೋಜನೆಗಳನ್ನು ಎನ್.ಡಿ.ಎ ಸರ್ಕಾರ ಮುಂದುವರೆಸಬೇಕೆಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಒತ್ತಾಯಿಸಿದ್ದಾರೆ.

ನೇಮಕಾತಿ ಆದೇಶ ಹಾಗೂ ಕ್ರಮಬದ್ಧಗೊಳಿಸುವಿಕೆಗೆ ಆಗ್ರಹಿಸಿ ಕಳೆದ 17 ದಿನಗಳಿಂದ ರಾಷ್ಟ್ರೀಯ ಯುವ ಕಾರ್ಪ್ಸ್ ನ ಅಭ್ಯರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ಗುಲಾಂ ನಬಿ ಆಜಾದ್ ಬೆಂಬಲ ಸೂಚಿಸಿ, ಈ ಹಿಂದಿನ ಯುಪಿಎ ಸರ್ಕಾರ ಪ್ರಾರಂಭಿಸಿದ್ದ ಉದ್ಯೋಗ ಯೋಜನೆಗಳನ್ನು ಎನ್.ಡಿ.ಎ ಸರ್ಕಾರವೂ ಮುಂದುವರೆಸಬೇಕು ಎಂದು ಹೇಳಿದ್ದಾರೆ.

ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ 6 ಕ್ಕಿಂತ ಹೆಚ್ಚು ಉದ್ಯೋಗ ಯೋಜನೆಗಳನ್ನು ಘೋಷಿಸಿದ್ದೆವು, ಯುವಕರೂ ಕಾಶ್ಮೀರದ ಅಭಿವೃದ್ಧಿಯಲ್ಲಿ ಭಾಗಿಯಾಗಲು ಸಹಕಾರಿಯಾಗಿತ್ತು ಎಂದು ಆಜಾದ್ ಹೇಳಿದ್ದಾರೆ. ಕೇಂದ್ರ ಸರ್ಕಾರ, ಪ್ರತಿಭಟನ ನಿರತ ಯುವಕರಿಗೆ ಅವರ ವಿದ್ಯಾರ್ಹತೆ ಅನುಸಾರವಾಗಿ ಸರ್ಕಾರಿ ಇಲಾಖೆಗಳಲ್ಲಿ ತಕ್ಷಣವೇ ಉದ್ಯೋಗ ನೀಡಬೇಕು ಎಂದು ಹೇಳಿದ್ದಾರೆ.

ಎನ್.ವೈ.ಸಿ ಅಭ್ಯರ್ಥಿಗಳ ಪ್ರತಿಭಟನೆ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚೆ ಮಾಡುವುದಾಗಿ ಗುಲಾಂ ನಬಿ ಆಜಾದ್ ಅಭ್ಯರ್ಥಿಗಳಿಗೆ ಭರವಸೆ ನೀಡಿದ್ದಾರೆ.

Write A Comment