ವಾಷಿಂಗ್ಟನ್: ಮಕ್ಕಳು ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಆದರಲ್ಲೂ ಮಕ್ಕಳ ಆಟ ಎಂದರೆ ನೋಡುವುದೇ ಚೆಂದ. ಈ ಕಾರಣಕ್ಕೆ ಏನೋ ಅಮೆರಿಕದ ಮೃಗಾಲಯದಲ್ಲಿರುವ ಒಂದು ಗೊರಿಲ್ಲಾದ ಮರಿ ಪುಟಾಣಿ ಮಗುವಿನ ಜೊತೆ ಆಡುವ ಮೂಲಕ ಸುದ್ದಿಯಾಗಿದೆ.
ಇತ್ತೀಚಿಗೆ ಓಹಿಯೋ ಮೃಗಾಲಯಕ್ಕೆ ಮಗನೊಂದಿಗೆ ಪೋಷಕರು ಭೇಟಿ ನೀಡಿದ್ದಾರೆ. ಎಲ್ಲ ಪ್ರಾಣಿಗಳನ್ನು ನೋಡಿದ ಬಳಿಕ ಗೊರಿಲ್ಲಾಗಳಿರುವ ಜಾಗಕ್ಕೆ ಬಂದಿದ್ದಾರೆ. ಆದರೆ ಗ್ಲಾಸ್‍ನ ಒಳಗಡೆ ಇದ್ದ ಗೊರಿಲ್ಲಾ ಮರಿಗೆ ಅದು ಏನಾಯ್ತು ಏನೋ.. ಮಗುವನ್ನು ನೋಡಿದ ಕೂಡಲೇ ತಾನು ಮಗುವಿನಂತೆ ಆಟ ಆಡಲು ಮುಂದಾಗಿದೆ.
ಒಟ್ಟು ನಿರತಂರವಾಗಿ ಮಗು ಮತ್ತು ಗೊರಿಲ್ಲ ಮರಿ 40 ಸೆಕೆಂಡ್‍ಗಳ ಆಟವಾಡಿದ್ದು ಇದನ್ನು ಪೋಷಕರು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಸೆರೆಹಿಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.