ಅಂತರಾಷ್ಟ್ರೀಯ

ಫೋರ್ಬ್ಸ್ ಏಶ್ಯ ದಾನಿಗಳ ಪಟ್ಟಿಯಲ್ಲಿ 7 ಭಾರತೀಯರು

Pinterest LinkedIn Tumblr

3kris_01ಹ್ಯೂಸ್ಟನ್, ಸೆ.8: ಇನ್ಫೋಸಿಸ್‌ನ ಮೂವರು ಸಹಸಂಸ್ಥಾಪಕರಾದ ಸೇನಾಪತಿ ಗೋಪಾಲಕೃಷ್ಣನ್, ನಂದನ್ ನೀಲೇಕಣಿ ಹಾಗೂ ಎಸ್.ಡಿ. ಶಿಬುಲಾಲ್ ಸೇರಿದಂತೆ ಏಳು ಭಾರತೀಯರ ಹೆಸರುಗಳು ಈ ಬಾರಿ ಏಶ್ಯ-ಪೆಸಿಫಿಕ್ ಪ್ರದೇಶದ ದಾನಿಗಳಿಗೆ ಸಂಬಂಧಿಸಿ ತಯಾರಿಸಲಾಗಿರುವ ಫೋರ್ಬ್ಸ್ ಏಶ್ಯದ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಹದಿಮೂರು ರಾಷ್ಟ್ರಗಳಲ್ಲಿನ ವೈಯಕ್ತಿಕವಾಗಿ ಗಣನೀಯ ಕೊಡುಗೆಗಳನ್ನು ನೀಡಿರುವ ದಾನಿಗಳ ಹೆಸರುಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ.
ಇನ್ಫೋಸಿಸ್‌ನ ಸಹಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿಯವರ ಪುತ್ರ ರೊಹಾನ್ ಕೂಡಾ ಪಟ್ಟಿಯಲ್ಲಿ ಸೇರಿದ್ದಾರೆ. ಅವರು ಪುರಾತನ ಭಾರತೀಯ ಸಾಹಿತ್ಯ ಗ್ರಂಥಗಳ ಪ್ರಚಾರಕ್ಕಾಗಿ ಹಾರ್ವರ್ಡ್ ವಿಶ್ವವಿದ್ಯಾನಿಲಯಕ್ಕೆ 52 ಲಕ್ಷ ಡಾಲರ್ ಆರ್ಥಿಕ ನೆರವು ನೀಡಿದ್ದಾರೆ. ಕೇರಳ ಮೂಲದ ಉದ್ಯಮಿ ಸನ್ನಿ ವರ್ಕೆ ಕೂಡಾ ಪಟ್ಟಿಯಲ್ಲಿ ಗುರುತಿಸಲ್ಪಟ್ಟಿದ್ದಾರೆ. ಅವರು ತನ್ನ 2.25 ಶತಕೋಟಿ ಡಾಲರ್ ಸಂಪತ್ತಿನ ಅರ್ಧದಷ್ಟು ಪ್ರಮಾಣವನ್ನು ದಾನ ಮಾಡುವುದಾಗಿ ಘೋಷಿಸಿದ್ದರು. ಜಿಇಎಂಎಸ್ ಎಜುಕೇಶನ್ ಸಂಸ್ಥೆಯ ಮೂಲಕ ಅವರು 14 ರಾಷ್ಟ್ರಗಳಲ್ಲಿ 70 ಶಾಲೆಗಳನ್ನು ನಡೆಸುತ್ತಿದ್ದಾರೆ. ಅವರು ಈಗಾಗಲೇ ಫೋರ್ಬ್ಸ್ ತಯಾರಿಸಿರುವ ಭಾರತೀಯದಾನಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಲಂಡನ್‌ನಲ್ಲಿ ಉದ್ಯಮ ನಡೆಸುತ್ತಿರುವ ಭಾರತೀಯ ಮೂಲದ ಸೋದರರಾದಸುರೇಶ್ ರಾಮಕೃಷ್ಣನ್ ಹಾಗೂ ಮಹೇಶ್ ರಾಮಕೃಷ್ಣನ್ ಹೆಸರುಗಳೂ ಪಟ್ಟಿಯಲ್ಲಿವೆ.

Write A Comment