ತೈವಾನ್: ಈಗಂತೂ ಎಲ್ಲಿ ಹೋದರೂ ಅಲ್ಲಿ ಸೆಲ್ಫೀ ತೆಗೆದುಕೊಳ್ಳುವುದು ಅಭ್ಯಾಸವಾಗಿಬಿಟ್ಟಿದೆ. ಸ್ಟಾರ್‍ಗಳಿಂದ ಹಿಡಿದು ಸಾಮಾನ್ಯ ಜನರಲ್ಲೂ ಸೆಲ್ಫೀ ಹವಾ ಜೋರಾಗಿಯೇ ಇದೆ. ಆದರೆ ತೈವಾನ್ ಜನ ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದು, ಇಲ್ಲಿ ಪ್ಲಾಸ್ಟಿಕ್ ಬ್ಯಾಗ್ ಸೆಲ್ಫೀ ಹೆಚ್ಚು ಸುದ್ದಿಯಾಗುತ್ತಿದೆ.
ಪ್ಲಾಸ್ಟಿಕ್ ಬ್ಯಾಗ್ ಸೆಲ್ಫೀನಾ ಅದು ಹೇಗೆ ಇರುತ್ತದೆ ಎಂದು ಅನಿಸುವುದುಂಟು. ಆದರೆ ಇದೇ ಪ್ಲಾಸ್ಟಿಕ್ ಬ್ಯಾಗ್ ಸೆಲ್ಫೀ ಈಗ ಸಖತ್ತಾಗಿ ಸುದ್ದಿಯಾಗುತ್ತಿದೆ. ತೈವಾನ್ ಜನತೆಗೆ ಶಾಪಿಂಗ್ ಮಾಲ್‍ಗಳಿಗೆ ಹೋಗಿ ಅಲ್ಲಿರುವ ಪ್ಲಾಸ್ಟಿಕ್ ಬ್ಯಾಗ್‍ಗಳನ್ನು ತೊಟ್ಟು ಸೆಲ್ಫೀ ತೆಗೆದುಕೊಳ್ಳುವುದೇ ಒಂದು ಟ್ರೆಂಡಿಂಗ್ ಆಗಿ ಬೆಳೆದಿದೆಯಂತೆ.
ತೈವಾನ್‍ನಲ್ಲಿ ಈಗ ಯುವಕ ಯುವತಿಯರು ಕೇವಲ ಪ್ಲಾಸ್ಟಿಕ್ ಬ್ಯಾಗ್ ತೊಟ್ಟು ಸೆಲ್ಫೀ ತೆಗೆದುಕೊಳ್ಳುವುದನ್ನೇ ಹವ್ಯಾಸ ಮಾಡಿಕೊಂಡಿದ್ದಾರೆ. ಈ ಸೆಲ್ಫೀ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹಬ್ಬಿದೆ. ಅಲ್ಲದೇ ಇಲ್ಲಿನ ಯುವಜನತೆ ಈ ಪ್ಲಾಸ್ಟಿಕ್ ಬ್ಯಾಗ್ ತೊಟ್ಟು ಬೀದಿಯಲ್ಲಿ ಪೋಸ್ ನೀಡಿ ಸುತ್ತುತ್ತಿದ್ದಾರೆ.