ಮುಂಬೈ

ಮುಂಬೈಯಲ್ಲಿ ಹಳಿ ತಪ್ಪಿದ ರೈಲು; ಸಂಚಾರ ಅಸ್ತವ್ಯಸ್ತ

Pinterest LinkedIn Tumblr

train accident

ಮುಂಬೈ: ಮುಂಬೈನ ಹೊರ ವಲಯದ ಅಂಧೇರಿ-ವಿಲೇ ಪಾರ್ಲೆ ಸ್ಟೇಶನ್ ನಡುವೆ ಸ್ಥಳೀಯ ರೈಲೊಂದರ ಏಳು ಬೋಗಿಗಳು ಹಳಿ ತಪ್ಪಿರುವ ಘಟನೆಯೊಂದು ಮಂಗಳವಾರ ನಡೆದಿದೆ.

ಇಂದು ಬೆಳಗ್ಗೆ 11ರ ಸುಮಾರಿಗೆ ಬೋರಿವಿಲಿಯಿಂದ ಚರ್ಚ್ ಗೇಟ್ ಬಳಿ ಬರುತ್ತಿದ್ದ ಮುಂಬೈನ ಸ್ಥಳೀಯ ರೈಲಿನ 7 ಬೋಗಿಗಳು ಇದ್ದಕ್ಕಿದ್ದಂತೆ ಅಂಧೇರಿ ಮತ್ತು ವಿಲೇ ಪಾರ್ಲೆ ನಿಲ್ದಾಣದ ಬಳಿ ಹಳಿ ತಪ್ಪಿದೆ ಎಂದು ತಿಳಿದುಬಂದಿದೆ.

ರೈಲು ಹಳಿ ತಪ್ಪಿರುವ ಸುದ್ದಿ ಕೇಳುತ್ತಿದ್ದಂತೆ ಸ್ಥಳಕ್ಕಾಗಮಿಸಿರುವ ಇಂಜಿನಿಯರ್ ಗಳು ಹಾಗೂ ರಕ್ಷಣಾ ಅಧಿಕಾರಿಗಳು ಸ್ಥಳಕ್ಕಾಗಮಿಸಿದ್ದು, ಸ್ಥಳದಲ್ಲಿ ಪರೀಶೀಲನೆ ನಡೆಸುತ್ತಿವೆ. ಘಟನೆಯಲ್ಲಿ ಯಾವುದೇ ಗಾಯ, ಪ್ರಾಣಾಪಾಯಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲಿನ ಏಳು ಬೋಗಿಗಳು ಹಳಿ ತಪ್ಪಿದ ಪರಿಣಾಮ ಇದೀಗ ದಕ್ಷಿಣ ಮುಂಬೈನ ಚರ್ಚ್ ಗೇಟ್ ಮತ್ತು ವಿರಾರ್ ನ್ನು ಸಂಪರ್ಕಿಸುವ ಮಾರ್ಗಗಳಲ್ಲಿ ಸಂಚಾರಗಳಲ್ಲಿ ತೀವ್ರ ಅಡಚಣೆಯುಂಟಾಗಿದೆ ಎಂದು ಹೇಳಲಾಗುತ್ತಿದೆ.

Write A Comment